ಮಲೆ ಮಹದೇಶ್ವರ ವನ್ಯಧಾಮವನ್ನು ಹುಲಿ ಸಂರಕ್ಷಿತಾರಣ್ಯವೆಂದು ಘೋಷಿಸಲು ಸರ್ಕಾರದ ಸಚಿವರಿಂದಲೇ ವಿರೋಧ!

ಮಲೆ  ಮಹದೇಶ್ವರ ವನ್ಯಜೀವಿ ಧಾಮ ವನ್ನು  ಹುಲಿ ಸಂರಕ್ಷಿತ ಪ್ರದೇಶ ಮಾಡಬೇಕೆಂದು ಪರಿಸರವಾದಿಗಳ  ಕೂಗು  ಕೇಳಿಬಂದಿತ್ತು.    ಆದ್ರೆ  ಈಗ  ಉಸ್ತುವಾರಿ   ಸಚಿವ ಸೋಮಣ್ಣ  ಮತ್ತು  ಸ್ಥಳೀಯ   ಹನೂರು   ಕ್ಷೇತ್ರದ   ಶಾಸಕ   ನರೇಂದ್ರ   ಅವರು    ವಿರೋಧ ವ್ಯಕ್ತಪಡಿಸುತ್ತಿದ್ದಾರೆ. 

ministers oppose Male Mahadeshwara Wildlife Sanctuary as a tiger reserve forest gow

ವರದಿ: ಪುಟ್ಟರಾಜು. ಆರ್.ಸಿ.  ಏಷಿಯಾನೆಟ್  ಸುವರ್ಣ  ನ್ಯೂಸ್

ಚಾಮರಾಜನಗರ (ಅ.10): ಅದು  ಕುಖ್ಯಾತ  ಕಾಡುಗಳ್ಳ  ವೀರಪ್ಪನ್  ತಿರುಗಾಡ್ತಿದ್ದ  ಕಾಡು. ವೀರಪ್ಪನ್  ಅದೆಷ್ಟೋ ಪ್ರಾಣಿಗಳನ್ನು ಹತ್ಯೆಗೈದಿದ. ವೀರಪ್ಪನ್ ಮರಣದ ಬಳಿಕ ಆ ಅರಣ್ಯ ಪ್ರದೇಶದಲ್ಲಿ ಹುಲಿ ಸೇರಿದಂತೆ ಇತರ  ಪ್ರಾಣಿಗಳ  ಸಂಖ್ಯೆ ಕೂಡ ಹೆಚ್ಚಾಗ ತೊಡಗಿದೆ. ಭಕ್ತರ ಆರಾಧ್ಯ ದೈವ ಮಲೆ ಮಾದಪ್ಪ ಕೂಡ ಈ ಕಾಡಿನಲ್ಲಿ  ನೆಲೆಸಿದ್ದು  ಲಕ್ಷಾಂತರ  ಭಕ್ತರು ದೇವರ ದರ್ಶನಕ್ಕೆ  ಆಗಮಿಸ್ತಾರೆ.  ಈ ನಡುವೆ ಹುಲಿ ಸಂತತಿ  ರಕ್ಷಣೆಗೆ  ಈ ವನ್ಯಧಾಮವನ್ನು  ಹುಲಿ ಸಂರಕ್ಷಿತ ಅರಣ್ಯವಾಗಿ ಘೋಷಿಸಬೇಕೆನ್ನುವ ಕಡತ ಸರ್ಕಾರದ  ಮುಂದಿದೆ.  ಇದೀಗ  ಸರ್ಕಾರ, ಜನಪ್ರತಿನಿಧಿಗಳು,  ಸ್ಥಳೀಯ ಜನರು ಘೋಷಿಸದಂತೆ ಮನವಿ  ಮಾಡ್ತಿದ್ದು, ಇತ್ತ  ಪರಿಸರವಾದಿಗಳು ಪ್ರಧಾನಿ ಮೋದಿ ಪರಿಸರ ಸಂರಕ್ಷಣೆಯ ಆಸೆಯಂತೆ ಹುಲಿ ಸಂರಕ್ಷಿತ ಅರಣ್ಯ ಘೋಷಿಸಿ ಅಂತಾ ಪಟ್ಟು ಹಿಡಿದಿದ್ದಾರೆ. ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಮಲೆ ಮಹದೇಶ್ವರ ವನ್ಯಜೀವಿ ಧಾಮ. ಈ ವನ್ಯಜೀವಿ ಧಾಮವನ್ನು ಹುಲಿ ಸಂರಕ್ಷಿತ ಪ್ರದೇಶ ಮಾಡಬೇಕೆಂದು ಪರಿಸರವಾದಿಗಳು ಒತ್ತಾಯ  ಮಾಡುತ್ತಿದ್ರೆ,  ಇತ್ತ  ಸ್ಥಳೀಯ  ಜನರಿಂದ, ಜನಪ್ರತಿನಿಧಿಗಳಿಂದ ವಿರೋಧ ವ್ಯಕ್ತವಾಗಿದೆ. 

ಮಲೆ  ಮಹದೇಶ್ವರ ವನ್ಯಜೀವಿ ಧಾಮ ವನ್ನು  ಹುಲಿ ಸಂರಕ್ಷಿತ ಪ್ರದೇಶ ಮಾಡಬೇಕೆಂದು ಪರಿಸರವಾದಿಗಳ  ಕೂಗು  ಕೇಳಿಬಂದಿತ್ತು.  ಈ  ಹಿನ್ನೆಲೆಯಲ್ಲಿ  ಈಗಾಗಲೇ  ಅಧಿಕಾರಿಗಳು   ಹುಲಿ ಸಂರಕ್ಷಿತ  ಪ್ರದೇಶ  ಮಾಡಲು  ಎಲ್ಲ   ಕರ್ತವ್ಯಗಳನ್ನು  ಪೂರ್ಣಗೊಳಿಸಿದ್ರು. ಇನ್ನೇನು ಯೋಜನೆಗೆ ಮುಖ್ಯಮಂತ್ರಿ   ಅವರ  ಅನುಮೋದನೆ  ಸಿಗುವ  ಹಂತದಲ್ಲಿದೆ.  ಆದ್ರೆ  ಈಗ  ಉಸ್ತುವಾರಿ   ಸಚಿವ ಸೋಮಣ್ಣ  ಮತ್ತು  ಸ್ಥಳೀಯ   ಹನೂರು   ಕ್ಷೇತ್ರದ   ಶಾಸಕ   ನರೇಂದ್ರ   ಅವರು    ವಿರೋಧ ವ್ಯಕ್ತಪಡಿಸುತ್ತಿದ್ದಾರೆ. 

ಪ್ರಸಿದ್ದ ಯಾತ್ರಾ ಸ್ಥಳವಾದ ಮಲೆ ಮಹದೇಶ್ವರ ಬೆಟ್ಟದಲ್ಲಿ ಹಬ್ಬದ ವಿಶೇಷ ದಿನಗಳಂದು ಜರುಗುವ ವಿಶೇಷ ಪೂಜೆ ಜಾತ್ರೆಗಳಿಗೆ ಬರುವ ಭಕ್ತರು ಊಳಿದುಕೊಳ್ಳುವುದರಿಂದ ಹಾಗು  ಮಲೆ ಮಹದೇಶ್ವರ ಬೆಟ್ಟದ ಸುತ್ತಮುತ್ತ ಸುಮಾರು ಹದಿನೆಂಟು ಗ್ರಾಮಗಳಿದ್ದು ಬಹುತೇಕ ಎಲ್ಲ ಗ್ರಾಮಗಳು ಅರಣ್ಯದ ಒಳಗಡೆ ಇರುವುದರಿಂದ  ಹುಲಿ ಸಂರಕ್ಷಿತ ಪ್ರದೇಶ ಎಂದು ಘೋಷಣೆ ಮಾಡಿದ್ರೆ ಕಾಡಿನ ಸುತ್ತಮುತ್ತ ಜನರು ವಾಸಿಸುವ ಆಗಿಲ್ಲ. ಸುತ್ತಮುತ್ತಲಿನ ಗ್ರಾಮಸ್ಥರನ್ನು ಒಕ್ಕಲೆಬ್ಬಿಸಲಾಗುತ್ತದೆ. ಹೀಗಾಗಿ ಹುಲಿ ಸಂರಕ್ಷಿತ ಪ್ರದೇಶ ಮಾಡಬಾರದು ಎಂಬುದು ಜನಪ್ರತಿನಿಧಿಗಳ ಒತ್ತಾಯ ಮಾಡ್ತಿದ್ದಾರೆ.

Malai Mahadeshwara Sanctuary ಹುಲಿಸಂರಕ್ಷಿತ ಪ್ರದೇಶವನ್ನಾಗಿಸಲು ಸರ್ಕಾರದ ಮೀನಾಮೇಷ?

ಇನ್ನೂ  ಜನಪ್ರತಿನಿಧಿಗಳು  ಹುಲಿ  ಸಂರಕ್ಷಿತ  ಪ್ರದೇಶ  ಮಾಡಲು  ವಿರೋಧ   ವ್ಯಕ್ತ ಮಾಡುತ್ತಿರುವುದಕ್ಕೆ  ಪರಿಸರವಾದಿಗಳು  ತೀವ್ರ   ಅಸಮಾಧಾನ   ವ್ಯಕ್ತಪಡಿಸಿದ್ದಾರೆ. ಕೆಲವು  ಕಡೆ ಒಂದು ಎರಡು ಹುಲಿಗಳು ಇರುವ ಕಡೆಯಲ್ಲು ಹುಲಿ ಸಂರಕ್ಷಿತ ಪ್ರದೇಶ ಎಂದು  ಘೋಷಿಸಲಾಗಿದೆ ಇಲ್ಲಿ ಘೋಷಣೆ ಮಾಡುವುದಕ್ಕೆ ಯಾಕೆ ಸರ್ಕಾರ ಮೀನಾಮೇಷ ಎಣಿಸುತ್ತಿದೆ,   ಮೊದಲೇ ದೇಶದಲ್ಲಿ ಹುಲಿಗಳ ಸಂತತಿ ಕಡಿಮೆ ಇದೆ. ಹೀಗಾಗಿ ಹುಲಿ ಸಂತತಿಯನ್ನು ರಕ್ಷಿಸಬೇಕಾಗಿರುವುದು ಎಲ್ಲರ   ಕರ್ತವ್ಯ.  ಆದರೆ    ಜನಪ್ರತಿನಿಧಿಗಳು   ತಮ್ಮ   ರಾಜಕೀಯ   ಹಿತಾಸಕ್ತಿಗಾಗಿ   ಹುಲಿ ಸಂರಕ್ಷಿತ ಪ್ರದೇಶ  ಘೋಷಣೆ  ಮಾಡಲು  ವಿರೋಧ  ವ್ಯಕ್ತಪಡಿಸುತ್ತಿದ್ದಾರೆ  ಎಂದು  ಹೇಳುತ್ತಾರೆ ಪರಿಸರವಾದಿಗಳು.

Bandipur forest ಅನ್ನೇ ದಾರಿ ಮಾಡಿಕೊಂಡಿರುವ ಜಾರ್ಜ್ ಪುತ್ರ, ನೋಟಿಸ್‌ ಲೆಕ್ಕಕ್ಕೇ ಇಲ್ಲ!

ಒಟ್ನಲ್ಲಿ   ಹುಲಿ   ಸಂರಕ್ಷಿತ   ಪ್ರದೇಶ   ಮಾಡಲು   ಕೊನೆ   ಹಂತದಲ್ಲಿರುವಾಗ ಜನಪ್ರತಿನಿಧಿಗಳು,ಸ್ಥಳೀಯರಿಂದ ವಿರೋಧ ಕೇಳಿ ಬಂದಿದೆ. ಒಟ್ಟಾರೆ ಜನಪ್ರತಿನಿಧಿಗಳು ವರ್ಸಸ್ ಪರಿಸರವಾದಿಗಳ ನಡುವಿನ ಹೋರಾಟದಲ್ಲಿ ಯಾರಿಗೆ ಗೆಲುವು ಸಿಗುತ್ತದೆ ಎಂಬುದನ್ನು ಕಾದು ನೋಡಬೇಕಿದೆ..

Latest Videos
Follow Us:
Download App:
  • android
  • ios