ಹಾನಗಲ್ಲದ ಪ್ರತಿಭಾವಂತ ವಿದ್ಯಾರ್ಥಿನಿ ಬಿಂದು ಶ್ರೀ ಪವಾರ ಅವರು ನೀಟ್ ಪರೀಕ್ಷೆಯಲ್ಲಿ 668 ಅಂಕ ನಿರೀಕ್ಷಿಸಿದ್ದರು, ಆದರೆ ಅವರಿಗೆ -11 ಅಂಕ ಬಂದಿದೆ. ತಮ್ಮ ಓಎಂಆರ್ ಶೀಟ್ ಬದಲಾಗಿದೆ ಮತ್ತು ಹೆಬ್ಬೆಟ್ಟಿನ ಗುರುತು ಹೊಂದಿಕೆಯಾಗುತ್ತಿಲ್ಲ ಎಂದು ಆರೋಪಿಸಿ, ಅವರು ರಾಷ್ಟ್ರೀಯ ಪರೀಕ್ಷಾ ಏಜೆನ್ಸಿಗೆ ದೂರು ನೀಡಿ ನ್ಯಾಯಕ್ಕಾಗಿ ಆಗ್ರಹಿಸಿದ್ದಾರೆ.
ಹಾವೇರಿ: ನೀಟ್ ಪರೀಕ್ಷೆಯಲ್ಲಿ ಹಾವೇರಿ ಜಿಲ್ಲೆಯ ಹಾನಗಲ್ಲ ವಿದ್ಯಾರ್ಥಿನಿಗೆ ಓಎಂಆರ್ ಸೀಟ್‌ನಲ್ಲಿ ಬರೀ -11 ಅಂಕ ಬಂದಿದ್ದು, ಹೆಬ್ಬಟ್ಟಿನ ಗುರುತು ಕೂಡಾ ಓವರ್ ಲ್ಯಾಪ್ ಆಗಿದೆ ಎಂದು ವಿದ್ಯಾರ್ಥಿನಿ ದೂರಿದ್ದಾರೆ.
ವಿದ್ಯಾರ್ಥಿನಿ ಬಿಂದು ಶ್ರೀ ಜಗದೀಶ ಪವಾರ ಅವರಿಗೆ ಅನ್ಯಾಯವಾಗಿದ್ದು, ಅವರು ಈ ಕುರಿತು ನ್ಯಾಶನಲ್ ಟೆಸ್ಟಿಂಗ್ ಏಜೆನ್ಸಿಗೆ ಮೇಲ್‌ನಲ್ಲಿ ದೂರಿದ್ದಾರೆ. ವಿದ್ಯಾರ್ಥಿನಿ ಹಾವೇರಿ ಗಾಂಧಿಪುರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಪರೀಕ್ಷೆ ಬರೆದಿದ್ದಾರೆ.
720ಕ್ಕೆ ಕನಿಷ್ಠ 668 ಅಂಕ ಬರಲೇಬೇಕು
ನೀಟ್ ಪರೀಕ್ಷೆಯಲ್ಲಿ ನಾನು ತುಂಬಿದ ಓಎಂಆರ್ ಸೀಟ್ ಅಂಕ ನನಗೆ ಬಂದಿಲ್ಲ. ನಾನು ವೆಬ್‌ಸೈಟ್‌ನಲ್ಲಿ ತರಿಸಿಕೊಂಡ ಓಎಂಆರ್ ಸೀಟ್ ನನ್ನದಲ್ಲವೇ ಅಲ್ಲ, ನಾನು ಪರೀಕ್ಷೆಗೆ ಹಾಜರಾದ ಸಮಯ, ಹೊರಬಂದ ಸಮಯ, ಓಎಂಆರ್ ಸೀಟ್‌ನಲ್ಲಿ ಹೊಂದಾಣಿಕೆ ಆಗುತ್ತಿಲ್ಲ. ಅಲ್ಲದೇ ನನ್ನ ಹೆಬ್ಬೆಟ್ಟಿನ ಗುರುತು ಕೂಡಾ ಓವರ್ ಲ್ಯಾಪ್ ಆಗಿದೆ. ನನಗೆ 720ಕ್ಕೆ ಕನಿಷ್ಠ 668 ಅಂಕ ಬರಲೇಬೇಕು, ಆದರೆ ಬಂದದ್ದು -11 ಅಂಕ ಇದು ನನ್ನ ಫಲಿತಾಂಶದ ಮೇಲೆ ಮಾಡಿದೆ ಎಂದಿದ್ದಾರೆ.
SSLCಯಲ್ಲಿ ಶೇ.98 ಮತ್ತು ಪಿಯುಸಿಯಲ್ಲಿ ಶೇ.95
ಎಸ್ಸೆಸ್ಸೆಲ್ಸಿಯಲ್ಲಿ ಶೇ. 98 ಅಂಕ ಪಡೆದಿದ್ದೇನೆ. ಪಿಯುಸಿ ವಿಜ್ಞಾನದಲ್ಲಿ ಶೇ. 95 ಬಂದಿವೆ. ಇಷ್ಟೆದಲ್ಲರ ನಡುವೆ ನಾನು ಪರಿಶ್ರಮಪಟ್ಟು ಓದಿದ ಫಲಿತಾಂಶ ನನಗೆ ಸಿಗಲಿಲ್ಲ, ಎಲ್ಲೋ ನಡೆದ ಮೋಸ ನನ್ನ ಭವಿಷ್ಯದ ಮೇಲೆ ಆಟವಾಡಿದೆ. ಈ ಪರೀಕ್ಷೆ ವ್ಯವಸ್ಥೆಯ ಮೇಲೆ ನನಗೆ ವಿಶ್ವಾಸವಿಲ್ಲ. ಈ ವಿಷಯವನ್ನು ಸಮಗ್ರ ತನಿಖೆ ಮಾಡಿ ನನಗೆ ನ್ಯಾಯ ಒದಗಿಸಬೇಕು. ಇದಕ್ಕೆ ಸಂಬಂಧಿಸಿದಂತೆ ನ್ಯಾಶನಲ್ ಟೆಸ್ಟಿಂಗ್ ಏಜೆನ್ಸಿ ಅವರಿಗೆ ಜು. 22ರಂದು ಈ ಓಎಂಆರ್ ಸೀಟ್ ನನ್ನದಲ್ಲ ಹಾಗೂ ಫಲಿತಾಂಶವೂ ನನ್ನದಲ್ಲ ಎಂದು ಸಲ್ಲಿಸಿದ ದೂರಿಗೆ ಯಾವುದೇ ಪ್ರತಿಕ್ರಿಯೆ ಸಿಕ್ಕಿಲ್ಲ. ಹೆಲ್ಪಲೈನ್ ನಂಬರ್‌ಗೆ 1 ಸಾವಿರ ಬಾರಿ ಫೋನಾಯಿದ್ದರೂ ನನ್ನ ಪೋನ್ ಕರೆ ಸ್ವೀಕರಿಸಿಲ್ಲ. ಪರೀಕ್ಷಾ ಪ್ರಾಧಿಕಾರ ಹಾಗೂ ಕೇಂದ್ರ ಸರ್ಕಾರ ಶಿಕ್ಷಣ ಇಲಾಖೆ, ಸತ್ಯವನ್ನು ಪರಿಶೀಲಿಸಿ ನನಗೆ ನ್ಯಾಯಕೊಡಿಸುತ್ತದೆ. ನನ್ನದೇ ಆದ ಓಎಂಆರ್ ಸೀಟ್ ನನಗೆ ಸಿಕ್ಕು 668 ಅಂಕ ಪಡೆದಿದ್ದು, ನನಗೆ ಬಯಸಿದ ಶಿಕ್ಷಣಕ್ಕೆ ಅವಕಾಶ ಸಿಗುತ್ತದೆ ಎಂದು ನಂಬಿದ್ದೇನೆ. ನನ್ನ ನಂಬಿಕೆಗೆ ಮೋಸವಾಗುದಿಲ್ಲ ಎಂಬ ಪೂರ್ಣವಿಶ್ವಾಸವಿದೆ. ಆದರೆ, ನ್ಯಾಯವೇ ಗೆಲ್ಲಬೇಕು ಎಂದು ಬಿಂದುಶ್ರೀ ಪವಾರ ಅವರು ಕನ್ನಡಪ್ರಭಕ್ಕೆ ಅಳಲು ತೋಡಿಕೊಂಡಿದ್ದಾರೆ.
ಇದನ್ನೂ ಓದಿ: ಕೆಲಸ ಹುಡುಕೋರಿಗೆ ಗುಡ್ ನ್ಯೂಸ್: ಜುಲೈ 29 ರಂದು ಬೆಂಗಳೂರಿನಲ್ಲಿ ಖಾಸಗಿ ಕಂಪನಿಗಳ ನೇರ ಸಂದರ್ಶನ!
ನನ್ನ ಮಗಳು ಪ್ರತಿಭಾವಂತೆ, ಹಿಂದಿನ ಯಾವ ಪರೀಕ್ಷೆಯಲ್ಲೂ ಆಕೆಗೆ ನಿರೀಕ್ಷೆಗಿಂತ ಕಡಿಮೆ ಅಂಕ ಬಂದಿಲ್ಲ. ಈ ಬಾರಿ ನೀಟ್‌ನಲ್ಲಿ ಯಶಸ್ವಿಯಾಗುತ್ತಾಳೆ ಎಂಬ ಪೂರ್ಣವಿಶ್ವಾಸ ಇನ್ನು ಇದೆ. ನ್ಯಾಯಕೊಡಿಸಬೇಕಾದ ಪರೀಕ್ಷಾ ಪ್ರಾಧಿಕಾರದ ಮೇಲೆ ಇನ್ನು ನಂಬಿಕೆ ಇಟ್ಟಿದ್ದೇನೆ. ಇದು ನನ್ನ ಮಗಳ ಓಎಂಆರ್ ಸೀಟ್ ಅಲ್ಲ. ಪರಿಶೀಲಿಸಿ ನ್ಯಾಯ ಒದಗಿಸಬೇಕು ಎಂದು ಬಿಂದುಶ್ರೀ ತಂದೆ ಜಗದೀಶ್ ಪವಾರ್ ಆಗ್ರಹಿಸಿದ್ದಾರೆ.
ಇದನ್ನೂ ಓದಿ: BMTC ಪ್ರಯಾಣಿಕರೇ, ವಾಂತಿ ಬರ್ತಿದೆ, ಕಿಟಕಿ ಸೀಟ್ ಬಿಟ್ಕೊಡಿ ಅಂತ ಜನರು ಬಂದ್ರೆ ಹುಷಾರ್!


