ಮುದ್ದೇಬಿಹಾಳ(ಮೇ.11): ಲಾಕ್‌ಡೌನ್‌ ಆಗಿದ್ದರಿಂದ ಗೋವಾದಲ್ಲಿ ಸಿಲುಕಿಕೊಂಡಿದ್ದ ಕ್ಷೇತ್ರದ ಜನರನ್ನ  ಸರ್ಕಾರದ ನಿಯಮಗಳ ಅನುಸಾರವೇ ಕಾರ್ಮಿಕರನ್ನು ಕರೆದುಕೊಂಡು ಹೋಗಲೇಬೇಕು ಎಂದು ತಿರ್ಮಾನಿಸಿದ ಶಾಸಕ ಎ. ಎಸ್.ಪಾಟೀಲ್‌ ನಡಹಳ್ಳಿ ಅವರು ಶುಕ್ರುವಾರ ರಾತ್ರಿ ಇಡಿ ಚೋರ್ಲಾ ಚೇಕ್‌ಪೋಸ್ಟ್‌ ಬಳಿಯೇ ಅಲ್ಲಿನ ಕಾರ್ಮಿಕರೊಂದಿಗೆ ಕಾಲ ಕಳೆದಿದ್ದಾರೆ. ಅಲ್ಲದೆ ಅಲ್ಲಿಯೇ ಹತ್ತಿರ ಇರುವ ಮಳಿಗೆಯೊಂದರ ಮುಂದಿನ ಖುಲ್ಲಾ ಜಾಗದಲ್ಲಿ ನಿದ್ದೆ ಮಾಡಿದ್ದಾರೆ. 

ಗೋವಾದಿಂದ ಬಂದಿಳಿದಿರುವ ಎಲ್ಲ ಕಾರ್ಮಿಕರ ಆರೋಗ್ಯ ತಪಾಸಣೆ ನಡೆಸಲಾಗಿದೆ. ಬಳಿಕ ಶಾಸಕ ಎ.ಎಸ್‌.ಪಾಟೀಲ(ನಡಹಳ್ಳಿ)ಯವರು ಪ್ರತಿಯೊಬ್ಬರಿಗೂ ಉಪಹಾರ, ಕುಡಿಯುವ ನೀರು ನೀಡಿದರು. ಮುಂದಿನ 15 ದಿನಗಳವೆರೆಗೆ ಅನುಕೂಲವಾಗುವಂತೆ ಉಚಿತ ದಿನಸಿ ಹಾಗೂ ಆರೋಗ್ಯ ಕಿಟ್‌ ನೀಡಿದ್ದಾರೆ. 

ಕೊರೋನಾ ಭೀತಿ: ಮುದ್ದೇಬಿಹಾಳಕ್ಕೆ 495 ವಲಸೆ ಕಾರ್ಮಿಕರ ಆಗಮನ

ಯಾವುದೇ ಕಾರಣಕ್ಕೂ ಸರ್ಕಾರ ನಿರ್ದೇಶಿಸಿದ ನಿಯಮಗಳನ್ನು ಚಾಚುತಪ್ಪದೇ ಪಾಲಿಸಲು ಬಂದ ಕಾರ್ಮಿಕರಿಗೆ ತಿಳಿಸುವ ಮೂಲಕ ಎಚ್ಚರಿಕೆ ನೀಡಲಾಗಿದೆ. ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಮೂಲಕ ರೋಗದಿಂದ ಪಾರಾಗುವುದರ ಕುರಿತು ಎಲ್ಲ ಜಾಗೃತಿ ಮೂಡಿಸಿ ಆಯಾ ಗ್ರಾಮಗಳಿಗೆ ಕಳುಹಿಸಿಕೊಡಲಾಗಿದೆ ಎಂದು ಶಾಸಕ ಎ.ಎಸ್‌.ಪಾಟೀಲ ನಡಹಳ್ಳಿ ಹೇಳಿದ್ದಾರೆ.