Asianet Suvarna News Asianet Suvarna News

'ನಾಲ್ಕು ಜನ ಸಿಎಂ ಆಗಲು ಅವಕಾಶ ಕಲ್ಪಿಸಿದರೆ ಕಾಂಗ್ರೆಸ್‌ಗೆ ಅಧಿಕಾರ'

  • ಕಾಂಗ್ರೆಸ್ ಮುಖಂಡರಿಗೆ ಸಚಿವ ಆರ್ ಅಶೋಕ್ ಟಾಂಗ್
  • ಸಿಗದ ಮುಖ್ಯಮಂತ್ರಿ ಹುದ್ದೆಗಾಗಿ ಪಕ್ಷದಲ್ಲಿ ಕಿತ್ತಾಟ
  • ಕರ್ನಾಟಕದಲ್ಲಿ ಕಾಂಗ್ರೆಸ್ ಒಡೆದ ಮನೆ  ಇನ್ನೂ 20 ವರ್ಷ  ರಾಜ್ಯ ಮತ್ತು ಕೇಂದ್ರದಲ್ಲಿ ಬಿಜೆಪಿ ಪಕ್ಷವೇ ಅಧಿಕಾರಕ್ಕೆ 
minister r ashok taunts to congress leaders snr
Author
Bengaluru, First Published Jul 1, 2021, 11:38 AM IST

ಹಾಸನ (ಜು.01): ಸಂವಿಧಾನವನ್ನು ತಿದ್ದುಪಡಿ ಮಾಡಿ ರಾಜ್ಯದಲ್ಲಿ ನಾಲ್ಕು ಜನ ಮುಖ್ಯಮಂತ್ರಿ ಆಗಲು ಅವಕಾಶ ಕಲ್ಪಿಸಿದರೆ ಮಾತ್ರ ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರಬಹುದು ಎಂದು ಕಂದಾಯ ಸಚಿವ ಆರ್. ಅಶೋಕ್ ವ್ಯಂಗ್ಯವಾಡಿದರು. 

ನಗರದ ಪ್ರವಾಸಿ ಮಂದಿರದಲ್ಲಿ ಬುಧವಾ ಮಾಧ್ಯಮದೊಂದಿಗೆ ಮಾತನಾಡಿದ ಅವರು ಕೊರೋನಾ ಆವರಿಸಿದ ವೇಳೆ ರಾಜ್ಯದ ವಿರೋದ ಪಕ್ಷದ ನಾಯಕರು  ಮನೆ ಬಿಟ್ಟು ಆಚೆಗೆ ಬಂದಿರಲಿಲ್ಲ. ಕಳೆದ ವಾರದಿಂದ ಆಚೆಗೆ ಬಂದಿದ್ದಾರೆ ಎಂದರು.

'ರಾಜ್ಯದಲ್ಲಿ ಮತ್ತೊಂದಷ್ಟು ಕಾಂಗ್ರೆಸ್ ಮುಖಂಡರು ಬಿಜೆಪಿಗೆ' ...

ವಿರೊದ ಪಕ್ಷದವರು ಬರು ಟೀಕೆ ಟಿಪ್ಪಣಿ ಮಾಡುತ್ತಿದ್ದಾರೆ. ಕರ್ನಾಟಕದಲ್ಲಿ ಕಾಂಗ್ರೆಸ್ ಒಡೆದ ಮನೆ  ಇನ್ನೂ 20 ವರ್ಷ  ರಾಜ್ಯ ಮತ್ತು ಕೇಂದ್ರದಲ್ಲಿ ಬಿಜೆಪಿ ಪಕ್ಷವೇ ಅಧಿಕಾರಕ್ಕೆ ಬರಲಿದೆ.

ಕೇಂದ್ರದಲ್ಲಿ  ಕಾಂಗ್ರೆಸ್ ಪಕ್ಷಕ್ಕೆ ಪ್ರಬಲವಾದ ವಿರೋಧ ಪಕ್ಷದ ನಾಯಕರಿಲ್ಲ ಎಂದು  ಮಾಜಿ ಸಿಎಂ ಎಚ್ ಡಿ ಕುಮಾರಸ್ವಾಮಿ ಹೇಳಿದ್ದಾರೆ. ನನ್ನ ಸಮ್ಮಿಶ್ರ ಸರ್ಕಾರವನ್ನು ಸಿದ್ದರಾಮಯ್ಯ  ಕೆಡವಿದ್ದಾರೆ ಅಂತಲೂ ಹೆಳಿದ್ದಾರೆ.  ನಾವು ಅವರಿಬ್ಬರ ಹೊಡೆದಾಟ ಗಮನಿಸುತ್ತಿದ್ದೇವೆ. 

ಕಾಂಗ್ರೆಸ್ ಪಕ್ಷದಲ್ಲಿ ಇಂಜಿನ್ ರೆಡಿ ಇಲ್ಲ. ಸರಿಯಾದ ಚಾಲಕನಿಲ್ಲ. ದಲಿತ ಒಕ್ಕಲಿಗ , ಲಿಂಗಾಯತ ಮತ್ತು ಹಿಂದುಳಿದ ವರ್ಗ ಎಂದು ಸಿಎಂ ಕುರ್ಚಿಗೆ ಟವೆಲ್ ಹಾಕಿದ್ದಾರೆ 

Follow Us:
Download App:
  • android
  • ios