ಅಕ್ರಮ ಅವಕಾಶವಿಲ್ಲ : ಸುರೇಶ್ ಕುಮಾರ್ ವಾರ್ನಿಂಗ್
ಶಿವಮೊಗ್ಗ ಗಣಿ ಸ್ಫೋಟ ಬೆನ್ನಲ್ಲೇ ಎಚ್ಚೆತ್ತುಕೊಂಡಿದ್ದು ಯಾವುದೇ ಅಕ್ರಮಕ್ಕೆ ಅವಕಾಶ ನೀಡಬಾರದು ಎಂದು ಚಾಮರಾಜನಗರ ಜಿಲ್ಲಾ ಉಸ್ತುವಾರಿ ಸಚಿವ ಸುರೇಶ್ ಕುಮಾರ್ ಖಡಕ್ ಸೂಚನೆ ನೀಡಿದ್ದಾರೆ.
ಚಾಮರಾಜನಗರ (ಜ.25): ಶಿವಮೊಗ್ಗದಲ್ಲಿ ಕಲ್ಲು ಗಣಿ ಸ್ಫೋಟಗೊಂಡ ಬೆನ್ನಲ್ಲೇ ಹಲವೆಡೆ ಭಾರಿ ಎಚ್ಚರಿಕೆ ವಹಿಸಲಾಗುತ್ತಿದೆ. ಚಾಮರಾಜನಗರ ಜಿಲ್ಲೆಯಲ್ಲಿ ಯಾವುದೇ ರೀತಿಯ ಅಕ್ರಮಕ್ಕೆ ನೀಡಬಾರದು. ಅಕ್ರಮ ಗಣಿಗಾರಿಕೆ ಕಂಡುಬಂದರೆ ನೀವೇ ಜವಬ್ದಾರರು ಎಂದು ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಉಪನಿರ್ದೇಶಕಿಗೆ ಸಚಿವ ಸುರೇಶ್ ಕುಮಾರ್ ಎಚ್ಚರಿಕೆ ನೀಡಿದ್ದಾರೆ.
ಕೆಡಿಪಿ ಸಭೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಸುರೇಶ್ ಕುಮಾರ್ ಗಣಿ ಮತ್ತು ಭೂವಿಜ್ಞಾನ ಇಲಾಖೆಗೆ ಎಚ್ಚರಿಕೆ ಸಂದೇಶ ನೀಡಿದ್ದಾರೆ.
ಶಿವಮೊಗ್ಗ ಸ್ಫೋಟ ಪ್ರಕರಣದ ತನಿಖೆ ಬಗ್ಗೆ ಅಶೋಕ್ ಮಹತ್ವದ ಹೇಳಿಕೆ .
ಇದೇ ವೇಳೆ ಶಿವಮೊಗ್ಗ ಘಟನೆಯ ದಿನವೇ 17 ಕ್ವಾರಿಗಳಿಗೆ ಭೇಟಿ ನೀಡಿದ್ದೇನೆ. ನಿನ್ನೆ ಮೊನ್ನೆ ಉಳಿದ ಕ್ವಾರಿಗಳಿಗೆ ಭೇಟಿ ನೀಡಿ ರಕ್ಷಣಾ ಕ್ರಮಗಳ ಬಗ್ಗೆ ಪರಿಶೀಲಿಸಿದ್ದೇವೆ . ಜಿಲ್ಲೆಯಲ್ಲಿ ಗ್ರಾನೈಟ್, ಬಿಳಿಕಲ್ಲು , ಕ್ರಷರ್ ,ಮರಳು ಸೇರಿದಂತೆ 75 ಗಣಿಗಾರಿಕೆ ನಡೆಯುತ್ತಿವೆ. ಈ ಹಿಂದೆ ಅಕ್ರಮವಾಗಿ ನಡೆಯುತ್ತಿದ್ದ 17 ಕ್ವಾರಿಗಳನ್ನು ನಿಲ್ಲಿಸಿ ನೋಟೀಸ್ ನೀಡಲಾಗಿದೆ ಎಂದು ಗಣಿ ಮತ್ತು ಭೂವಿಜ್ಞಾನ ಇಲಾಖೆ ಉಪನಿರ್ದೇಶಕಿ ಲಕ್ಷ್ಮಮ್ಮ ಮಾಹಿತಿ ನೀಡಿದ್ದಾರೆ.
ಜಿಲ್ಲೆಯಲ್ಲಿ ಅಕ್ರಮ ಗಣಿಗಾರಯ ನಡೆಯುತ್ತಿಲ್ಲವೇ ಎಂದು ಹನೂರು ಶಾಸಕ ಆರ್ ನರೇಂದ್ರ ಪ್ರಶ್ನೆ ಮಾಡಿದ್ದು ಇದಕ್ಕೆ ತಾವೂ ಪರಿಶೀಲನೆ ನಡೆಸುತ್ತಿರುವುದಾಗಿ ಉಪ ನಿರ್ದೇಶಕಿ ಹೇಳಿದ್ದಾರೆ. ಗೊತ್ತಿಲ್ಲ ದಿದ್ದರೆ ನನ್ನನ್ನು ಕೇಳಿ. ಎಲ್ಲೆಲ್ಲಿ ಅಕ್ರಮ ಗಣಿಗಾರಿಕೆ ನಡೆಯುತ್ತಿದೆ ಎಂದು ತಿಳಿಸುತ್ತೇನೆ ಎಂದ ಶಾಸಕ ಆರ್.ನರೇಂದ್ರ ಈ ವೇಳೆ ಅಧಿಕಾರಿಗೆ ಸಭೆಯಲ್ಲೇ ಹೇಳಿದ್ದಾರೆ.