ಶಿವಸೇನೆ ನಿಷೇಧ: ಕಾನೂನು ಅವಕಾಶದ ಬಗ್ಗೆ ಪರಿಶೀಲನೆ, ಅಶೋಕ್‌

ಕನ್ನಡ ಅಕ್ಷರ ಮಾಲೆ ಕಲಿಸಿಕೊಟ್ಟು ತಕ್ಕಪಾಠ ಕಲಿಸುತ್ತೇವೆ| ಬೆಳಗಾವಿಯಲ್ಲಿ ಶಿವಸೇನೆಯ ಪುಂಡಾಟಿಕೆ ನಿರಂತರವಾಗಿ ನಡೆಯುತ್ತಿದೆ. ಇದನ್ನು ನಿಲ್ಲಿಸಲು ಸರ್ಕಾರ ಕಠಿಣ ಕ್ರಮ| ಪುಂಡಾಟಿಕೆ ಮಾಡುವ ಎಂಇಎಸ್‌, ಶಿವಸೇನೆ ಕಾರ್ಯಕರ್ತರ ಮೇಲೆ ಕ್ರಮ ಕೈಗೊಳ್ಳಲು ಪೊಲೀಸ್‌ ಇಲಾಖೆ, ಜಿಲ್ಲಾಧಿಕಾರಿಗೆ ಸೂಚನೆ: ಸಚಿವ ಅಶೋಕ| 

Minister R Ashok Talks Over Shiv Sena Ban grg

ಬೆಳಗಾವಿ(ಮಾ.21): ಬೆಳಗಾವಿಯಲ್ಲಿ ಶಿವಸೇನೆ ನಿಷೇಧ ಮಾಡಲು ಕಾನೂನಿನಲ್ಲಿ ಅವಕಾಶ ಇದೆಯೋ? ಇಲ್ಲವೋ? ಎನ್ನುವುದರ ಬಗ್ಗೆ ಸರ್ಕಾರ ಚಿಂತನೆ ಮಾಡಲಿದೆ ಎಂದು ಕಂದಾಯ ಸಚಿವ ಆರ್‌.ಅಶೋಕ ಹೇಳಿದ್ದಾರೆ. 

ಇಲ್ಲಿನ ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿ, ಬೆಳಗಾವಿಯಲ್ಲಿ ಪುಂಡಾಟಿಕೆ ನಡೆಸುವ ಶಿವಸೇನೆ ಒಂದು ರಾಜಕೀಯ ಪಕ್ಷವಾಗಿರುವುದರಿಂದ ಅದನ್ನು ನಿಷೇಧ ಮಾಡಲು ಅಧಿಕಾರ ಇಲ್ಲ. ಅದನ್ನು ನಿಷೇಧ ಮಾಡಲು ಅವಕಾಶ ಇದೆಯೋ ಇಲ್ಲ ಎನ್ನುವುದು ಚರ್ಚೆ ಮಾಡುತ್ತೇವೆ. ಬೆಳಗಾವಿಯಲ್ಲಿ ಪುಂಡಾಟಿಕೆ ನಡೆಸುತ್ತಿರುವ ಶಿವಸೇನೆಗೆ ಸರ್ಕಾರದಿಂದ ಎಬಿಸಿಡಿಯಿಂದ ಹಿಡಿದು ಕನ್ನಡ ಅಕ್ಷರ ಮಾಲೆ ಕಲಿಸಿಕೊಟ್ಟು ತಕ್ಕಪಾಠ ಕಲಿಸಲಾಗುವುದು ಎಂದು ಖಡಕ್‌ ಎಚ್ಚರಿಕೆ ನೀಡಿದರು.

ಬೆಳಗಾವಿಯಲ್ಲಿ ಶಿವಸೇನೆಯ ಪುಂಡಾಟಿಕೆ ನಿರಂತರವಾಗಿ ನಡೆಯುತ್ತಿದೆ. ಇದನ್ನು ನಿಲ್ಲಿಸಲು ಸರ್ಕಾರ ಕಠಿಣ ಕ್ರಮಕೈಗೊಳ್ಳಲಿದೆ. ಪುಂಡಾಟಿಕೆ ಮಾಡುವ ಎಂಇಎಸ್‌, ಶಿವಸೇನೆ ಕಾರ್ಯಕರ್ತರ ಮೇಲೆ ಕ್ರಮ ಕೈಗೊಳ್ಳಲು ಪೊಲೀಸ್‌ ಇಲಾಖೆ, ಜಿಲ್ಲಾಧಿಕಾರಿಗೆ ಸೂಚನೆ ನೀಡುತ್ತೇನೆ. ಅವರನ್ನು ಮಟ್ಟಹಾಕಿ ಶಾಂತಿ ನೆಲೆಸುವ ಕೆಲಸ ಸರ್ಕಾರ ಮಾಡಲಿದೆ ಎಂದರು.

ರಾಸಲೀಲೆ ಸಿಡಿ ಕೇಸ್‌: ಯುವತಿ ಪೋಷಕರಿಗೆ ಎಸ್‌ಐಟಿ ಹುಡುಕಾಟ

ಬೆಳಗಾವಿ ಸೇರಿದಂತೆ ಗಡಿ ವಿಚಾರಕ್ಕೆ ಸಂಬಂಧಿಸಿದಂತೆ ಸರ್ಕಾರ ಹೊಂದಾಣಿಕೆ ಮಾಡುವ ಪ್ರಶ್ನೆಯೇ ಇಲ್ಲ. ನೆಲ, ಜಲ ವಿಚಾರಕ್ಕೆ ಬಂದರೆ ಯಾವುದೇ ಬೆಲೆ ತೆತ್ತಾದರೂ ರಕ್ಷಣೆ ಮಾಡುತ್ತೇವೆ. ಶಿವಸೇನೆಯ ಪುಂಡಾಟಿಕೆಗೆ ಸರ್ಕಾರ ಕ್ರಮ ಕೈಗೊಳ್ಳುತ್ತದೆ ಎಂದು ಪುನರುಚ್ಚರಿಸಿದರು.

ಅರುಣ ಸಿಂಗ್‌ ಜೊತೆ ಚರ್ಚೆ:

ಬೆಳಗಾವಿ ಲೋಕಸಭಾ ಉಪಚುನಾವಣೆಯ ಕುರಿತು ಶುಕ್ರವಾರ ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್‌ ಸಿಂಗ್‌ ಬೆಂಗಳೂರಿಗೆ ಬಂದ ಸಂದರ್ಭದಲ್ಲಿ ಚರ್ಚೆಯಾಗಿದೆ. ಆಕಾಂಕ್ಷಿಗಳು ಹೆಚ್ಚಿದ್ದಾರೆ. ಸುರೇಶ ಅಂಗಡಿ ಅವರ ಕುಟುಂಬವು ಬಿಜೆಪಿಯಲ್ಲಿ ಒಡನಾಟ ಇದೆ. ಅದನ್ನು ಕೂಡ ನಾನು ಕೇಂದ್ರದ ನಾಯಕರ ಗಮನಕ್ಕೆ ತಂದಿದ್ದೇನೆ. ಅಲ್ಲದೆ ಕಾರ್ಯಕರ್ತರು ಸಹ ತುಂಬಾ ಜನ ಇದ್ದಾರೆ. ಅಂತಿಮವಾಗಿ ಹೈಕಮಾಂಡ್‌ ಯಾರಿಗೆ ಮಣೆ ಹಾಕುತ್ತದೆ ಎನ್ನುವುದು ಕಾದು ನೋಡಬೇಕಿದೆ ಎಂದರು.

Latest Videos
Follow Us:
Download App:
  • android
  • ios