Bandipur forest ಅನ್ನೇ ದಾರಿ ಮಾಡಿಕೊಂಡಿರುವ ಜಾರ್ಜ್ ಪುತ್ರ, ನೋಟಿಸ್‌ ಲೆಕ್ಕಕ್ಕೇ ಇಲ್ಲ!

 ಮೈಸೂರು ಜಿಲ್ಲೆ ಸರಗೂರು ತಾಲೂಕು ಲಕ್ಕಸೋಗೆ ಗ್ರಾಮದಲ್ಲಿ ಜಮೀನು ಹೊಂದಿರುವ ಮಾಜಿ ಸಚಿವ ಕೆಜೆ.ಜಾರ್ಜ್ ಪುತ್ರ ರಾಣಾ ಜಾರ್ಜ್ ಅವರು ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶವಾಗಿ ತನ್ನ ತೋಟಕ್ಕೆ ಪ್ರಯಾಣಿಸುತ್ತಿದ್ದು, ನೋಟಿಸ್ ನೀಡದರೂ ಕ್ಯಾರೇ ಎನ್ನುತ್ತಿಲ್ಲ.
 

Karnataka ex minister K J George son Rana George illegally traveling  Bandipur forests gow

ವರದಿ: ಮಧು.ಎಂ.ಚಿನಕುರಳಿ, ಏಷ್ಯಾನೆಟ್ ಸುವರ್ಣ ನ್ಯೂಸ್

ಮೈಸೂರು (ಸೆ.15): ರಾಜ್ಯದಲ್ಲಿ ಉಳ್ಳವರಿಗೆ ಒಂದು ಕಾನೂನು, ಸಾಮಾನ್ಯರಿಗೆ ಒಂದು ಕಾನೂನು ಎನ್ನುವುದು ಮತ್ತೆ ಮತ್ತೆ ಸಾಬೀತಾಗುತ್ತಿದೆ. ಇದು ವನ್ಯಜೀವಿಗಳ ನಿರ್ಭಯ ಸಂಚಾರಕ್ಕೂ ಸಂಚಕಾರ ತಂದೊಡ್ಡಿದೆ. ಅಸಲಿಗೆ ಜನ ಸಾಮಾನ್ಯರ ಹೊರತಾಗಿ ಮಾಜಿ ಸಚಿವ ಕೆಜೆ.ಜಾರ್ಜ್ ಪುತ್ರನಿಗೆ ಸಿಕ್ಕಿರುವ ಕಾನೂನಿನ ಸ್ವಾತಂತ್ರ್ಯ ಎಂತಹದ್ದು, ಅದರಿಂದ ಕಾಡು ಪ್ರಾಣಿಗಳಿಗೆ ಆಗಿರುವ ತೊಂದರೆ ಏನು ಅನ್ನೋದು ಈ ಸುದ್ದಿಯಲ್ಲಿದೆ. ಬಂಡಿಪುರ ರಾಷ್ಟ್ರೀಯ ಉದ್ಯಾಯನವನ ಎರಡು ರಾಜ್ಯಗಳ ಗಡಿ ಹಂಚಿಕೊಂಡ ಅರಣ್ಯ ಪ್ರದೇಶ. ರಾಜ್ಯದಲ್ಲೇ ಅತಿ ಹೆಚ್ಚು ಹುಲಿಗಳನ್ನು ಹೊಂದಿರುವ ಹೆಗ್ಗಳಿಕೆ ಈ ಅರಣ್ಯ ಪ್ರದೇಶಕ್ಕಿದೆ. ಇದೇ ಕಾರಣಕ್ಕೆ ಬಂಡೀಪುರವನ್ನು ಹುಳಿ ಸಂರಕ್ಷಿತ ಅರಣ್ಯ ಪ್ರದೇಶವಾಗಿ ಸರ್ಕಾರ ಘೋಷಣೆ ಮಾಡಿದೆ. ಇದು ಸಂರಕ್ಷಿತ ಅರಣ್ಯ ಆದ ಕಾರಣಕ್ಕೆ ಇಲ್ಲಿ ಜನ ಸಾಮಾನ್ಯರ ಸಂಚಾರಕ್ಕೆ ನಿರ್ಬಂಧಗಳನ್ನು ಹಾಕಲಾಗಿದೆಯಾದರೂ ಮಾಜಿ ಸಚಿವ ಕೆಜೆ.ಜಾರ್ಜ್ ಪುತ್ರನಿಗೆ ಮಾತ್ರ ಇದು ಅನ್ವಯ ಆಗುತ್ತಿಲ್ಲ. ಹೀಗಾಗಿ ವನ್ಯಜೀವಿ ಧಾಮದ ರಸ್ತೆಯನ್ನೇ ಮಾಜಿ ಸಚಿವನ ಪುತ್ರ ರಾಣಾ ಜಾರ್ಜ್ ರಹದಾರಿ ಮಾಡಿಕೊಂಡಿದ್ದಾರೆ. ತನ್ನ ಜಮೀನಿಗೆ ಹೋಗಲು ಸಂರಕ್ಷಿತ  ಅರಣ್ಯ ಪ್ರದೇಶ ಬಳಸುತ್ತಿರುವ ಮಾಜಿ ಸಚಿವರ ಪುತ್ರ, ಎರಡೆರಡು ಬಾರಿ ನೋಟಿಸ್ ನೀಡಿದರೂ ಕ್ಯಾರೆ ಎನ್ನುತ್ತಿಲ್ಲ. ಕಾಂಗ್ರೆಸ್ ಮುಖಂಡ ಕೆ.ಜೆ.ಜಾರ್ಜ್ ಪುತ್ರ ರಾಣಾ ಜಾರ್ಜ್ ಮಾತ್ರ ಅರಣ್ಯ ದಾರಿ ಬಳಸೋದಕ್ಕೆ ಸ್ಥಳೀಯರ ಆಕ್ರೋಶ ಎದುರಾಗಿದೆ.

ಮೈಸೂರು ಜಿಲ್ಲೆ ಸರಗೂರು ತಾಲ್ಲೂಕು ಲಕ್ಕಸೋಗೆ ಗ್ರಾಮದಲ್ಲಿ ರಾಣಾ ಜಮೀನು ಹೊಂದಿದ್ದಾರೆ. ಇದು ನುಗು ಜಲಾಶಯದ ಹಿನ್ನೀರಿನ ದಂಡೆಯಲ್ಲಿನ ಸರ್ವೆ ನಂ 33ರಲ್ಲಿರುವ ಬರುವ ಜಮೀನಾಗಿದೆ. ಆದರೆ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶ ವ್ಯಾಪ್ತಿಯ ಪರಿಸರ ಸೂಕ್ಷ್ಮ ವಲಯ. ವನ್ಯಜೀವಿ ಕಾಯ್ದೆ 1972ರ ಪ್ರಕಾರ ಅರಣ್ಯಕ್ಕೆ ಜನ-ಜಾನುವಾರು ಪ್ರವೇಶ ನಿಷಿದ್ಧ ಮಾಡಲಾಗಿದೆ.

ಬಂಡೀಪುರದಲ್ಲಿ ಅಪರೂಪದ ದೃಶ್ಯ ಸೆರೆ : ಅವಳಿ ಮರಿಗಳೊಂದಿಗೆ ಕಾಣಿಸಿಕೊಂಡ ಆನೆ

ಆದರೆ ದಶಕಗಳಿಂದ ತೋಟದ ಕೆಲಸಗಾರರು ಹಾಗೂ ಮಾಲೀಕರ ವಾಹನಗಳ ಓಡಾಟ ಅರಣ್ಯದಲ್ಲೇ ನಡೆಯುತ್ತಿದ್ದು 2020ರ ಆಗಸ್ಟ್ 8 ಮತ್ತು 2022ರ ಆಗಸ್ಟ್ 20 ರಂದು ರಾಣಾಗೆ ಅರಣ್ಯ ಇಲಾಖೆ ನೋಟಿಸ್ ನೀಡಿ ದಾಖಲೆ ಕೇಳಿದೆ. ಆದರೆ ಇಲಾಖೆ ನೋಟಿಸ್‌ಗೆ ರಾಣಾ ಸಮರ್ಪಕ ಉತ್ತರ ನೀಡುತ್ತಿಲ್ಲ.

Karnataka ex minister K J George son Rana George illegally traveling  Bandipur forests gow

Karnataka ex minister K J George son Rana George illegally traveling  Bandipur forests gow

Chamarajnagar: ಹಸಿರಿನ ವನರಾಶಿಯಿಂದ ನಳನಳಿಸುತ್ತಿದೆ ಬಂಡೀಪುರ! 

1972ರ ಕಾಯ್ದೆಯನ್ವಯ ಅರಣ್ಯ ವ್ಯಾಪ್ತಿಯಲ್ಲಿ ಹಸ್ತಾಂತರಿಸಲಾಗದ ಆಸ್ತಿ ಇದ್ದರೆ, ಸೆಕ್ಷನ್ 28ರ ಪ್ರಕಾರ ಅರಣ್ಯದ ಮೂಲಕ ಖಾಸಗಿ
ಭೂಮಿಗೆ ತೆರಳಬಹುದು ಎಂದು ರಾಣ ಉತ್ತರ ನೀಡಿದ್ದು, ಮೇಲಧಿಕಾರಿಗಳ ಅನುಮತಿ ಇಲ್ಲ ಎಂದು ಮತ್ತೆ ನೋಟಿಸ್ ನೀಡಿದರೆ ಯಾವುದೇ ಉತ್ತರ ನೀಡಿಲ್ಲ. ಒಟ್ಟಾರೆ ಕೇವಲ ನೋಟಿಸ್ ನೀಡಿ ಸುಮ್ಮನಾದ ಅಧಿಕಾರಿಗಳ ನಡೆ ಸಚಿವರ ಮಗನಿಗೆ, ಜನ ಸಾಮಾನ್ಯರಿಗೆ ಬೇರೆಯಾದ ಕಾನೂನಿದೆ ಎಂದು ತೋರಿಸುತ್ತಿದೆ. ಇದಕ್ಕೆ ಸರ್ಕಾರವೇ ಉತ್ತರಿಸಬೇಕಿದೆ.

Latest Videos
Follow Us:
Download App:
  • android
  • ios