Asianet Suvarna News Asianet Suvarna News

Mangaluru: ಭಗವಾಧ್ವಜ ಹಾನಿಗೈದವರ ವಿರುದ್ದ ಶಾಸಕ ಹರೀಶ್ ಪೂಂಜಾ ಕಿಡಿ!

ತಾಕತ್ತಿದ್ರೆ ನಾಲ್ಕು ಜನರ ಎದುರಲ್ಲಿ ಭಗವಾಧ್ವಜ ಕಿತ್ತುಹಾಕಿ, ನಿಮ್ಮ ಕೈ ಕಾಲು ಮುರಿಯಲು ನಮ್ಮ ಯುವಕರು ಸಿದ್ದವಾಗಿದ್ದಾರೆ ಎಂದು ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ಕಿಡಿಗೇಡಿಗಳಿಗೆ ಖಡಕ್ ಎಚ್ಚರಿಕೆ ನೀಡಿದ್ದಾರೆ.

Mischief Maker Damaged The Bhagavad Dwaja In Kokkada Near Belthangady gvd
Author
Bangalore, First Published Apr 18, 2022, 12:30 PM IST

ಮಂಗಳೂರು (ಏ.18): ತಾಕತ್ತಿದ್ರೆ ನಾಲ್ಕು ಜನರ ಎದುರಲ್ಲಿ ಭಗವಾಧ್ವಜ (Bhagavad Dwaja) ಕಿತ್ತುಹಾಕಿ, ನಿಮ್ಮ ಕೈ ಕಾಲು ಮುರಿಯಲು ನಮ್ಮ ಯುವಕರು ಸಿದ್ದವಾಗಿದ್ದಾರೆ ಎಂದು ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ (Harish Poonja) ಕಿಡಿಗೇಡಿಗಳಿಗೆ ಖಡಕ್ ಎಚ್ಚರಿಕೆ ನೀಡಿದ್ದಾರೆ. ದ.ಕ ಜಿಲ್ಲೆಯ ಬೆಳ್ತಂಗಡಿ (Belthangady) ತಾಲೂಕಿನ ಕೊಕ್ಕಡ (Kokkada) ಗ್ರಾಮದ ಉಪ್ಪಾರಪಳಿಕೆ ಎಂಬಲ್ಲಿ ಇತ್ತೀಚೆಗೆ ಸ್ಥಳೀಯ ಹಿಂದೂ (Hindu) ಯುವಕರು ಸೇರಿಕೊಂಡು ಕಟ್ಟೆ ನಿರ್ಮಿಸಿ ಕೇಸರಿ ಧ್ವಜ ಪ್ರತಿಷ್ಠಾಪಿಸಿದ್ದರು. ನಿನ್ನೆ ರಾತ್ರಿ ಕಿಡಿಗೇಡಿಗಳು ಭಗವಾಧ್ವಜ ಮತ್ತು ಕಟ್ಟೆಗೆ ಹಾನಿ ಮಾಡಿ  ದುಷ್ಕೃತ್ಯ ಮೆರೆದಿದ್ದಾರೆ. ಕಟ್ಟೆಯನ್ನು ಹಾನಿಗೈದು ಕಂಬ ಹಾಗೂ ಭಗವಾಧ್ವಜವನ್ನು ಕೆಳಕ್ಕುರುಳಿಸಿ ಕೃತ್ಯ ಎಸಗಿದ್ದಾರೆ. 

ಇದರ ವಿರುದ್ದ ಬೆಳ್ತಂಗಡಿ ಬಿಜೆಪಿ ಶಾಸಕ ಹರೀಶ್ ಪೂಂಜಾ ಎಚ್ಚರಿಕೆ ನೀಡಿದ್ದು, ಸಭಾ ಕಾರ್ಯಕ್ರಮದ ವೇದಿಕೆಯಲ್ಲೇ ಕಿಡಿಗೇಡಿಗಳಿಗೆ ವಾರ್ನ್ ‌ಮಾಡಿದ್ದಾರೆ. 'ತಾಕತ್ತಿದ್ರೆ ನಾಲ್ಕು ಜನರ ಎದುರಲ್ಲಿ ಕಿತ್ತುಹಾಕಿ, ನಿಮ್ಮ ಕೈ ಕಾಲು ಮುರಿಯಲು ನಮ್ಮ ಯುವಕರು ಸಿದ್ದವಾಗಿದ್ದಾರೆ. ಭಗಾವಧ್ವಜವು ಹಿಂದುಗಳ ಶಕ್ತಿ ಮತ್ತು ಪ್ರೇರಣೆಯ ಸಂಕೇತ. ನಮ್ಮ ಹೃದಯದಲ್ಲಿ ಅದಕ್ಕೆ ಆರಾಧನೆಯ ಸ್ಥಾನವನ್ನು ನೀಡಿದೆ. ಹಾಗಾಗಿ ಮತ್ತದೇ ಹಾಳುಗೆಡಹಿದ ಜಾಗದಲ್ಲಿ ಭಗವಾಧ್ವಜವನ್ನು ಹಾರಾಡುವಂತೆ ಮಾಡುತ್ತೇವೆ. ಮುಂದೆ ಇಂತಹ ದುಷ್ಕೃತ್ಯ ಮರುಕಳಿಸಿದರೆ ಪರಿಣಾಮ ಬೇರೆ ರೀತಿಯೇ ಆಗಿರುತ್ತದೆ' ಎಂದು ಹಿಂದೂ ಜಾಗರಣಾ ವೇದಿಕೆ ಕಾರ್ಯಕ್ರಮದಲ್ಲಿ ತುಳುವಿನಲ್ಲಿ ಪೂಂಜಾ ವಾರ್ನಿಂಗ್ ಮಾಡಿದ್ದಾರೆ.

ಈಶ್ವರಪ್ಪನವರೇ ಧರ್ಮಸ್ಥಳಕ್ಕೆ ಬಂದು ಆಣೆ ಮಾಡುವ ತಾಕತ್ ಇದ್ಯಾ?: ಹಿಂದೂ ಮಹಾಸಭಾ ಸವಾಲ್

ಕೆಂಪುಕೋಟೆಯಲ್ಲಿ ಭಗವಾಧ್ವಜ: ಇತ್ತೀಚೆಗೆ ನಡೆದ ವಿಧಾನಸಭಾ ಅಧಿವೇಶನದಲ್ಲಿ ಸಚಿವ ಈಶ್ವರಪ್ಪ ಅವರು ದೆಹಲಿಯ ಕೆಂಪುಕೋಟೆಯ ಮೇಲೆ ಭಗವಾಧ್ವಜ ಹಾರಿಸುವ ಬಗ್ಗೆ ವಿಶ್ವಾಸದ ಮಾತುಗಳನ್ನಾಡಿದ್ದರು. ಅದಕ್ಕೆ ಬೆಂಬಲವಾಗಿ ಬೆಳ್ತಂಗಡಿ ಶಾಸಕ ಹರೀಶ್‌ ಪೂಂಜ ಅವರು ಈಶ್ವರಪ್ಪ ಅವರನ್ನು ಬೆಂಬಲಿಸಿ ತಾನೂ ಕೆಂಪುಕೋಟೆಯ ಮೇಲೆ ಭಗವಾಧ್ವಜ ಹಾರಿಸುವ ಸಂಕಲ್ಪ ಮಾಡಿದ್ದಾರೆ. ಶಿವಮೊಗ್ಗದ ಹರ್ಷ ಹತ್ಯೆ ಖಂಡಿಸಿ ಬೆಳ್ತಂಗಡಿ ಬಸ್‌ ನಿಲ್ದಾಣದಲ್ಲಿ ನಡೆದ ಹಿಂದೂ ಜನಜಾಗೃತಿ ಸಮಿತಿ ನಡೆಸಿದ ಪ್ರತಿಭಟನೆಯಲ್ಲಿ ಶಾಸಕರು ಈ ಸಂಕಲ್ಪ ಮಾಡಿದ್ದಾರೆ. ‘ಬೆಳ್ತಂಗಡಿ ಶಾಸಕನಾಗಿ ನಾನು ಹೇಳ್ತಾ ಇದ್ದೇನೆ, ಈ ಹಿಂದೂ ಸಮಾಜ ಕೆಂಪು ಕೋಟೆಯ ಮೇಲೆ ಭಗವಾಧ್ವಜ ಹಾರಿಸಿಯೇ ಸಿದ್ಧ’ ಎಂದು ತುಳು ಭಾಷೆಯಲ್ಲಿ ಹರೀಶ್‌ ಪೂಂಜಾ ಮಾಡಿದ ಭಾಷಣದ ತುಣುಕು ಈಗ ವೈರಲ್‌ ಆಗಿದೆ.

Mangaluru: ನಿರ್ಬಂಧದ ಮಧ್ಯೆ ದೈವಗಳಿಂದಲೇ ಮುಸಲ್ಮಾನರ ವ್ಯಾಪಾರಕ್ಕೆ ಚಾಲನೆ..!

ಕೆಂಪುಕೋಟೆಯ ಮೇಲೆ ಭಗವಾಧ್ವಜ ಹಾರಿಸೋದು ರಾಷ್ಟ್ರಧ್ವಜದ ಕೆಳಗೆ. ಕೆಂಪುಕೋಟೆಯ ಮೇಲೆ ರಾಷ್ಟ್ರ ಧ್ವಜದ ಕೆಳಗೆ ಭಗವಾಧ್ವಜ ಹಾರಿಸೋದನ್ನ ಯಾವ ಪಕ್ಷದಿಂದಲೂ ತಪ್ಪಿಸೋದಕ್ಕೆ ಸಾಧ್ಯವೇ ಇಲ್ಲ. ಇದು ಭಾರತೀಯ ಜನತಾ ಪಾರ್ಟಿ ಮತ್ತು ಹಿಂದೂ ಸಮಾಜದ ಸಂಕಲ್ಪ. ದೇಶಕ್ಕೆ ಸ್ವಾತಂತ್ರ್ಯ ಸಿಗಲು ಬಾಲಗಂಗಾಧರ ತಿಲಕರು ಭಗವಾಧ್ವಜ ಎದುರಿಟ್ಟು ಹೋರಾಟ ಮಾಡಿದ್ರು. ಅದಕ್ಕೂ ಮೊದಲು ಹಿಂದೂ ಸಮಾಜದ ಶಕ್ತಿಯಾಗಿದ್ದ ಶಿವಾಜಿ ಮಹಾರಾಜರೂ ಭಗವಾದಡಿಯಲ್ಲೇ ಹೋರಾಟ ಮಾಡಿದ್ದಾರೆ ಎಂದು ಉದಾಹರಣೆ ನೀಡುವ ಮೂಲಕ ತಮ್ಮ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದಾರೆ.

Follow Us:
Download App:
  • android
  • ios