Asianet Suvarna News Asianet Suvarna News

ಕುದುರೆ ಬಾಯಿಗೆ ಬೆಂಕಿ ಇಟ್ಟ ಕಿಡಿಗೇಡಿಗಳು: ಮೇವು ತಿನ್ನಲು ಆಗದೆ ಮೂಕಪ್ರಾಣಿಯ ನರಳಾಟ

ಸುಟ್ಟಬಾಯಿಯಿಂದ ಸಾರ್ವಜನಿಕ ಪ್ರದೇಶದಲ್ಲಿ ಓಡಾಡುತ್ತಿದ್ದ ಕುದುರೆ| ಕಲಬುರಗಿ ಜಿಲ್ಲೆಯ ಅಫಜಲಪುರ ತಾಲೂಕಿನ ಗೊಬ್ಬೂರ ಗ್ರಾಮದಲ್ಲಿ ನಡೆದ ಘಟನೆ| ಕುದುರೆಗೆ ಪ್ರಾಥಮಿಕ ಚಿಕಿತ್ಸೆ ನೀಡಿ ಗೋಶಾಲೆಗೆ ರವಾನಿಸಿದ ರೈತ| 

Miscreants Set Fire to the Horse Mouth in Kalaburagi grg
Author
Bengaluru, First Published Dec 10, 2020, 3:14 PM IST

ಕಲಬುರಗಿ(ಡಿ.10): ಮೇವು ಅರಸಿ ಹೋಗಿದ್ದ ಕುದುರೆ ಬಾಯಿಗೆ ಕಿಡಿಗೇಡಿಗಳು ಬೆಂಕಿ ಹಚ್ಚಿದ ಘಟನೆ ಜಿಲ್ಲೆಯ ಅಫಜಲಪುರ ತಾಲೂಕಿನ ಗೊಬ್ಬೂರ ಗ್ರಾಮದಲ್ಲಿ ನಡೆದಿದೆ. ಕಿಡಿಗೇಡಿಗಳು ಮೇವು ತಿನ್ನಿಸುವಂತೆ ಮಾಡಿ ಕುದುರೆಯ ಬಾಯಿಗೆ ಬೆಂಕಿ ಹಚ್ಚಿದ್ದಾರೆ. 

ಸುಟ್ಟಬಾಯಿಯಿಂದ ಸಾರ್ವಜನಿಕ ಪ್ರದೇಶದಲ್ಲಿ ಓಡಾಡುತ್ತಿದ್ದ ಮೂಕ ಪ್ರಾಣಿಯ ದಯನೀಯ ಸ್ಥಿತಿ ಕಂಡ ರೈತನೋರ್ವ ಅದಕ್ಕೆ ಪ್ರಾಥಮಿಕ ಚಿಕಿತ್ಸೆ ನೀಡಿ ಗೋಶಾಲೆಗೆ ರವಾನಿಸಿದ್ದಾನೆ. 

ಮೂರು ವರ್ಷ ಅವಿತು ಕುಳಿತಿದ್ದ ಗಂಗೆ ಏಕಾಏಕಿ ಹೊರಚಿಮ್ಮಿ ಅಚ್ಚರಿ..!

ಗಾಯಗೊಂಡ ಕುದುರೆಗೆ ನಂದಿ ಎನಿಮಲ್‌ ವೆಲ್‌ಫೇರ್‌ ಸೊಸೈಟಿ ಗೋಶಾಲೆಯಲ್ಲಿ ಆರೈಕೆ ನೀಡಲಾಗುತ್ತಿದೆ. ಕುದುರೆಯ ಬಾಯಿ ಭಾಗಶಃ ಸುಟ್ಟಿದ್ದು, ಮೇವು ತಿನ್ನಲೂ ಸಾಧ್ಯವಾಗದೆ ನರಳಾಡುತ್ತಿದೆ.
 

Follow Us:
Download App:
  • android
  • ios