ಮಂಡ್ಯ (ಜೂ.10): ಹಾಲಿಗೆ ಭಾರೀ ಪ್ರಮಾಣದಲ್ಲಿ ನೀರು ಬೆರೆಸಿ ವಿವಾದಕ್ಕೆ ಈಡಾಗಿದ್ದ ಮದ್ದೂರಿನ ಗೆಜ್ಜಲಗೆರೆ ಡೈರಿಗೆ ಇಂದು ಸಹಕಾರ ಸಚಿವ  ಎಸ್.ಟಿ.ಸೋಮಶೇಖರ್ ಭೇಟಿ ನೀಡಿ  ಪರಿಶೀಲನೆ ನಡೆಸಿದರು.

ಇಲ್ಲಿ ನಡೆದ ಹಾಲಿಗೆ ನೀರು ಬೆರೆಸಿದ ಪ್ರಕರಣದ ಸಂಬಂಧ ಮಾತನಾಡಿದ ಸಚಿವ ಸೋಮಶೇಖರ್ ಅವರು ಈಗಾಗಲೇ ಈ ವಿಚಾರದಲ್ಲಿ  ಭಾಗಿಯಾಗಿರುವ ಅಧಿಕಾರಿಗಳನ್ನು ಅಮಾನತುಗೊಳಿಸಲಾಗಿದೆ.  ಕಾರ್ಯದರ್ಶಿಗಳು ಮುಖ್ಯಮಂತ್ರಿಗಳಿಗೆ ಪ್ರಾಥಮಿಕ ಟಿಪ್ಪಣಿಯನ್ನು ನೀಡಿದ್ದಾರೆ ಇದರ ಕುರಿತು ವಿಚಾರಣೆ ಮಾಡುವುದನ್ನು ಮುಖ್ಯಮಂತ್ರಿಗಳ ಜೊತೆ ಚರ್ಚಿಸಿ ನಿರ್ಧರಿಸಲಾಗುವುದು ಎಂದರು.

ಈಗಾಗಲೇ ಆರು ಜನರನ್ನು ಅಮಾನತುಗೊಳಿಸಲಾಗಿದೆ. ಮ್ಯಾನೇಜರ್  ಸಹ ವರ್ಗಾವಣೆ ಮಾಡಲಾಗುವುದು. ಇನ್ನು ಎರಡು ಮೂರು ದಿನಗಳಲ್ಲಿ ಇದರಲ್ಲಿ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಭಾಗಿಯಾಗಿರುವವರನ್ನು ಗುರುತಿಸಲಾಗುವುದು ಎಂದರು.

ಮನ್ಮುಲ್ ಹಾಲಿಗೆ ನೀರು ಸೇರಿಸಿದ ಕೇಸ್ : 7 ಮಂದಿ ಸಸ್ಪೆಂಡ್ ...

ತಮಗೆ ಬಂದಿರುವ ಮಾಹಿತಿಯ ಪ್ರಕಾರ ಒಂದೇ ಸಂಖ್ಯೆಯಲ್ಲಿ ಐದರಿಂದ ಆರು ವಾಹನಗಳು ಚಲಾಯಿಸುತ್ತಿರುವುದು ಮತ್ತು ಕೋಟ್ಯಾಂತರ ರೂಪಾಯಿ ಇದರಲ್ಲಿ ನಷ್ಟವಾಗಿದೆ ಎಂಬುದನ್ನು ತಿಳಿಸಿದರು.  ರೈತರಿಗೆ ಈ ತರಹದ  ಮೋಸ ಮಾಡಬಾರದು ಎಂದರು.

ಕೆ.ಎಂ.ಎಫ್ ವ್ಯವಸ್ಥಾಪಕ ನಿರ್ದೇಶಕ ಬಿ.ಸಿ.ಸತೀಶ್ , ಡಿಸಿಸಿ ಬ್ಯಾಂಕ್ ಅಧ್ಯಕ್ಷ ಉಮೇಶ್ , ಮನ್ ಮುಲ್ ಅಧ್ಯಕ್ಷ ರಾಮಚಂದ್ರ , ಉಪಾಧ್ಯಕ್ಷ ರಘುನಂದನ್ , ಬಿಜೆಪಿ ಮುಖಂಡ ಸಿದ್ದರಾಮಯ್ಯ , ಮನ್ ಮುಲ್ ನಿರ್ದೇಶಕರು ಹಾಗೂ ಅಧಿಕಾರಿಗಳು ಹಾಜರಿದ್ದರು.