ಮೈಸೂರು (ಜೂನ್.04) :  ಜಿಲ್ಲಾಡಳಿತ ಮತ್ತು ಜಿಲ್ಲಾಪಂಚಾಯತ್, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ವತಿಯಿಂದ  ವೈದ್ಯರ ನಡಿಗೆ ಹಳ್ಳಿಯ ಕಡೆಗೆ, ನಿಮ್ಮ ಆರೋಗ್ಯ ನಮ್ಮ ಭಾದ್ಯತೆ ಕಾರ್ಯಕ್ರಮಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ. ಸೋಮಶೇಖರ್ ಚಾಲನೆ ನೀಡಿದರು. 

ಮೈಸೂರಿನ ಹೂಟಗಳ್ಳಿಯ ಹೌಸಿಂಗ್ ಬೋರ್ಡ್ ಸರ್ಕಲ್‌ನಲ್ಲಿ  ಇಂದು ಕಾರ್ಯಕ್ರಮಕ್ಕೆ ಚಾಲನೆ ನೀಡಿದ  ಸಚಿವ ಸೋಮಶೇಖರ್ ವೈದ್ಯರ ನಡಿಗೆ ಹಳ್ಳಿಯ ಕಡೆಗೆ  ಇದು ರಾಜ್ಯ ಸರಕಾರ ರೂಪಿಸಿದ ಉತ್ತಮ ಕಾರ್ಯಕ್ರಮ. ಈ ಕಾರ್ಯಕ್ರಮಕ್ಕಾಗಿ ಇಡೀ ಜಿಲ್ಲೆಗೆ 35 ವಾಹನಗಳು ದೊರಕಿವೆ ಎಂದರು.

ಹುಣಸೂರು: ಹಾಡಿಯಲ್ಲಿ ಕೊರೋನಾ ಟೆಸ್ಟ್‌ಗೆ ಗಿರಿಜನರ ವಿರೋಧ

ಪ್ರತೀ ತಾಲೂಕಿಗೆ 5 ವಾಹನಗಳಲ್ಲಿ ತಂಡವನ್ನು ಕಳುಹಿಸಲಾಗುತ್ತದೆ. ಪ್ರತೀ ಹಳ್ಳಿಗೆ ತೆರಳಿ ಜನರ ಆರೋಗ್ಯವನ್ನು ಆಯಾ ಸ್ಥಳದಲ್ಲೇ ಪರೀಕ್ಷಿಸಿ, ಸ್ಥಳದಲ್ಲೇ ಚಿಕಿತ್ಸೆ ನೀಡುವುದು ಹಾಗೂ ಹೆಚ್ಚಿನ ಸಮಸ್ಯೆ ಇದ್ದರೆ ಕೋವಿಡ್ ಆಸ್ಪತ್ರೆಗಳಿಗೆ ಕಳುಹಿಸಲಾಗುವುದು ಎಂದರು.

ಲಾಕ್‌ಡೌನ್‌ ವಿಸ್ತರಣೆ ಜೊತೆಗೆ 500 ಕೋಟಿ ರೂ. ಪ್ಯಾಕೇಜ್ ಘೋಷಣೆ .

ಜಿಲ್ಲೆಯಲ್ಲಿ ಶೇ 98 ರಷ್ಟು ಸಮೀಕ್ಷಾ ಕಾರ್ಯ ಪೂರ್ಣಗೊಂಡಿದೆ. ಜುಲೈ 1ರೊಳಗೆ ಎಲ್ಲಾ ಹಳ್ಳಿಗಳ ಸಂಪೂರ್ಣ ಸರ್ವೆ ಮುಗಿಸುತ್ತೇವೆ. ಜಿಲ್ಲೆಯಲ್ಲಿ ಏನೇ ಸಮಸ್ಯೆ ಇದ್ದರೂ ಅದನ್ನು ತಾಯಿ ಚಾಮುಂಡೇಶ್ವರಿ ಆದಷ್ಟು ಬೇಗ ಪರಿಹರಿಸುತ್ತಾಳೆ ಎಂಬ ಭರವಸೆ ನನಗಿದೆ ಎಂದರು. 

ಈ ಕಾರ್ಯಕ್ರಮದ   ವಾಹನದಲ್ಲಿ ಇಬ್ಬರು ವೈದ್ಯರು, ಒಬ್ಬರು ಕಿರಿಯ ನರ್ಸ್ ಹಾಗೂ ಒಬ್ಬರು ಲ್ಯಾಬ್ ಟೆಕ್ನಿಷಿಯನ್ ಇರುತ್ತಾರೆ. ಈ ವಾಹನ ನಿತ್ಯ 20 ಹಳ್ಳಿಗಳನ್ನು ಸಂಚರಿಸುತ್ತದೆ. ಆಶಾ ಕಾರ್ಯಕರ್ತೆಯರ ಸಹಾಯದೊಂದಿಗೆ ಪ್ರತಿಯೊಬ್ಬರ ಆರೋಗ್ಯ ತಪಾಸಣೆ ನಡೆಯಲಿದೆ ಎಂದು ಸಚಿವ ಸೋಮಶೇಖರ್ ಹೇಳಿದರು. 

7 ದಿನಗಳಲ್ಲಿ ಎಲ್ಲಾ ಹಳ್ಳಿಗಳಲ್ಲೂ ಆಂಬುಲೆನ್ಸ್ ಸಂಚರಿಸಲಿವೆ. ಕೊರೋನಾ ಲಕ್ಷಣಗಳಿದ್ದರೆ ಅವರಿಗೆ ಹೋಮ್ ಐಸೋಲೇಷನ್‌ಗೆ ಚಿಕಿತ್ಸೆ ವ್ಯವಸ್ಥೆ ಮಾಡುತ್ತಾರೆ. ಎಲ್ಲರಿಗೂ ರ‍್ಯಾಪಿಡ್ ಟೆಸ್ಟ್ ಕಿಟ್‌ಗಳನ್ನು ಕೊಡಲಾಗಿದೆ. ಅವರು ಪರೀಕ್ಷಿಸಿ ಗಂಭೀರ ಸಮಸ್ಯೆ ಇದ್ದರೆ ಕೋವಿಡ್ ಅಸ್ಪತ್ರೆಗೆ ರವಾನಿಸುತ್ತಾರೆ. ಇಲ್ಲವಾದರೆ ಕೋವಿಡ್ ಸೆಂಟರ್ ಗೆ ಕಳುಹಿಸಿಕೊಡಲಾಗುವುದು ಎಂದು ಮಾಹಿತಿ ನೀಡಿದರು.

ಕಾರ್ಯಕ್ರದಲ್ಲಿ ಶಾಸಕರಾದ ಜಿ.ಟಿ. ದೇವೇಗೌಡ, ತನ್ವೀರ್ ಸೇಠ್, ಸಂಸದ ಪ್ರತಾಪ್ ಸಿಂಹ, ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ, ಅಪರ ಜಿಲ್ಲಾಧಿಕಾರಿ ಬಿ.ಎಸ್.ಮಂಜುನಾಥಸ್ವಾಮಿ, ತಹಶೀಲ್ದಾರ್ ರಕ್ಷಿತ್, ಜಿಲ್ಲಾ ಆರೋಗ್ಯ ಅಧಿಕಾರಿ ಡಾ. ಟಿ. ಅಮರನಾಥ್, ನೂಡಲ್ ಅಧಿಕಾರಿ ಡಾ. ಎಲ್.ರವಿ  ಪಾಲ್ಗೊಂಡಿದ್ದರು.

ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್‌ ನ್ಯೂಸ್‌ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona