ಲಾಕ್‌ಡೌನ್ ವಿಸ್ತರಣೆ ಜೊತೆಗೆ 500 ಕೋಟಿ ರೂ. ಪ್ಯಾಕೇಜ್ ಘೋಷಣೆ
* ಜೂನ್ 07ರ ಬಳಿಕವೂ ರಾಜ್ಯದಲ್ಲಿ ಲಾಕ್‌ಡೌನ್ ವಿಸ್ತರಣೆ
*ಲಾಕ್‌ಡೌನ್ ವಿಸ್ತರಣೆ ಜೊತೆಗೆ ಎರಡನೇ ಪ್ಯಾಕೇಜ್ ಘೋಷಿಸಿದ ಸಿಎಂ
* ಒಟ್ಟು 500 ಕೋಟಿ ರೂ. ಪ್ಯಾಕೇಜ್ ಘೋಷಿಸಿದ ಬಿಎಸ್‌ವೈ
ಬೆಂಗಳೂರು, (ಜೂನ್.03): ಕೊರೋನಾ ಎರಡನೇ ಅಲೆಯ ಮೊದಲ ಹಂತದ ಲಾಕ್‌ಡೌನ್ ವೇಳೆ 1,250 ಕೋಟಿ ರೂ. ಮೊತ್ತದ ಪರಿಹಾರ ಪ್ಯಾಕೇಜ್ ಘೋಷಿಸಿದ್ದ ಸಿಎಂ ಬಿಎಸ್‌ವೈ ಈಗ 2ನೇ ಪ್ಯಾಕೇಜ್ ಘೋಷಣೆ ಮಾಡಿದ್ದಾರೆ.
"
ಇಂದು (ಗುರುವಾರ) ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ, ಜೂನ್ 7ರ ನಂತರ ಒಂದು ವಾರ ಲಾಕ್‌ಡೌನ್ ವಿಸ್ತರಣೆ ಮಾಡುವುದಾಗಿ ಅಧಿಕೃತವಾಗಿ ತಿಳಿಸಿದರು. ಇದೇ ವೇಳೇ 500 ಕೋಟಿ ವಿಶೇಷ ಎರಡನೇ ಪ್ಯಾಕೇಜ್ ಇಂದು (ಗುರುವಾರ) ಘೋಷಣೆ ಮಾಡಿದರು.
ಜೂನ್ 07ರ ಬಳಿಕವೂ ರಾಜ್ಯದಲ್ಲಿ ಲಾಕ್‌ಡೌನ್ ವಿಸ್ತರಣೆ: ಸಿಎಂ ಅಧಿಕೃತ ಘೋಷಣೆ
ನೇಕಾರರು, ಚಲನಚಿತ್ರ ಹಾಗೂ ದೂರದರ್ಶನ ನೋಂದಾಯಿತ ಕಾರ್ಮಿಕರಿಗೆ, ಮೀನುಗಾರರು, ಮುಜುರಾಯಿ ಇಲಾಖೆಯ ಅರ್ಚಕರು ಮತ್ತು ಅಡುಗೆ ಸಿಬ್ಬಂದಿ, ಮಸೀದಿ ಬೇಸಿಮಾ ಮೌಜಿನ್‌ಗಳಿಗೆ, ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರಿಗೆ ತಲಾ 3 ಸಾವಿರ ರೂ. ಪರಿಹಾರ ನೀಡುವುದಾಗಿ ಸಿಎಂ ಘೋಷಣೆ ಮಾಡಿದರು.
ಅನುದಾನ ರಹಿತ ಪ್ರಾಥಮಿಕ ಮತ್ತು ಪ್ರೌಢ ಶಾಲಾ ಶಿಕ್ಷಕರಿಗೆ ತಲಾ 5 ಸಾವಿರ ರೂಪಾಯಿ ಪರಿಹಾರ ಘೋಷಣೆ ಮಾಡಲಾಗಿದೆ. ಶಾಲಾ ಮಕ್ಕಳಿಗೆ ಹೆಚ್ಚುವರಿಯಾಗಿ ಜೂನ್ ಮತ್ತು ಜುಲೈನಲ್ಲಿ ಹಾಲಿನ ಪುಡಿ ವಿತರಣೆ ಮಾಡಲಾಗುವುದು ಎಂದು ಸಿಎಂ ಹೇಳಿದರು.