*  ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲೂಕಿನ ಹಿರೇಹಳ್ಳಿ‌ ಗ್ರಾಮದಲ್ಲಿ ನಡೆದ ಘಟನೆ*  ಹೂಗಳನ್ನು ಚೆಲ್ಲಾಪಿಲ್ಲಿ ಮಾಡಿ ಪರಾರಿಯಾದ ಕಿಡಿಗೇಡಿಗಳು *  ತಳಕು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಘಟನೆ  

ಚಿತ್ರದುರ್ಗ(ಸೆ.11):  ಪ್ರತಿಷ್ಠಾಪನೆ ಮಾಡಿದ್ದ ಗಣಪತಿ ಮೂರ್ತಿಯನ್ನ ಕಿಡಿಗೇಡಿಗಳು ಧ್ವಂಸ ಮಾಡಿದ ಘಟನೆ ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲೂಕಿನ ಹಿರೇಹಳ್ಳಿ‌ ಗ್ರಾಮದಲ್ಲಿ ನಿನ್ನೆ ರಾತ್ರಿ(ಶುಕ್ರವಾರ) ನಡೆದಿದೆ. 

ನಿನ್ನೆ ಗ್ರಾಮದ ಯುವಕರು ಗಣೇಶ ಮೂರ್ತಿಯನ್ನ ಪ್ರತಿಷ್ಠಾಪನೆ ಮಾಡಿದ್ದರು. ಗಣಪತಿ ಮೂರ್ತಿಯನ್ನ ಕೆಳಗೆ ಎಸೆದು, ಅಲಂಕಾರಕ್ಕೆ ಬಳಸಿದ್ದ ಹೂ ಚೆಲ್ಲಾಪಿಲ್ಲಿ ಮಾಡಿ ಕಿಡಿಗೇಡಿಗಳು ಪರಾರಿಯಾಗಿದ್ದಾರೆ. 

ಚಿತ್ರದುರ್ಗ: ಸ್ಕೂಟಿ ಚಾಲನೆ ವೇಳೆಯೇ ಪತ್ನಿಯನ್ನ ಹತ್ಯೆಗೈದ ಪಾಪಿ ಪತಿ, ಕಾರಣ?

ಕಿಡಿಗೇಡಿಗಳ ಈ ಕೃತ್ಯಕ್ಕೆ ಹಿರೇಹಳ್ಳಿ ಗ್ರಾಮಸ್ಥರಿಂದ ಭಾರೀ ಆಕ್ರೋಶ ವ್ಯಕ್ತವಾಗಿದೆ. ತಳಕು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.