ರಾಜ್ಯದ ಹಲವೆಡೆ ರಾಘವೇಂದ್ರ ಸ್ವಾಮಿ ಆರಾಧನಾ ಮಹೋತ್ಸವ ನಡೆಯತ್ತಿದೆ. ಈ ನಡುವೆ ಹಾವೇರಿಯ ರಾಯರ ವೃಂದಾವನದಲ್ಲಿ ಸ್ವತಃ ರಾಯರೇ ದರ್ಶನ ನೀಡಿದ್ದಾರೆ. ಏನಿದು ಸುದ್ದಿ ಮುಂದಕ್ಕೆ ಓದಿ...
ಹಾವೇರಿ[ಆ.28] ಹಾವೇರಿಯ ರಾಘವೇಂದ್ರ ಸ್ವಾಮಿಗಳ ಮಠದ ರಾಯರ ವೃಂದಾವನದಲ್ಲಿ ಸೋಮವಾರ ರಾಘವೇಂದ್ರ ಸ್ವಾಮಿಗಳ ಛಾಯೆ ಕಾಣಿಸಿಕೊಂಡ ಸುದ್ದಿ ನಗರದಲ್ಲಿ ಕಾಳ್ಗಿಚ್ಚಿನಂತೆ ಹರಡಿ ಭಕ್ತರು ತಂಡೋಪತಂಡವಾಗಿ ಆಗಮಿಸಿ ದರ್ಶನ ಪಡೆದಿದ್ದಾರೆ.
ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ
ಇಲ್ಲಿಯ ರಾಘವೇಂದ್ರ ಮಠದಲ್ಲಿ ಆರಾಧನಾ ಮಹೋತ್ಸವದ ಮಧ್ಯಾರಾಧನೆ ಬೆಳಗ್ಗೆಯಿಂದಲೇ ನಡೆದಿತ್ತು. ಸುಮಾರು 7 ಗಂಟೆ ವೇಳೆಗೆ ರಾಯರ ವೃಂದಾವನಕ್ಕೆ ಅಭಿಷೇಕ, ಅಷ್ಟೋತ್ತರ ನಾಮಾವಳಿ ಸಹಿತವಾಗಿ ಪೂಜಾ ಕಾರ್ಯಕ್ರಮ ನಡೆದಿತ್ತು.
ಆ ಸಂದರ್ಭದಲ್ಲಿ ಅಲ್ಲಿದ್ದ ಭಕ್ತರಿಗೆ ವೃಂದಾವನದಲ್ಲಿ ಸೂಕ್ಷ್ಮವಾಗಿ ರಾಯರ ಛಾಯೆ ಕಾಣಿಸಿದೆ.ಯರಂತೆ ಕಾಣುವ ಮುಖಭಾವ, ದೇಹ ಕಾಣಿಸಿಕೊಂಡಿದ್ದು ಭಕ್ತರನ್ನು ಪುಳಕಿತಗೊಳಿಸಿತು. ಈಸುದ್ದಿ ನಗರದೆಲ್ಲೆಡೆ ಹರಡಿ ತಂಡೋಪತಂಡವಾಗಿ ಆಗಮಿಸಿ ಆ ದೃಶ್ಯವನ್ನು ಕಣ್ಣು ತುಂಬಿಕೊಂಡರು.
