Asianet Suvarna News Asianet Suvarna News

ಶಿರಸಿ: ವಿಷ ಬೆರೆಸಿ ಮೂರು ಹಸು ಕೊಂದ ದುರುಳರು

*  ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ ಭೈರುಂಬೆ ಗ್ರಾಮದಲ್ಲಿ ನಡೆದ ಘಟನೆ
*  ಹಿಂಡಿಯ ಜತೆ ವಿಷ ಸೇರಿಸಿ ಆಕಳಿಗೆ ನೀಡಿದ ದುಷ್ಕರ್ಮಿಗಳು
*  ಈ ಸಂಬಂಧ ಶಿರಸಿ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲು 

Miscreants Killed Three Cow at Sirsi in Uttara Kannada grg
Author
Bengaluru, First Published Aug 25, 2021, 10:05 AM IST
  • Facebook
  • Twitter
  • Whatsapp

ಶಿರಸಿ(ಆ.25):  ಮೇಯಲು ಬಿಟ್ಟ ಮೂರು ಆಕಳನ್ನು ದುಷ್ಕರ್ಮಿಗಳು ವಿಷ ಹಾಕಿ ಕೊಂದ ಘಟನೆ ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ ಭೈರುಂಬೆ ಗ್ರಾಮ ಪಂಚಾಯಿತಿಯ ಅರಸಾಪುರ ಬೆಟ್ಟದಲ್ಲಿ ಮಂಗಳವಾರ ನಡೆದಿದೆ.

ಇವು ಇಲ್ಲಿಯ ಸುರೇಶ ಚಲುವಾದಿ ಅವರಿಗೆ ಸೇರಿದ ಆಕಳುಗಳಾಗಿವೆ. ಯಾವ ಕಾರಣಕ್ಕಾಗಿ ದುರುಳರು ಆಕಳನ್ನು ಕೊಂದಿದ್ದಾರೆ ಎಂಬುದು ಸ್ಪಷ್ಟವಾಗಿಲ್ಲ. ಹಿಂಡಿಯ ಜತೆ ವಿಷ ಸೇರಿಸಿ ಆಕಳಿಗೆ ನೀಡಿದ ಕಾರಣ ಪಶುಗಳು ತಿಂದು ಅಸು ನೀಗಿವೆ. ಈ ಪೈಕಿ ಒಂದು ಆಕಳು 8 ತಿಂಗಳ ಗರ್ಭದಲ್ಲಿ ಇತ್ತು ಎಂದು ಪಶು ವೈದ್ಯಕೀಯ ಪರೀಕ್ಷೆಯಿಂದ ತಿಳಿದುಬಂದಿದೆ.

ಶಿರಸಿಯ ದಿನೇಶ ಹೆಗಡೆಗೆ ನಾಸಾ ಪ್ಯೂಚರ್‌ ಇನ್ವೆಸ್ಟಿಗೇಟರ್‌ ಪ್ರಶಸ್ತಿ

ಸ್ಥಳಕ್ಕೆ ಆಗಮಿಸಿದ ಭೈರುಂಬೆ ಗ್ರಾಮ ಪಂಚಾಯಿತಿ ಅಧ್ಯಕ್ಷ ರಘು ನಾಯ್ಕ, ತಕ್ಷಣವೇ ತಪ್ಪಿತಸ್ಥರನ್ನು ಪತ್ತೆ ಹಚ್ಚಿ ಬಂಧಿಸುವಂತೆ ಆಗ್ರಹಿಸಿದ್ದಾರೆ. ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
 

Follow Us:
Download App:
  • android
  • ios