Asianet Suvarna News Asianet Suvarna News

ಹೊಸಪೇಟೆ: ಪಿಯು ಟಾಪರ್‌ಗೆ ಸ್ಕೂಟಿ ನೀಡಿ ರೌಂಡ್‌ ಹಾಕಿಸಿದ ಸಚಿವ ಜಮೀರ್ ಅಹ್ಮದ್ ಖಾನ್..!

ಪಿಯು ಕಾಲೇಜಿನ ವಿದ್ಯಾರ್ಥಿನಿ ಕವಿತಾ ಅವರಿಗೆ ಸ್ಕೂಟಿ ನೀಡಿದರು. ಜೊತೆಗೆ ಈ ವಿದ್ಯಾರ್ಥಿನಿಗೆ ₹1ಲಕ್ಷ ಪ್ರೋತ್ಸಾಹ ಧನ ನೀಡುವುದಾಗಿ ಕಾರ್ಯಕ್ರಮದಲ್ಲಿ ಘೋಷಿಸಿದ ಸಚಿವ ಜಮೀರ್ ಅಹ್ಮದ್ ಖಾನ್

Minister Zameer Ahmed Khan gave scooty to the PU topper in hosapete grg
Author
First Published Aug 16, 2024, 8:01 AM IST | Last Updated Aug 16, 2024, 8:01 AM IST

ಹೊಸಪೇಟೆ(ಆ.16):  ಹೊಸಪೇಟೆ ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಗುರುವಾರ ನಡೆದ ಸ್ವಾತಂತ್ರೋತ್ಸವ ದಿನಾಚರಣೆ ಕಾರ್ಯಕ್ರಮದಲ್ಲಿ ಪಿಯುಸಿ ಟಾಪರ್ಸ್‌ಗಳಿಗೆ ವೈಯಕ್ತಿಕವಾಗಿ ಸ್ಕೂಟಿ ನೀಡಿ ಸಚಿವ ಜಮೀರ್ ಅಹ್ಮದ್ ಖಾನ್ ಪ್ರೋತ್ಸಾಹಿಸಿದರು.

ದ್ವಿತೀಯ ಪಿಯುಸಿ ಕಲಾ ವಿಭಾಗದಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದ ವಿಜಯನಗರ ಜಿಲ್ಲೆಯ ಕೊಟ್ಟೂರಿನ ಪಿಯು ಕಾಲೇಜಿನ ವಿದ್ಯಾರ್ಥಿನಿ ಕವಿತಾ ಅವರಿಗೆ ಸ್ಕೂಟಿ ನೀಡಿದರು. ಜೊತೆಗೆ ಈ ವಿದ್ಯಾರ್ಥಿನಿಗೆ ₹1ಲಕ್ಷ ಪ್ರೋತ್ಸಾಹ ಧನ ನೀಡುವುದಾಗಿ ಸಚಿವರು ಕಾರ್ಯಕ್ರಮದಲ್ಲಿ ಘೋಷಿಸಿದರು. 

ಸಿ.ಪಿ.ಯೋಗೇಶ್ವರ್ ಕಾಂಗ್ರೆಸ್‌ ಸೇರ್ಪಡೆ ಹೈಕಮಾಂಡ್‌ ನಿರ್ಧಾರ: ಸಚಿವ ಜಮೀರ್‌ ಅಹ್ಮದ್

ಸ್ಕೂಟಿಯಲ್ಲಿ ವಿದ್ಯಾರ್ಥಿನಿ ಯನ್ನು ಕೂರಿಸಿಕೊಂಡು ಒಂದು ಸುತ್ತು ಖುದ್ದಾಗಿ ವಾಹನ ಚಲಾಯಿಸುವುದರ ಮೂಲಕ ಈ ದ್ವಿಚಕ್ರ ವಾಹನ ವಿತರಣೆಗೆ ಚಾಲನೆ ನೀಡಿದರು.

Latest Videos
Follow Us:
Download App:
  • android
  • ios