ಒತ್ತುವರಿ ಭೂಮಿ ಗುತ್ತಿಗೆ ನೀಡಲು ನಾಲ್ಕು ಹಂತದ ಸ್ಲ್ಯಾಬ್, ಸಚಿವ ಅಶೋಕ್
* ಕೃಷಿ ಚಟುವಟಿಕೆಗೆ ಒತ್ತುವರಿ ಭೂಗಳ್ಳರು ಹಣೆಪಟ್ಟಿಯಿಂದ ಶೀಘ್ರ ಮುಕ್ತ
* 5 ಕುಟುಂಬಗಳಿಗೆ ಇನ್ನೊಂದು ತಿಂಗಳಲ್ಲಿ ಪರ್ಯಾಯ ಭೂಮಿ
* ಕಾಫಿನಾಡಿನಲ್ಲಿ ಕಾಫಿಬೆಳೆಗಾರರ ಸಮಾವೇಶದಲ್ಲಿ ಆರ್ ಅಶೋಕ್ ಹೇಳಿಕೆ
ವರದಿ : ಆಲ್ದೂರು ಕಿರಣ್ ಏಷ್ಯಾನೆಟ್ ಸುವರ್ಣ ನ್ಯೂಸ್ ಚಿಕ್ಕಮಗಳೂರು
ಚಿಕ್ಕಮಗಳೂರು, (ಏ.28) : ಕಳೆದ ಮೂರು ವರ್ಷಗಳ ಹಿಂದೆ ಅತೀವೃಷ್ಠಿಯಿಂದಾಗಿ ಮನೆ, ಜಮೀನು ಎಲ್ಲವನ್ನೂ ಕಳೆದುಕೊಂಡಿದ್ದ ಚಿಕ್ಕಮಗಳೂರು ಮೂಡಿಗೆರೆ ತಾಲ್ಲೂಕು ಮಲೆಮನೆ ಗ್ರಾಮದ 5 ಸಂತ್ರಸ್ಥ ಕುಟುಂಬಗಳಿಗೆ ಕಂದಾಯ ಸಚಿವ ಆರ್ ಅಶೋಕ್ ಪರ್ಯಾಯ ಭೂಮಿ ನೀಡುವ ಬಗ್ಗೆ ಭರವಸೆ ನೀಡಿದ್ದಾರೆ.
ಚಿಕ್ಕಮಗಳೂರಿನಲ್ಲಿ ಇಂದು (ಗುರುವಾರ) ಸುದ್ದಿಗೋಷ್ಠಿಯಲ್ಲಿ ಮಾತಾಡಿದ ಅವರು, ಮೂರು ವರ್ಷಗಳಿಂದ ಪರಿಹಾರ ಸಿಗದ ಹಿನ್ನೆಲೆಯಲ್ಲಿ ದಯಾ ಮರಣ ಕೋರಿ ಈ ಕುಟುಂಬಗಳು ರಾಷ್ಟ್ರಪತಿಗಳಿಗೆ ಪತ್ರ ಬರೆದ ಕುರಿತು ಸಚಿವರ ಗಮನ ಸೆಳೆದಾಗ, ಈ ಬಗ್ಗೆ ಇಂದು ಬೆಳಗ್ಗೆ ಜಿಲ್ಲಾಧಿಕಾರಿಗಳ ಜೊತೆ ಚರ್ಚಿಸಿದ್ದೇನೆ. ಇನ್ನೊಂದು ತಿಂಗಳಲ್ಲಿ ಪರಿಹಾರ ಸಿಗಲಿದೆ ಎಂದು ಹೇಳಿದರು.
ಚಿಕ್ಕಮಗಳೂರು: ದಶಕಗಳಿಂದ ಆತಂಕದಲ್ಲೇ ಬದುಕುತ್ತಿದ್ದ ಭೂ ಒತ್ತುವರಿದಾರರಿಗೆ ಗುಡ್‌ನ್ಯೂಸ್
ಭೂಮಿ ಗುತ್ತಿಗೆ ನೀಡಲು ನಾಲ್ಕು ಹಂತದ ಸ್ಲ್ಯಾಬ್
ಸರ್ಫೇಸಿ ಕಾಯ್ದೆ ಬಳಸಿ ಬ್ಯಾಂಕುಗಳು ಕಾಫಿ ಬೆಳೆಗಾರರ ತೋಟಗಳನ್ನು ಮುಟ್ಟುಗೋಲು ಹಾಕುತ್ತಿರುವ ಹಿನ್ನೆಲೆಯಲ್ಲಿ ಕಾಯಿದೆಗೆ ತಿದ್ದುಪಡಿ ತರಬೇಕು ಎನ್ನುವ ಒತ್ತಾಯ ಇದೆ. ಈ ಬಗ್ಗೆ ಕೇಂದ್ರ ಸಚಿವರೊಂದಿಗೆ ಚರ್ಚಿಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.ಕಂದಾಯ ಒತ್ತುವರಿ ಮಾಡಿ ಕಾಫಿ ತೋಟ ಮಾಡಿರುವವರಿಗೆ ಭೂಮಿ ಗುತ್ತಿಗೆ ನೀಡಲು ನಾಲ್ಕು ಹಂತದ ಸ್ಲ್ಯಾಬ್ ಮಾಡಬೇಕು ಎಂದು ಆಲೋಚಿಸಲಾಗಿದೆ. ಕೇರಳದಲ್ಲಿ ರಬ್ಬರ್ ಬೆಳೆಗಾರರಿಗೆ ಒತ್ತುವರಿ ಭೂಮಿಯನ್ನು ಗುತ್ತಿಗೆ ನೀಡಲಾಗಿದೆ. ಅದೇ ಮಾದರಿಯನ್ನು ನಾವು ಇಲ್ಲಿ ಅಳವಡಿಸುವುದಿಲ್ಲ. ಸಾಕಷ್ಟು ಬದಲಾವಣೆ ತರಲಾಗುವುದು ಎಂದರು.
ಇನ್ನೊಂದು ಸಭೆ ನಡೆಸಿ ಕಾಯ್ದೆಗೆ ತಿದ್ದುಪಡಿ
ಮೇ.11 ರಂದು ಕೊಡಗಿನಲ್ಲಿ ಕಾಫಿಬೆಳೆಗಾರರೊಂದಿಗೆ ಸಭೆ ಮಾಡಿದ ನಂತರ ರೆವಿನ್ಯೂ ಕಾಯ್ದೆಗೆ ತಿದ್ದುಪಡಿ ತರಲು ತೀರ್ಮಾನಿಸಲಾಗಿದೆ ಎಂದರು.ನೂರಾರು ಎಕರೆ ತೋಟ ಹೊಂದಿರುವ ಬೆಳೆಗಾರರು, ಕಂಪನಿ ತೋಟಗಳನ್ನು ಗುತ್ತಿಗೆ ವ್ಯಾಪ್ತಿಯಿಂದ ಹೊರಗಿಡಲಾಗುವುದು ಎಂದು ಹೇಳಿದರು.
ಕೋರೋನಾ 4ನೇ ಅಲೆ ಬಗ್ಗೆ ಜನರಲ್ಲಿ ಜಾಗೃತಿ
ಚಿಕ್ಕಮಗಳೂರಿನಲ್ಲಿ ಇಂದು (ಗುರುವಾರ) ಸುದ್ದಿಗೋಷ್ಠಿಯಲ್ಲಿ ಮಾತಾಡಿ ಕೋರೋನಾ 4ನೇ ಅಲೆ ಈಗಾಗಲೇ ವಿಶ್ವದಲ್ಲಿ ಆರಂಭವಾಗಿದೆ. ದೆಹಲಿ , ಮುಂಬೈ, ಕೇರಳ ಆದ ಮೇಲೆ ರಾಜ್ಯದಲ್ಲಿ ಕೋರೋನಾ 4ನೇ ಅಲೆ ಆರಂಭವಾಗಿಲಿದೆ. ಜನರು ಬೋಸ್ಟರ್ ಡೋಸ್ ಹಾಕಿಸಿಕೊಳ್ಳಬೇಕು, ಕೋವಿಡ್ ನಿಯಂತ್ರಣ ಮಾಡುವಲ್ಲಿ ಸರ್ಕಾರ ಕ್ರಮ ತೆಗೆದುಕೊಳ್ಳುತ್ತೇ, ಇದಕ್ಕಾಗಿ ಬೇಕಾದಂತಹ ತಯಾರಿಯನ್ನು ಸರ್ಕಾರ ಆರಂಭಿಸಿದೆ. ಜನರಲ್ಲಿ ಜಾಗೃತಿ ಮೂಡಿಸುವ ಕೆಲಸವನ್ನು ಸರ್ಕಾರ ಮಾಡಲಿದೆ. ಇದಕ್ಕೆ ಬೇಕಾಗುವ ಅನುದಾನವನ್ನು ಕಂದಾಯ ಇಲಾಖೆಯಿಂದಲೂ ಬಿಡುಗೆಡೆ ಮಾಡಲಾಗುವುದು ಎಂದರು.