ಅನಂತ್ ಕುಮಾರ್ ಹೆಗಡೆ ಬಗ್ಗೆ ಪ್ರತಿಕ್ರಿಯೆ ನೀಡಲು ಹೇಸಿಗೆ ಬರುತ್ತದೆ

First Published 15, Jul 2018, 3:43 PM IST
Minister Ramesh Jarkiholi lashes out at Center Minister Ananth Kumar Hegde
Highlights

  • ಅನಂತಕುಮಾರ ಹೆಗಡೆ ಬಿಜೆಪಿಯವರು ಹುಲಿ ಕಾಂಗ್ರೆಸ್ ನವರು ಇಲಿ ಎಂಬ ಹೇಳಿಕೆ ನೀಡಿದ್ದರು
  • ಇಂಥ ವ್ಯಕ್ತಿಯನ್ನು ಎಲ್ಲಿಯೂ ನೋಡಿಲ್ಲ ಎಂದ ಪೌರಾಡಳಿತ ಸಚಿವ

ಬೆಳಗಾವಿ[ಜು.15]: ಕೇಂದ್ರ ಸಚಿವ ಅನಂತ್  ಕುಮಾರ ಹೆಗಡೆ ಮಾತನಾಡುವ ಹೇಳಿಕೆಯ ಬಗ್ಗೆ ಪ್ರತಿಕ್ರಿಯೆ ನೀಡಲು ಹೇಸಿಗೆ ಬರುತ್ತದೆ ಇಂಥ ವ್ಯಕ್ತಿಯನ್ನು ಎಲ್ಲಿಯೂ ನೋಡಿಲ್ಲ ಎಂದು ಪೌರಾಡಳಿತ ಹಾಗೂ ಬಂದರೂ ಮತ್ತು ಒಳನಾಡು ಜಲಸಾರಿಗೆ ಸಚಿವ ರಮೇಶ ಜಾರಕಿಹೊಳಿ ಹೇಳಿದರು.

ಭಾನುವಾರ ಸುವರ್ಣ ವಿಧಾನಸೌಧದ ಸೆಂಟ್ರಲ್ ಹಾಲ್ ನಲ್ಲಿ ಕಸಮುಕ್ತ ನಗರಗಳಿಗೆ ಸ್ಟಾರ್ ರೇಟಿಂಗ್ ನೀಡಲು 14ನೇ ಪ್ರಾದೇಶಿಕ ಸಾಮಥ್ಯಾ೯ಭಿವೃದ್ದಿ ಕಾರ್ಯಾಗಾರವನ್ನು ಉದ್ಘಾಟಿಸಿದ ನಂತರ ಪತ್ರಕರ್ತರೊಂದಿಗೆ ಮಾತನಾಡಿದರು.

 

ಎಂ.ಕೆ.ಹುಬ್ಬಳ್ಳಿಯಲ್ಲಿ ಅಭಿನಂದನಾ ಶಾಸಕರ ಕಾರ್ಯಕ್ರಮಕ್ಕೆ ಆಗಮಿಸಿದ್ದ ಕೇಂದ್ರ ಸಚಿವ ಅನಂತಕುಮಾರ ಹೆಗಡೆ ಬಿಜೆಪಿಯವರು ಹುಲಿ ಕಾಂಗ್ರೆಸ್ ನವರು ಇಲಿ ಎಂಬ ಹೇಳಿಕೆ ನೀಡಿದ್ದರು. ಇದಕ್ಕೆ ಪ್ರತಿಕ್ರಿಯೆ ನೀಡಿದ ಸಚಿವ ರಮೇಶ ಜಾರಕಿಹೊಳಿ ಕೇಂದ್ರ ಸಚಿವ ಹೆಗಡೆ ಬಗ್ಗೆ ಮಾತನಾಡಲು ಹೇಸಿಗೆ ಬರುತ್ತದೆ. ಕೇವಲ ಇಂಥ ಹೊಲಸು ರಾಜಕಾರಣ ಮಾಡುವ ವ್ಯಕ್ತಿಯ ಬಗ್ಗೆ ಮಾತನಾಡಲು ಅಸಹ್ಯ ಎನ್ನಿಸುತ್ತದೆ ಎಂದು ಖಾರವಾಗಿ ಮಾತನಾಡಿದರು.

24*7 ಕುಡಿಯುವ ನೀರು ಹಾಗೂ ಒಳಚರಂಡಿ ಸಮಸ್ಯೆ ರಾಜ್ಯಾದ್ಯಂತ ಇದೆ. ಪ್ರತಿ ಜಿಲ್ಲೆಯಲ್ಲಿ ಸಭೆ ನಡೆಸಿ ಪರಿಹಾರ ಕಂಡುಕೊಳ್ಳಲಾಗುವುದು ಎಂದರು.

loader