Asianet Suvarna News Asianet Suvarna News

ಬಾಗಲಕೋಟೆ: ಅ​ಮಾ​ವಾ​ಸ್ಯೆ ದಿನವೇ ಹೂತ ಶವ ಹೊತ್ತೊಯ್ದ ದುಷ್ಕ​ರ್ಮಿ​ಗಳು..!

ಫೆ. 21ರಂದು ಕ್ಯಾನ್ಸರ್‌ ರೋಗದಿಂದ ಸಾವಿಗೀಡಾಗಿದ್ದ ವ್ಯಕ್ತಿ| ಮೃತ ವೃದ್ಧನನ್ನು ಅಮಾವಾಸ್ಯೆಯ ದಿನವೇ ತಮ್ಮ ಒಡೆತನದ ಜಮೀನಿನಲ್ಲಿ ಅಂತ್ಯಕ್ರಿಯೆ ಮಾಡಲಾ​ಗಿತ್ತು| ಐದು ತಿಂಗಳ ಬಳಿಕ ಭೀಮನ ಅಮಾವಾಸ್ಯೆಯ ದಿನವಾದ ಜು. 21ರಂದು ಈ ಶವವನ್ನು ಹೊತ್ತೊಯ್ದಿದ ದುಷ್ಕರ್ಮಿಗಳು|

Miscreants Dead Body was Caried in Mudhol in Bagalkot District
Author
Bengaluru, First Published Jul 23, 2020, 2:14 PM IST

ಬಾಗಲಕೋಟೆ(ಜು.23): ಅಮಾವಾಸ್ಯೆ ದಿನದಂದು ಹೂತಿದ್ದ ಶವವನ್ನು ದುಷ್ಕರ್ಮಿಗಳು ಹೊರ ತೆಗೆದು ಹೊತ್ತೊಯ್ದ ಘಟನೆ ಜಿಲ್ಲೆಯ ಮುಧೋಳ ತಾಲೂಕಿನ ರೂಗಿ ಗ್ರಾಮದಲ್ಲಿ ಸಂಭ​ವಿ​ಸಿದೆ. 

ಶಿವರಾತ್ರಿಯ ಅಮಾವಾಸ್ಯೆಯಾದ ಫೆ. 21ರಂದು ಕ್ಯಾನ್ಸರ್‌ ರೋಗದಿಂದ ಸಾವಿಗೀಡಾಗಿದ್ದ ರಾಮಪ್ಪ ಎಂಬ 63 ವರ್ಷದ ವೃದ್ಧನನ್ನು ಅಮಾವಾಸ್ಯೆಯ ದಿನವೇ ತಮ್ಮ ಒಡೆತನದ ಜಮೀನಿನಲ್ಲಿ ಅಂತ್ಯಕ್ರಿಯೆ ಮಾಡಲಾ​ಗಿತ್ತು. ಆದರೆ, ಐದು ತಿಂಗಳ ಬಳಿಕ ಮೊನ್ನೆ ಅಂದರೆ ಭೀಮನ ಅಮಾವಾಸ್ಯೆಯ ದಿನವಾದ ಜು. 21ರಂದು ಈ ಶವವನ್ನು ದುಷ್ಕರ್ಮಿಗಳು ಹೊತ್ತೊಯ್ದಿದ್ದಾರೆ. 

ಹುಬ್ಬಳ್ಳಿ: ಪಾಕಿಸ್ತಾನ ವಿರುದ್ಧ ಗೆದ್ದು ಕೊರೋನಾಗೆ ಸೋತ ಯೋಧ!

ವಾಮಾಚಾರ, ನಿ​ಧಿ ಆಸೆಗೆಂದು ಹೂತಿದ್ದ ಶವವನ್ನು ಹೊತ್ತೊಯ್ದಿರುವ ಸಾಧ್ಯತೆ ಇದೆ. ಹೂತ ಮೃತದೇಹ ಐದು ತಿಂಗಳವಾಗಿದ್ದರಿಂದ ಅಸ್ಥಿಪಂಜರವಾಗಿರುವ ಸಾಧ್ಯತೆ ಇದ್ದು, ಅದನ್ನು ವಾಮಾಚಾರಕ್ಕೆ ಬಳಸಿಕೊಳ್ಳುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಈ ಪ್ರಕರಣ ಲೋಕಾಪೂರ ಪೊಲೀಸ್‌ ಠಾಣೆಯ ವ್ಯಾಪ್ತಿಯಲ್ಲಿ ನಡೆದಿದೆ.
 

Follow Us:
Download App:
  • android
  • ios