ಬೆಳಗಾವಿ(ಸೆ.20): ಉಮೇಶ್ ಕತ್ತಿ ಹಳೆಯ ಗೆಳೆಯ, ಮಂತ್ರಿ ಸ್ಥಾನ ಕೊಟ್ಟರೆ ಖುಷಿ ಪಡುತ್ತೇನೆ ಎಂದು ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ‌ ಹೇಳಿದ್ದಾರೆ. 

ಬೆಳಗಾವಿ ಜಿಲ್ಲೆ ಗೋಕಾಕ್‌ನಲ್ಲಿ ಇಂದು(ಭಾನುವಾರ) ಮಾಧ್ಯಮದವರ ಜೊತೆ ಮಾತನಾಡಿದ ಅವರು, ರಮೇಶ್ ಜಾರಕಿಹೊಳಿ‌, ಎಲ್ಲರೂ ನನ್ನ ಗೆಳೆಯರೇ ಎಲ್ಲರಿಗೂ ಮಂತ್ರಿ ಸ್ಥಾನ‌ ಸಿಕ್ಕರೆ ಒಳ್ಳೆಯದು. ಆದರೆ ಈ ತೀರ್ಮಾನ ಸಿಎಂ ಹಾಗೂ ಹೈಕಮಾಂಡ್ ತಗೆದುಕೊಳ್ಳುತ್ತದೆ ಎಂದು ತಿಳಿಸಿದ್ದಾರೆ. 

ದೇವೇಂದ್ರ ಫಡ್ನವಿಸ್ -ಜಾರಕಿಹೊಳಿ‌ ಭೇಟಿ: ಶಿವಸೇನಾ,ಕಾಂಗ್ರೆಸ್ ವಲಯದಲ್ಲಿ ನಡುಕ ಶುರು

ಮಹಾರಾಷ್ಟ್ರ ಮಾಜಿ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಭೇಟಿ ವಿಚಾರದ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ಧನ್ಯವಾದ ಹೇಳಲು ದೇವೇಂದ್ರ ಫಡ್ನವೀಸ್ ಅವರನ್ನ ಭೇಟಿಯಾಗಿದ್ದೆ, ಫೆ 6ರಂದು ನಾನು ಮಂತ್ರಿಯಾದ ತಕ್ಷಣ ಅವರನ್ನ ಭೇಟಿಯಾಗಬೇಕಿತ್ತು, ಆದರೆ ಕೊರೋನಾ ಹಿನ್ನೆಲೆಯಲ್ಲಿ ಫಡ್ನವಿಸ್ ಭೇಟಿಯಾಗಿರಲಿಲ್ಲ. ದೆಹಲಿಯಲ್ಲಿ ಭೇಟಿಯಾಗಿ ಕೃತಜ್ಞತೆ ಸಲ್ಲಿಸಿದ್ದು ಇದು ಸೌಜನ್ಯಯುತ ಭೇಟಿಯಾಗಿದೆ ಎಂದು ತಿಳಿಸಿದ್ದಾರೆ. ನಾನು ಮಂತ್ರಿಯಾಗಲು ದೇವೇಂದ್ರ ಫಡ್ನವಿಸ್ ಅವರ ಪ್ರಮುಖ ಆಶೀರ್ವಾದವಿದೆ. ಹೀಗಾಗಿ ಥ್ಯಾಂಕ್ಸ್ ಹೇಳಲು  ಫಡ್ನವಿಸ್ ಭೇಟಿಯಾಗಿದ್ದೇನೆ ಎಂದು ಹೇಳಿದ್ದಾರೆ.