‘ಕುಮಾರಸ್ವಾಮಿ ಕ್ಯಾಸೆಟ್‌ ಮನುಷ್ಯ : ಇದು ಅವರಿಗೆ ಹೊಸತಲ್ಲ’

ಮಾಜಿ ಮುಖ್ಯ ಹಾಗೂ ಜೆಡಿಎಸ್ ಮುಖಂಡ ಕ್ಯಾಸೆಟ್ ಮನುಷ್ಯ, ಈ ಹಿಂದೆ ಅವರ ಬಳಿ ಇದ್ದ ವಿಡಿಯೋ ಯಾಕೆ ಬಿಡುಗಡೆ ಮಾಡಿಲ್ಲ ಎಂದು ಕೇಂದ್ರ ಸಚಿವರು ಪ್ರಶ್ನೆ ಮಾಡಿದ್ದಾರೆ. 

Minister Sadananda Gowda Slams Former CM HD Kumaraswamy

ಹಾಸನ [ಜ.11]:  ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಕ್ಯಾಸೆಟ್‌ ಮನುಷ್ಯ. ಅವರಲ್ಲಿ ಇದ್ದ ವಿಡಿಯೋ ಇಷ್ಟುದಿನ ಏಕೆ ಬಿಡುಗಡೆ ಮಾಡಲಿಲ್ಲ ಎಂದು ಮಂಗಳೂರಿನಲ್ಲಿ ನಡೆದ ಗಲಭೆ ಬಗ್ಗೆ ಮಾಜಿ ಸಿಎಂ ಕುಮಾರಸ್ವಾಮಿ ಅವರು ವಿಡಿಯೋ ಬಿಡುಗಡೆ ಮಾಡಿದ ಹಿನ್ನೆಲೆ ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ ಪ್ರಶ್ನಿಸಿದರು.

ತಮ್ಮ ಪಕ್ಷಕ್ಕೆ ತೊಂದರೆ ಆದಾಗಲೆಲ್ಲಾ ಕ್ಯಾಸೆಟ್‌ ತರುತ್ತಾರೆ. ಈ ಕ್ಯಾಸೆಟ್‌ ಅವರಿಗೆ ಒಂದೆರಡು ದಿನದ ಪ್ರಚಾರಕ್ಕಾಗಿ ಅಷ್ಟೆ. ಗಲಭೆ ನಡೆದ ಕೂಡಲೇ ಬಿಡುಗಡೆ ಮಾಡದೆ ಈಗ ಮಾಡಿರುವುದು ಸರ್ವತ ಸರಿಯಲ್ಲ ಎಂದು ಶುಕ್ರವಾರ ಸುದ್ದಿಗಾರೊಂದಿಗೆ ಮಾತನಾಡುತ್ತಾ ಅಸಮಾಧಾನ ವ್ಯಕ್ತಪಡಿಸಿದರು.

ಕರ್ನಾಟಕಕ್ಕೆ ಮೊದಲ ಹಂತದಲ್ಲಿ 1400 ಕೋಟಿ ರು.ಗಳಲ್ಲಿ ಕಳೆದ ವಾರ 600 ಕೋಟಿ ರು. ಬಿಡುಗಡೆಯಾಗಿದೆ. ಈವರೆಗೆ ಕೇಂದ್ರದಿಂದ 1800 ಕೋಟಿ ರು. ಬಿಡುಗಡೆಯಾಗಿದೆ. ಪ್ರಧಾನಿ ಮೋದಿ ನೋಡಿದ್ರೆ ರಫ್‌ ಆ್ಯಂಡ್‌ ಟಫ್‌ ತರಹ ಕಾಣುತ್ತಾರೆ ಅಷ್ಟೆ. ಆದರೆ, ಅವರು ಎಲ್ಲರನ್ನು ಸಮಾನಾಗಿ ಕಾಣುತ್ತಾರೆ. ಎಲ್ಲರ ಮಾತನ್ನೂ ಕೇಳಿಸಿಕೊಳ್ಳುತ್ತಾರೆ. ಕ್ಯಾಬಿನೆಟ್‌ ಸಹೋದ್ಯೋಗಿಗಳ ಜತೆಗೆ ಆತ್ಮೀಯವಾಗಿ ಇರುತ್ತಾರೆ. ಸಿಎಂ ಬಿ.ಎಸ್‌.ಯಡಿಯೂರಪ್ಪ ಭೇಟಿಗೆ ಮೋದಿ ಅವಕಾಶ ನೀಡಿಲ್ಲ ಎಂಬ ಆರೋಪವನ್ನು ಅಲ್ಲಗಳೆದರು.

ಕಣ್ಣೀರು ನಮ್ಮ ಪೇಟೆಂಟ್, ಎಲ್ಲದಕ್ಕೂ ಹಲ್ಲು ಬಿಡೋದಲ್ಲ: ಎಚ್‌ಡಿಕೆ ಟಾಂಗ್.

ಸಂವಿಧಾನದಲ್ಲಿಯೂ ಜಾತಿವಾದ ಇದೆ. ಜಾತಿ ಆಧಾರದಲ್ಲಿ ಮೀಸಲಾತಿ ಕೊಡುವ ಅಂಶಗಳಿಲ್ಲವೇ? ಸಿಎಎ ಸಂವಿಧಾನ ವಿರೋಧಿ ಅಲ್ಲ ಎಂದು ಪ್ರತಿಪಾದಿಸಿದರು.

HDK ಬಿಡುಗಡೆ ಮಾಡಿದ ವಿಡಿಯೋದ ಅಸಲಿಯತ್ತು ಬಟಾ ಬಯಲು!...

ಜಾಗತಿಕ ಆರ್ಥಿಕ ಕುಸಿತದಿಂದ ದೇಶದ ಜಿಡಿಪಿ ಕುಸಿದಿದೆ ಅಷ್ಟೆ. ಇಡೀ ಏಷ್ಯಾದಲ್ಲೆ ದೇಶದ ತೆರಿಗೆ ನೀತಿ ಕಡಿಮೆ ಇದೆ. ಕೇಂದ್ರ ಆರ್ಥಿಕ ಉತ್ತೇಜನಕ್ಕೆ ಅಗತ್ಯ ಕ್ರಮ ಕೈಗೊಂಡಿದೆ. ಟೆಕ್ನಾಲಜಿಯ ದೊಡ್ಡ ಬೆಳವಣಿಗೆ ನಿರುದ್ಯೋಗ ಸೃಷ್ಟಿಗೆ ಕಾರಣ. ಕೇವಲ ಸರ್ಕಾರಿ ಉದ್ಯೋಗವೇ ಉದ್ಯೋಗ ಸೃಷ್ಟಿಯಲ್ಲ. ಖಾಸಗಿ, ಸ್ವಯಂ ಉದ್ಯೋಗ ದೊಡ್ಡ ಪ್ರಮಾಣದಲ್ಲಿ ಸೃಷ್ಟಿಯಾಗುತ್ತಿದೆ ಎಂದು ಹೇಳಿದರು.

ಜಿಎಸ್‌ಟಿ ಸಂಗ್ರಹ ತುಂಬಾ ಕಡಿಮೆಯಾಗಿದೆ ಎಂಬುದನ್ನು ಇದೇ ವೇಳೆ ಸದಾನಂದಗೌಡರು ಒಪ್ಪಿಕೊಂಡರು.

Latest Videos
Follow Us:
Download App:
  • android
  • ios