ದೇವೇಂದ್ರ ಫಡ್ನವಿಸ್ -ಜಾರಕಿಹೊಳಿ‌ ಭೇಟಿ: ಶಿವಸೇನಾ,ಕಾಂಗ್ರೆಸ್ ವಲಯದಲ್ಲಿ ನಡುಕ ಶುರು

ಸಚಿವ ರಮೇಶ್ ಜಾರಕಿಹೊಳಿ‌ ಮತ್ತು ದೇವೇಂದ್ರ ಫಡ್ನವಿಸ್ ಮಧ್ಯೆ ಮಾತುಕತೆ| ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ‌ ನಡ್ಡಾ ಸೂಚನೆಯಂತೆಯೇ ಹಲವಾರು ವಿಷಯಗಳ ಬಗ್ಗೆ ಚರ್ಚೆ| ರಾಷ್ಟ್ರ ರಾಜಧಾನಿ ನವದೆಹಲಿಯ ಗೌಪ್ಯಸ್ಥಳದಲ್ಲಿ ಭೇಟಿಯಾದ ಉಭಯ ನಾಯಕರು| 

Minister Ramesh Jarakiholi Met With Maharashtra Former CM Devendra Fadnavisgrg

ನವದೆಹಲಿ(ಸೆ.17): ಖ್ಯಾತ ಬಾಲಿವುಡ್‌ ನಟ ಸುಶಾಂತ್ ಸಿಂಗ್ ರಜಪೂತ್ ಸಾವಿನ ಸುತ್ತ ಸೃಷ್ಟಿಯಾದ ಗೊಂದಲ ಮತ್ತು ತಮ್ಮ ವೈಫಲ್ಯಗಳಿಂದ ಜನರ ನಂಬಿಕೆ ಕಳೆದುಕೊಳ್ಳುತ್ತಿರುವ ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ದವ್ ಠಾಕ್ರೆಗೆ ಚಳಿಬಿಡಿಸುವ ಕೆಲಸವನ್ನು ಬಿಜೆಪಿ ಹೈಕಮಾಂಡ್ ಮಾಡುತ್ತಿದೆ ಎಂದು ಹೇಳಲಾಗುತ್ತಿದೆ. 

ಇದಕ್ಕೆ ಪೂರಕವಾಗಿ ಮಹಾರಾಷ್ಟ್ರದ ಮಾಜಿ ಸಿಎಂ ದೇವೇಂದ್ರ ಫಡ್ನವಿಸ್ ಮತ್ತು ರಾಜ್ಯದ ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ‌ ಅವರ ಮಧ್ಯೆ ಒಂದು ಗಂಟೆಗೂ ಹೆಚ್ಚು ಕಾಲ ಚರ್ಚೆ ನಡೆದಿದೆ ಎಂದು ತಿಳಿದು ಬಂದಿದೆ. 
ನವದೆಹಲಿಯ ಗೌಪ್ಯಸ್ಥಳದಲ್ಲಿ ಸಚಿವ ರಮೇಶ್ ಜಾರಕಿಹೊಳಿ‌ ಮತ್ತು ದೇವೇಂದ್ರ ಫಡ್ನವಿಸ್ ಮಧ್ಯೆ ಮಾತುಕತೆ ನಡೆದಿದ್ದು, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ‌ ನಡ್ಡಾ ಅವರ ಸೂಚನೆಯಂತೆಯೇ ಹಲವಾರು ವಿಷಯಗಳನ್ನು ಈ ಉಭಯ ನಾಯಕರು ಚರ್ಚಿಸಿದ್ದಾರೆ ಎಂದು ಹೇಳಲಾಗುತ್ತಿದೆ. 

'ಸಿಎಂ ಸ್ಥಾನದಿಂದ ಬಿಎಸ್‌ವೈ ತೆಗೆಯಬಹುದು : ಬದಲಾವಣೆ ಖಚಿತ'

ಕರ್ನಾಟಕದಲ್ಲಿ ಮೈತ್ರಿ ಸರ್ಕಾರವನ್ನು ಅಧಿಕಾರದಿಂದ ಕೆಳಗಿಳಿಸಿ, ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರುವಂತೆ ಮಾಡಿದ ರಮೇಶ್ ಜಾರಕಿಹೊಳಿ‌, ಮಹಾರಾಷ್ಟ್ರದಲ್ಲೂ ತಮ್ಮ ಹಿಡಿತ ಹೊಂದಿದ್ದು, ಪ್ರಭಾವಿ ನಾಯಕರ ಮಧ್ಯದ ಭೇಟಿ ಶಿವಸೇನಾ ಮತ್ತು ಕಾಂಗ್ರೆಸ್ ವಲಯದಲ್ಲಿ ಭೀತಿ ಸೃಷ್ಟಿಸಿದೆ. 
 

Latest Videos
Follow Us:
Download App:
  • android
  • ios