ಅರಸೀಕೆರೆ [ಜ.11]:  ನಗರದಲ್ಲಿ ರೈಲ್ವೆ ಸೇವೆ ಪ್ರಾರಂಭವಾದಾಗಿನಿಂದ ಇದ್ದ ಮಲೇಶ್ವರ ಬಡಾವಣೆಯ ರೈಲ್ವೆ ಗೇಟ್‌ ಅನ್ನು ಭದ್ರತೆಯ ಹೆಸರಿನಲ್ಲಿ ಇಲಾಖೆಯ ಅಧಿಕಾರಿಗಗಳು ಬಂದ್‌ ಮಾಡಿರುವುದರಿಂದ ಈ ಭಾಗದ ನಿವಾಸಿಗಳು ಹಾಗೂ ಸುತ್ತಮುತ್ತಲಿನ ಗ್ರಾಮಸ್ಥರಿಗೆ ತೀವ್ರ ಅನಾನುಕೂಲವಾಗಿದ್ದು, ಈ ಸಂಬಂಧ ಪುನರ್‌ ಪರಿಶೀಲಿಸಿ ಮೇಲ್ಸೇತುವೆ ಅಥವಾ ಅಂಡರ್‌ಪಾಸ್‌ ನಿರ್ಮಿಸಿಕೊಡಬೇಕೆಂದು ನೈರುತ್ಯ ರೇಲ್ವೆ ವಲಯ ವ್ಯವಸ್ಥಾಪಕ ಅಜಯ್‌ ಕುಮಾರ್‌ ಸಿಂಗ್‌ ಅವರಿಗೆ ಶಾಸಕ ಕೆ.ಎಂ ಶಿವಲಿಂಗೇಗೌಡ ಮನವಿ ಮಾಡಿದರು.

ನಗರದ ರೈಲ್ವೆ ನಿಲ್ದಾಣಕ್ಕೆ ಭೇಟಿ ನೀಡಿ ಶುಚಿತ್ವ, ಅಭಿವೃದ್ಧಿ ಕಾಮಗಾರಿಗಳ ಅನುಷ್ಠಾನ ಸೇರಿದಂತೆ ವಿವಿಧ ವಿಭಾಗಗಳಿಗೆ ತೆರಳಿ ಪರಿಶೀಲನೆ ನಡೆಸಿದ ಬಳಿಕ ನೈರುತ್ಯ ರೈಲ್ವೆ ವಲಯ ವ್ಯವಸ್ಥಾಪಕ ಅಜಯ್‌ ಕುಮಾರ್‌ ಸಿಂಗ್‌ ಮತ್ತು ಮೈಸೂರು ವಿಭಾಗೀಯ ರೈಲ್ವೆ ವ್ಯವಸ್ಥಾಪಕಿ ಅಪರ್ಣಾ ಗರ್ಗ್‌ ಅವರನ್ನು ಸಾರ್ವಜನಿಕರೊಡಗೂಡಿ ಭೇಟಿ ಮಾಡಿದ ಶಾಸಕರು, ಮಲ್ಲೇಶ್ವರ ನಗರ ಹಾಗೂ ಕಾಳನಕೊಪ್ಪಲಿಗೆ ಹೋಗುವ ಗೇಟ್‌ ಬಂದ್‌ ಆದಾಗಿನಿಂದ ಗಂಗಾ ನಗರ, ಸುಬ್ರಮಣ್ಯ ನಗರ ಬಡಾವಣೆ ಸೇರಿದಂತೆ ಈ ಭಾಗದಲ್ಲಿ ಬರುವ ಕಾಟೀಕೆರೆ, ಸಂಕೋಡನಹಳ್ಳಿ, ಮೂಡನಹಳ್ಳಿ ಜಾವಗಲ್‌ ಮತ್ತಿತರ ಗ್ರಾಮಗಳ ಜನರಿಗೆ ಈ ರಸ್ತೆ ಮುಖ್ಯರಸ್ತೆಯಾಗಿದೆ. ರೈಲ್ವೆ ಪ್ರಯಾಣಿಕರ ಹಿತ ದೃಷ್ಟಿಯಿಂದ ಮೇಲು ಸೇತುವೆ ನಿರ್ಮಿಸಿಕೊಡಬೇಕೆಂದು ಆಗ್ರಹಿಸಿದರು.

JDS ಶಾಸಕರು ನಮ್ಮ ಕಡೆ ಬರದಂತೆ ನೋಡ್ಕೊಳ್ಳಿ: HDKಗೆ ಬಿಜೆಪಿ ನಾಯಕ ಕಿವಿ ಮಾತು...

ಈ ಸಂಬಂಧ ಪ್ರತಿಕ್ರಿಯಿಸಿದ ನೈರುತ್ಯ ರೈಲ್ವೆ ವಲಯ ವ್ಯವಸ್ಥಾಪಕ ಅಜಯ್‌ ಕುಮಾರ್‌ ಸಿಂಗ್‌ ಅಂಡರ್‌ಪಾಸ್‌ ನಿರ್ಮಿಸಲು ಪರಿಶೀಲನೆ ನಡೆಸುವುದಾಗಿ ಶಾಸಕರಿಗೆ ಭರವಸೆ ನೀಡಿದರು. ಅಲ್ಲದೆ, ಸ್ಥಳದಲ್ಲಿಯೇ ಇದ್ದ ಮೈಸೂರು ಡಿವಿಷನ್‌ ಮ್ಯಾನೇಜರ್‌ ಅಪರ್ಣ ಗರ್ಗ್‌ ಅವರಿಗೆ ವರದಿ ನೀಡುವಂತೆ ಸೂಚನೆ ನೀಡಿದರು.

ಮಹಿಳಾ ಎಸ್‌ಐಯನ್ನೇ ಮಂಚಕ್ಕೆ ಕರೆದ! ಅಶ್ಲೀಲ ಫೊಟೊ ಕಳಿಸಿ ಬ್ಲ್ಯಾಕ್‌ಮೇಲ್‌.

ಶಾಸಕರ ಮೇಲೆ ಮಹಿಳೆ ಮುಟ್ಟಿದ ಆರೋಪ :  ಮಲ್ಲೇಶ್ವರ ನಗರದ ಪರಿಶೀಲನೆಗೆ ತೆರಳಿದ್ದ ಸಂದರ್ಭದಲ್ಲಿ ಸಾವಿರಾರು ಜನ ಸೇರಿದ್ದರಿಂದ ಶಾಸಕರನ್ನು ಹಿಂಬದಿಯಿಂದ ಯಾರೋ ತಳ್ಳಿದ ಘಟನೆ ನಡೆಯಿತು. ಈ ಸಂದರ್ಭದಲ್ಲಿ ಶಾಸಕ ಕೆ.ಎಂ.ಶಿವಲಿಂಗೇಗೌಡ ತಳ್ಳಬೇಡಿ. ಮುಂದೆ ಹೆಣ್ಣುಮಕ್ಕಳಿದ್ದಾರೆ ಎಂದು ಗದರಿಕೊಂಡರು. ಈ ಘಟನೆ ಇಟ್ಟುಕೊಂಡು ಶಾಸಕರ ವಿರೋಧಿಗಳು, ಮೈಸೂರು ವಿಭಾಗೀಯ ರೇಲ್ವೆ ವ್ಯವಸ್ಥಾಪಕಿ ಅಪರ್ಣಾ ಗರ್ಗ್‌ ಅವರನ್ನು ಶಾಸಕರು ಮುಟ್ಟಿದರು ಎಂದು ಅಪಪ್ರಚಾರ ಮಾಡಿದರು.