Asianet Suvarna News Asianet Suvarna News

‘ಪಾಕಿಸ್ತಾನದ ಮೇಲೆ ಪ್ರೀತಿಯಿದ್ರೆ ಎಚ್‌ಡಿಕೆ ದೇಶ ಬಿಡಲಿ’

ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರಿಗೆ ಪಾಕಿಸ್ತಾನದ ಮೇಲೆ ಪ್ರೀತಿ ಇದ್ದರೆ ದೇಶ ಬಿಟ್ಟು ಹೋಗಲಿ ಎಂದು ಆರೋಗ್ಯ ಸಚಿವ ಶ್ರೀ ರಾಮುಲು ಹೇಳಿದ್ದಾರೆ. 

Minister Sriramulu Slams HD kumaraswamy in Chitradurga
Author
Bengaluru, First Published Jan 25, 2020, 10:02 AM IST
  • Facebook
  • Twitter
  • Whatsapp

ಚಿತ್ರದುರ್ಗ [ಜ.25]:  ಪಾಕಿಸ್ತಾನ ತೋರಿಸಿಕೊಂಡು ಬಿಜೆಪಿ ವೋಟ್‌ ಪಡೆಯುತ್ತಿದೆ ಎಂಬ ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಹೇಳಿಕೆಗೆ ಕಿಡಿಕಾರಿರುವ ಆರೋಗ್ಯ ಸಚಿವ ಬಿ.ಶ್ರೀರಾಮುಲು, ‘ಕುಮಾರಸ್ವಾಮಿಗೆ ಪಾಕ್‌ ಮೇಲೆ ಪ್ರೀತಿ ಇದ್ರೆ ದೇಶ ಬಿಟ್ಟು ತೊಲಗಲಿ’ ಎಂದು ಹೇಳಿದ್ದಾರೆ. ನಗರದಲ್ಲಿ ಶುಕ್ರವಾರ ಇಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇತ್ತೀಚೆಗೆ ಕುಮಾರಸ್ವಾಮಿ ಅವರಿಗೆ ಪಾಕ್‌ ಮೇಲೆ ಬಹಳ ಪ್ರೀತಿ ಬೆಳೆಯುತ್ತಿದೆ. ಅವರು ಮಾಜಿ ಪ್ರಧಾನಿ ಪುತ್ರ, ಸ್ವತಃ ಎರಡು ಸಲ ಮುಖ್ಯಮಂತ್ರಿ ಆಗಿದ್ದವರು. ಈ ರೀತಿ ಮಾತನಾಡುವುದು ಸರಿಯಲ್ಲ ಎಂದು ತರಾಟೆಗೆ ತೆಗೆದುಕೊಂಡರು.

ಭಾರತ ಹಿಂದೂ ರಾಷ್ಟ್ರ. ಇಲ್ಲಿ ಎಲ್ಲರೂ ಸಮಾನರಾಗಿ ಬಾಳಬೇಕು. ದೇಶ ಒಡೆಯುವ ಷಡ್ಯಂತ್ರಕ್ಕಾಗಿ ಇಲ್ಲಸಲ್ಲದ ಮಾತು ಸರಿಯಲ್ಲ. ದೇಶದ ಜನ ಒಂದಾಗುತ್ತಿದ್ದಾರೆ. ವೋಟ್‌ ಬ್ಯಾಂಕ್‌ ಹೋಗುತ್ತಿದೆ ಎಂಬ ಕಾರಣಕ್ಕೆ ಹೀಗೆಲ್ಲಾ ಕುಮಾರಸ್ವಾಮಿ ಮಾತನಾಡುತ್ತಿದ್ದಾರೆ ಎಂದರು.

ಸಚಿವರು ಬಂದಾಗ ಫುಲ್ ವ್ಯವಸ್ಥೆ, ಹೋದ ಮೇಲೆ ಎಲ್ಲಾ ಗಂಡಾಗುಂಡಿ!.

ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಸಿದ್ದರಾಮಯ್ಯ ಇಂಗ್ಲಿಷ್‌ ಪದ ಬಳಸಿ ಟೀಕಿಸುತ್ತಾರೆ. ಇತ್ತೀಚಿಗೆ ಅವರು ಎಲ್ಲೂ ಕಾಣಿಸ್ತಿಲ್ಲ, ಯಾರಿಗೂ ಬೇಡದ ವ್ಯಕ್ತಿ ಆಗಿದ್ದಾರೆ. ವಿಪಕ್ಷ ಸ್ಥಾನ, ಕೆಪಿಸಿಸಿ ಅಧ್ಯಕ್ಷ ಸ್ಥಾನದ ಲಾಭಿ ನಡೆಯುತ್ತಿದೆ. ಕಾಂಗ್ರೆಸ್‌ ಪಕ್ಷ ಡೆತ್‌ ಆಗಿರುವ ಪಾರ್ಟಿ ಆಗಿದೆ. ಲೀಡರ್‌ಗಳು ಕೂಡ ಡೆಡ್‌ ಆದಂತೆ ಭಾಸವಾಗುತ್ತಿದ್ದು, ಬಾಯಿಗೆ ಬಂದಂತೆ ಮಾತನಾಡುತ್ತಿದ್ದಾರೆ ಎಂದು ವ್ಯಂಗ್ಯವಾಡಿದರು.

ಸರ್ಕಾರಿ ಆಸ್ಪತ್ರೆಗಳಿಗೆ ನೇರ ನೇಮಕಾತಿ: ಮೂರ್ನಾಲ್ಕು ತಿಂಗಳಲ್ಲಿ 3,500 ಮಂದಿ ವೈದ್ಯರ ನೇಮಕ..

ಚೀನಾದಲ್ಲಿ ಪತ್ತೆಯಾಗಿರುವ ಕರೋನಾ ವೈರಸ್‌ ಭಾರತ ಪ್ರವೇಶಿಸದಂತೆ ಕ್ರಮ ವಹಿಸಲಾಗಿದೆ. ಏರ್ಪೋರ್ಟ್‌ನಲ್ಲಿ ತಂಡ ನಿಯೋಜಿಸಲಾಗಿದೆ. ಚೀನಾದಲ್ಲಿ ಇರುವವರ ಕುಟುಂಬಗಳ ಬಗ್ಗೆಯೂ ನಿಗಾ ವಹಿಸಲಾಗಿದೆ ಎಂದು ಶ್ರೀರಾಮುಲು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

Follow Us:
Download App:
  • android
  • ios