ನನಗೂ ಸಿಎಂ ಆಗುವ ಆಸೆ ಇದೆ: ನೂತನ ಸಚಿವ ಉಮೇಶ್ ಕತ್ತಿ
ಸಿದ್ಧಗಂಗಾ ಶ್ರೀ ಆಶೀರ್ವಾದ ಪಡೆದ ನೂತನ ಸಚಿವ ಉಮೇಶ್ ಕತ್ತಿ| ನಾನು, ಯತ್ನಾಳ್ ಇಬ್ಬರೂ ಹಿರಿಯರಿದ್ದೀವಿ. ಆದರೆ, ಯತ್ನಾಳ್‌ಗಿಂತ ನಾನು ಸೀರಿಯರ್ ಆಗಿದ್ದೇನೆ ಎಂದ ತಿಳಿಸಿದರು. ನನಗೆ ಶ್ರೀಗಳ ಆಶೀರ್ವಾದವಿದೆ. ಮುಂದಿನ ದಿನಗಳಲ್ಲಿ ಯಾವ ಸ್ಥಾನ ಸಿಕ್ಕರೂ ನಿಭಾಯಿಸುತ್ತೇನೆ:ಉಮೇಶ್ ಕತ್ತಿ|
ತುಮಕೂರು(ಜ.23): ಎಲ್ಲರಿಗೂ ಮುಖ್ಯಮಂತ್ರಿಯಾಗುವ ಆಸೆ ಇರುವ ಹಾಗೆ ನನಗೂ ಇದೆ ಎಂದು ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಉಮೇಶ್ ಕತ್ತಿ ತಿಳಿಸಿದ್ದಾರೆ.
ನಗರದ ಸಿದ್ಧಗಂಗಾ ಮಠಕ್ಕೆ ಭೇಟಿ ನೀಡಿ ಸಿದ್ಧಲಿಂಗ ಸ್ವಾಮೀಜಿ ಆಶೀರ್ವಾದ ಪಡೆದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿಯಲ್ಲಿ 75 ವರ್ಷದ ವರೆಗೂ ಮುಖ್ಯಮಂತ್ರಿಯಾಗುವ ಅವಕಾಶ ಇದೆ. ಆದರೆ, ಸದ್ಯ ಮುಖ್ಯಮಂತ್ರಿ ಹುದ್ದೆ ಖಾಲಿ ಇಲ್ಲ. ನಾನು, ಯತ್ನಾಳ್ ಇಬ್ಬರೂ ಹಿರಿಯರಿದ್ದೀವಿ. ಆದರೆ, ಯತ್ನಾಳ್‌ಗಿಂತ ನಾನು ಸೀರಿಯರ್ ಆಗಿದ್ದೇನೆ ಎಂದ ತಿಳಿಸಿದರು. ನನಗೆ ಶ್ರೀಗಳ ಆಶೀರ್ವಾದವಿದೆ. ಮುಂದಿನ ದಿನಗಳಲ್ಲಿ ಯಾವ ಸ್ಥಾನ ಸಿಕ್ಕರೂ ನಿಭಾಯಿಸುತ್ತೇನೆ ಎಂದರು.
ಬಿಎಸ್‌ವೈ ಟೀಂಗೆ ಹೊಸ ಸಚಿವರು, ಯಾರಿಗೆಲ್ಲಾ ಮಂತ್ರಿಗಿರಿ ಭಾಗ್ಯ? ಇಲ್ಲಿದೆ ಸಂಭಾವ್ಯ ಪಟ್ಟಿ!
ಮುಖ್ಯಮಂತ್ರಿ ಯಡಿಯೂರಪ್ಪ ಅವರು ಸದ್ಯ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯಂತಹ ವಿಶೇಷ ಜವಾಬ್ದಾರಿ ಕೊಟ್ಟಿದ್ದಾರೆ. ಈ ಖಾತೆ ಸಿಕ್ಕಿರುವುದಕ್ಕೆ ನನಗೆ ಸಂತೋಷವಾಗಿದೆ. ರಾಜ್ಯಕ್ಕೆ ಹಾಗೂ ಸರ್ಕಾರಕ್ಕೆ ಒಳ್ಳೆಯ ಹೆಸರು ತರುತ್ತೇನೆ ಎಂದು ಹೇಳಿದರು.