ಚಿಕ್ಕಮಗಳೂರು, (ಜ.24): ಶಿವಮೊಗ್ಗದ ಹುಣಸೋಡು ಕ್ವಾರೆಯಲ್ಲಿ ನಡೆದ ಸ್ಪೋಟ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸುವುದಿಲ್ಲ ಎಂದು ಕಂದಾಯ ಸಚಿವ ಆರ್.ಅಶೋಕ್ ಸ್ಪಷ್ಟಪಡಿಸಿದರು.

ಚಿಕ್ಕಮಗಳೂರಿನಲ್ಲಿ ಮಾತನಾಡಿದ ಅವರು, ಸ್ಫೋಟಕ ಸಾಮಗ್ರಿ ಖರೀದಿಗೆ ಮತ್ತಷ್ಟು ಕಠಿಣ ನಿಯಮಗಳನ್ನು ರೂಪಿಸಲು ಸಿದ್ದತೆ ನಡೆಯುತ್ತಿದೆ. ರಾಜ್ಯದ ಪೊಲೀಸರು ಸಮರ್ಥರಿದ್ದಾರೆ, ಅವರೇ ಪ್ರಕರಣವನ್ನು ತನಿಖೆ ಮಾಡುತ್ತಾರೆ ಎಂದು ಹೇಳಿದರು.

ಗಣಿಗಾರಿಕೆಯಿಂದ KRSಗೂ ಕಾದಿದೆ ಮಹಾ ಆಪತ್ತು : ಸಿಎಂ ಖಡಕ್ ಸೂಚನೆ

 ಸ್ಫೋಟಕ ಸಾಮಾಗ್ರಿಗಳ ಶೇಖರಣೆಯ ಬಗ್ಗೆ ಪರಿಶೀಲಿಸಿ ಅನುಮತಿ ಕೊಡಬೇಕು. ಹುಣಸೋಡಿಗೆ ಸ್ಫೋಟಕ ಬಂದಿರುವುದು ಆಂಧ್ರದಿಂದ ಎಂಬ ಮಾಹಿತಿ ಇದೆ. ಮುಂದೆ ಹೀಗಾಗದಂತೆ ಕ್ರಮ ಕೈಗೊಳ್ಳಲಾಗುವುದು ಭರವಸೆ ಕೊಟ್ಟರು.

ಗಣಿಗಾರಿಕೆಗೆ ಬಂದಿದೆ ಸರಿ, ಆದರೆ ಬೇರೆ ಉದ್ದೇಶಕ್ಕಾಗಿದ್ದರೆ ದೊಡ್ಡ ಅನಾಹುತವಾಗುತ್ತಿತ್ತು. ಬೇರೆ ರಾಜ್ಯದಿಂದ ಯಾರು ಈ ಸ್ಪೋಟಕಗಳನ್ನು ಕೊಡುತ್ತಾರೆ. ಯಾರು ತರುತ್ತಾರೆ ಅದೂ ತನಿಖೆಯಾಗಬೇಕು. ಘಟನೆ ನಡೆದ ದಿನವೇ ಕಂದಾಯ ಇಲಾಖೆಯಿಂದ ವಿಪತ್ತು ನಿರ್ವಹಣಾ ತಂಡ ಕಳಿಸಿದ್ದೇವೆ ಎಂದು ತಿಳಿಸಿದರು.

ಖಾತೆ ಬದಲಾವಣೆ ಅಸಮಾಧಾನ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಸಚಿವರು, ಖಾತೆಯ ಕ್ಯಾತೆ ಈಗ ಮುಗಿದ ಅಧ್ಯಾಯ, ನೋ ಖಾತೆಯ ಕ್ಯಾತೆ. ಎಲ್ಲರೂ ಸಿಎಂ ಜೊತೆಯೇ ಇದ್ದಾರೆ. ಗೋಪಾಲಯ್ಯ, ಎಂಟಿಬಿ ನಾಗರಾಜ್, ಸುಧಾಕರ್, ಶಂಕರ್ ಜೊತೆ ಮೊನ್ನೆಯೇ ಮಾತನಾಡಿದ್ದೇನೆ. ಎಲ್ಲರೂ ಸಮಾಧಾನವಾಗಿ, ಶಾಂತವಾಗಿದ್ದಾರೆ, ಯಾವುದೇ ಗೊಂದಲವಿಲ್ಲ ಎಂದರು.