Asianet Suvarna News Asianet Suvarna News

ಅಪ್ರಾಪ್ತೆಯನ್ನು ಪ್ರೀತಿಸಿ ಮದುವೆ - ಮಗು ಜನನದ ಬಳಿಕ ಗಂಡ ಅರೆಸ್ಟ್

  •  ಅಪ್ರಾಪ್ತ ಬಾಲಕಿಯನ್ನು ಪ್ರೀತಿಸಿ ಮದುವೆಯಾಗಿ ಹೆಣ್ಣು ಮಗುವಿನ ಜನನ
  • ಮಗುವಿನ ಜನನದ ನಂತರ ಸಿಡಿಪಿಒ ದೂರಿನ ಮೇರೆಗೆ ಪತಿ ಪೋಸ್ಕೋ ಕಾಯ್ದೆಯಡಿ ಬಂಧನ
minor girl Husband arrested after baby birth in tumkur snr
Author
Bengaluru, First Published Oct 14, 2021, 11:49 AM IST

ಕೊರಟಗೆರೆ (ಅ.14):  ಅಪ್ರಾಪ್ತ ಬಾಲಕಿಯನ್ನು (Minor Girl) ಪ್ರೀತಿಸಿ ಮದುವೆಯಾಗಿ (Marriage) ಹೆಣ್ಣು ಮಗುವಿನ (Baby Girl) ಜನನದ ನಂತರ ಸಿಡಿಪಿಒ (CDPO) ದೂರಿನ ಮೇರೆಗೆ ಪತಿಯನ್ನು ಪೋಸ್ಕೋ  (POSCO) ಕಾಯ್ದೆಯಡಿ ಬಂಧಿಸಿರುವ ಘಟನೆ ತಾಲೂಕು ಪೊಲೀಸ್ (Police) ಠಾಣಾ ವ್ಯಾಪ್ತಿಯಲ್ಲಿ ಜರುಗಿದೆ. 

ತಾಲೂಕಿನ ಇರಕಸಂದ್ರ ಕಾಲೋನಿಯ ರಾಮಕೃ ಷ್ಣಯ್ಯನ ಮಗನಾದ ರಮೇಶ್ ಎಂಬುವನೇ ಪೋಸ್ಕೋ ಕಾಯ್ದೆಯಡಿ ಬಂಧಿತರಾಗಿರುವ (Arrest) ಆರೋಪಿಯಾಗಿದ್ದು, ಹೆರಿಗೆಯ ನಂತರ ಮಹಿಳಾ ಮತ್ತು ಮಕ್ಕಳ ಇಲಾಖೆಯ (Department of Women and Child Development) ಅಪ್ರಾಪ್ತ ಬಾಲಕಿಯ ಮದುವೆ ಬಗ್ಗೆ ದೂರು ನೀಡಿದೆ ಎನ್ನಲಾಗಿದೆ.

ಬಾಲಕಿಗೆ ಬಲವಂತದ ಬಾಲ್ಯ ವಿವಾಹ : ಮಗುವಿಗೆ ಜನ್ಮ ನೀಡಿದ ಬಳಿಕ ಬೆಳಕಿಗೆ

 ರಮೆಶ್ ಆಟೋ ಡ್ರೈವರ್ (Auto Driver) ಆಗಿದ್ದು, ಪ್ರೀತಿಸಿ ಮದುವೆಯಾಗಿದ್ದಾನೆ ಎನ್ನಲಾಗಿದೆ. ಈತ ಅಪ್ರಾಪ್ತ ಬಾಲಕಿಯನ್ನು ಮದುವೆಯಾಗಿ ಕೊರಟಗೆರೆ ಮಾರುತಿ ಆಸ್ಪತ್ರೆಯಲ್ಲಿ ಹೆರಿಗೆಯಾದ (Delivery) ಬಳಿಕ ಮಹಿಳಾ ಮತ್ತು ಮಕ್ಕಳ ಇಲಾಖೆಗೆ ಮಾಹಿತಿ ರವಾನೆಯಾಗಿದೆ. 

ಅಲ್ಲಿನ ಸಿ.ಡಿ.ಪಿಓ ದೂರಿನ ಮೇರೆಗೆ ಕೋಳಾಲ ಪೊಲೀಸ್ ಠಾಣೆಯಲ್ಲಿ ಫೋಸ್ಕೋ ಕಾಯ್ದೆಯಡಿ ಪ್ರಕರಣ ದಾಖಲಿಸಿ ಆರೋಪಿನ್ನು ವಶಕ್ಕೆ ಪಡೆಯಲಾಗಿದೆ. 

ಕೊರೋನಾ ಕಾಲ​ದಲ್ಲಿ ಹೆಚ್ಚು​ತ್ತಿ​ವೆ ಬಾಲ್ಯವಿವಾಹ !

ಈ ಹಿಂದೆ ಮದುವೆಯ ಮಾಹಿತಿ ಅರಿತು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಕೆ ಸಹಾಯಕ ನಿದೇರ್ಶಕರಾದ ಅಂಬಿಕಾ, ಅಂಗನವಾಡಿ ಕಾರ್ಯ ಕರ್ತೆ ಹಾಗು ಗ್ರಾ.ಪಂ ಪಿಡಿಓ ಅವರ ಮನೆಗೆ ಭೇಟಿ ನೀಡಿ ಪರಿಶೀಲಿಸಿದಾಗ ಗುಟ್ಟಾಗಿ ಬೇರೆಡೆ ಮದುವೆ ಮಾಡಿ ಹೆಣ್ಣಿನ ಕಾಲುಂಗುರ ಹಾಗೂ ತಾಳಿಯನ್ನು ತೆಗೆದಿಟ್ಟು ಬಂದು ಪರಿಶೀಲಿಸಿರುವವರನ್ನು ಯಾಮಾರಿಸಿದ್ದರು ಎನ್ನಲಾಗಿದೆ. 

ಈಗ ಹೆರಿಗೆಯಾದ ನಂತರ ಸಿಕ್ಕಿಬಿದ್ದಿದ್ದು, ಸಿಡಿಪಿಓ ದೂರು ಮೇರೆಗೆ ಗಂಡ ಹಾಗು ಮದುವೆಗೆ ಸಹಕರಿಸಿದ ಪೋಷಕರ ಮೇಲೆ ಕಾನೂನು ಕ್ರಮ ಜರುಗಿಸಲಾಗುತ್ತಿದೆ ಎನ್ನಲಾಗಿದೆ. ಈ ಸಂಬಂಧ ತಾಲೂಕಿನ ಕೋಳಾಲ ಪೊಲೀಸ್ ಠಾಣೆಯ ಸಿಪಿಐ ಸಿದ್ದರಾಮೆಶ್ವರ್, ಪಿಎಸ್‌ಐ ಮಹಾಲಕ್ಷ್ಮಮ್ಮ ಸ್ಥಳಕ್ಕೆ ಭೇಟಿ ನೀಡಿ ಹೆಚ್ಚಿನ ತನಿಖೆ ನಡೆಸಿದ್ದಾರೆ.  

ಕರ್ನಾಟಕದ ಶೇ.21ರಷ್ಟು ಹೆಣ್ಣು ಮಕ್ಕಳಿಗೆ ಬಾಲ್ಯವಿವಾಹ!

ಕರ್ನಾಟದಲ್ಲಿ ಶೇ.21.3ರಷ್ಟುಹೆಣ್ಣು ಮಕ್ಕಳು 18 ವರ್ಷ ಪೂರ್ಣಗೊಳ್ಳುವ ಮುಂಚೆಯೇ ವಿವಾಹ ಬಂಧನಕ್ಕೆ ಒಳಗಾಗುತ್ತಿದ್ದಾರೆ ಎಂಬ ಆಘಾತಕಾರಿ ವರದಿಯನ್ನು ಕೇಂದ್ರ ಸರ್ಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಬಿಡುಗಡೆ ಮಾಡಿರುವ 5ನೇ ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆ ಬಹಿರಂಗಗೊಳಿಸಿದೆ.

ದೇಶದ 22 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಸುಮಾರು 6.1 ಲಕ್ಷ ಕುಟುಂಬಗಳನ್ನು ಸಂದರ್ಶಿಸಿ, ಜನಸಂಖ್ಯೆ, ಆರೋಗ್ಯ, ಕುಟುಂಬ ಯೋಜನೆ ಮತ್ತು ಪೌಷ್ಠಿಕಾಂಶ ಸಂಬಂಧಿತ ಮಾಹಿತಿ ಸಂಗ್ರಹಿಸಿ ಈ ಸಮೀಕ್ಷೆ ನಡೆಸಲಾಗಿದೆ.

ಅತಿ ಹೆಚ್ಚು ಸಂಖ್ಯೆಯ ಹೆಣ್ಣುಮಕ್ಕಳು ಬಾಲ್ಯವಿವಾಹಕ್ಕೆ ಒಳಪಡುತ್ತಿರುವ ರಾಜ್ಯಗಳ ಪೈಕಿ ಬಿಹಾರ, ಪಶ್ಚಿಮ ಬಂಗಾಳ ಮತ್ತು ತ್ರಿಪುರ ಮೊದಲ ಸ್ಥಾನದಲ್ಲಿವೆ. ಈ ಪ್ರಮಾಣ ಬಿಹಾರದಲ್ಲಿ ಶೇ.40.8, ತ್ರಿಪುರಾದಲ್ಲಿ ಶೇ.40.1, ಪಶ್ಚಿಮ ಬಂಗಾಳದಲ್ಲಿ ಶೇ.41.6ರಷ್ಟಿದೆ. ಇನ್ನೂ ಆಘಾತಕಾರಿ ಸಂಗತಿ ಎಂದರೆ ಆಂಧ್ರದ ಶೇ.12.6, ಅಸ್ಸಾಂನ ಶೇ.11.7, ಬಿಹಾರದ ಶೇ.11 ಮತ್ತು ತ್ರಿಪುರದ ಶೇ.21.9ರಷ್ಟು15-19 ವಯೋಮಾನದ ಹೆಣ್ಣುಮಕ್ಕಳು ಈಗಾಗಲೇ ವಿವಾಹವಾಗಿ, ಗರ್ಭಿಣಿ ಕೂಡ ಆಗಿದ್ದಾರೆ. ಕೆಲವರು ಮಗುವಿಗೂ ಜನ್ಮ ನೀಡಿದ್ದಾರೆ.

ಉಳಿದಂತೆ ಕರ್ನಾಟಕ (21.3%), ಅಸ್ಸಾಂ (31.8%), ಆಂಧ್ರಪ್ರದೇಶ (29.3%), ಗುಜರಾತ್‌ (21.8%), ಮಹಾರಾಷ್ಟ್ರ (21.9%), ತೆಲಂಗಾಣ (23.5%) ಮತ್ತು ದಾದ್ರ ಮತ್ತು ನಾಗರ್‌ ಹಾವೇಲಿ ಹಾಗೂ ದಿಯು-ದಮನ್‌ನಲ್ಲಿ (26.4)ನಲ್ಲಿಯೂ ಬಾಲ್ಯವಿವಾಹ ಜೀವಂತವಾಗಿದೆ.

Follow Us:
Download App:
  • android
  • ios