ಕೋಲಾರ (ಆ.20) : ಮಾಜಿ ಸಿಎಂ ಸಿದ್ದರಾಮಯ್ಯನವರ ಕಾಲ ಮುಗಿದಿದೆ, ಅವರದೇನೂ ಈಗ ನಡಿಯೋದಿಲ್ಲ. ಅವರ ಮಾತಿಗೂ ಕಿಮ್ಮತ್ತಿಲ್ಲ ಎಂದು ಸಹಕಾರ ಸಚಿವ ಎಸ್‌.ಟಿ.ಸೋಮಶೇಖರ್‌ ಟಾಂಗ್‌ ನೀಡಿದ್ದಾರೆ.

ಜಿಲ್ಲೆಯ ಮಾಲೂರಿನಲ್ಲಿ ತಮ್ಮನ್ನು ಭೇಟಿಯಾದ ಸುದ್ದಿಗಾರರು ಕೆಜಿ ಹಳ್ಳಿ ಗಲಭೆ ಪ್ರಕರಣದ ಹಿನ್ನೆಲೆಯಲ್ಲಿ ಎಸ್‌ಡಿಪಿಐ ಸಂಘಟನೆ ಬ್ಯಾನ್‌ ಮಾಡುವ ವಿಚಾರದಲ್ಲಿ ಸಿದ್ಧರಾಮಯ್ಯ ವಿರೋಧಿಸಿರುವುದರ ಕುರಿತು ಕೇಳಿದ ಪ್ರಶ್ನೆಗೆ ಸಚಿವರು ಈ ರೀತಿಯಾಗಿ ಪ್ರತಿಕ್ರಿಯಿಸಿದರು. ವಿಪಕ್ಷ ನಾಯಕ ಸಿದ್ದರಾಮಯ್ಯ 5 ವರ್ಷ ಸಿಎಂ ಆಗಿದ್ದರು. ಅವರು ಈಗೇನು ಚಾಲೆಂಜ್‌ ಮಾಡಲು ಸಾಧ್ಯ, ಸಿದ್ದರಾಮಯ್ಯನವರು ಈಗ ಕೊರೋನಾ ರೆಸ್ಟ್‌ನಲ್ಲಿದ್ದಾರೆ ಎಂದರು.
ಗಾಂಧಿಯೇತರ ವ್ಯಕ್ತಿ ಕಾಂಗ್ರೆಸ್ ಅಧ್ಯಕ್ಷರಾಗಲಿ: ಪ್ರಿಯಾಂಕ ಗಾಂಧಿ.

ಅರವಿಂದ್‌ ಲಿಂಬಾವಳಿ ತನಿಖೆ ನಡೆಸಿ ಗೃಹ ಮಂತ್ರಿಗಳಿಗೆ ರಿಪೋರ್ಟ್‌ ಕೊಟ್ಟಿದ್ದಾರೆ. ಇದರಲ್ಲಿ ಯಾರಾರ‍ಯರ ಲಿಂಕ್‌ ಇದೆ ಎಂದು ತನಿಖೆ ನಡೆಯುತ್ತಿದೆ. ಗೃಹ ಮಂತ್ರಿಗಳಿಗೆ ಸಿಎಂ ಖಡಕ್‌ ಸೂಚನೆ ನೀಡಿದ್ದಾರೆ. ಬಿಜೆಪಿಯಲ್ಲದೆ ಎಲ್ಲರೂ ಬ್ಯಾನ್‌ ಆಗ್ಬೇಕು ಅಂತ ನಿರ್ಧರಿಸಿದ್ದಾರೆ ಎಂದು ತಿಳಿಸಿದರು.