ಕಾರವಾರ [ಜ.23]: ಡಿ.ಕೆ. ಶಿವಕುಮಾರ್ ಪೌರತ್ವದ ದಾಖಲೆ ನೀಡುವುದೂ ಬೇಡ, ಚುನಾವಣೆಗೆ ನಿಲ್ಲಿವುದೂ ಬೇಡ ಎಂದು ಕಂದಾಯ ಸಚಿವ ಆರ್. ಅಶೋಕ್ ತಿರುಗೇಟು ನೀಡಿದ್ದಾರೆ.

ಕುಮಟಾದಲ್ಲಿ ಮಾತನಾಡಿ, ಪೌರತ್ವದ ದಾಖಲೆ ನೀಡುವುದಿಲ್ಲ ಎಂಬ ಡಿ. ಕೆ. ಶಿವಕುಮಾರ ಕುರಿತು ಹೇಳಿಕೆಗೆಪ್ರತಿಕ್ರಿಯಿಸಿ, ಡಿ.ಕೆ. ಶಿವಕುಮಾರ ಹೇಳಿಕೆಯನ್ನು ಸ್ವಾಗತಿಸುತ್ತೇನೆ ಎಂದರು. 

ಈ ದೇಶದ ಸಂವಿಧಾನವನ್ನೇ ಒಪ್ಪಿಕೊಳ್ಳದ ಅವರು ಯಾಕೆ ದಾಖಲೆ ನೀಡುವುದಿಲ್ಲ? ದಾಖಲೆ ನೀಡದಿದ್ದಲ್ಲಿ ಚುನಾವಣೆಗೆ ನಿಲ್ಲುವಂತಿಲ್ಲ. ಇದರಿಂದ ಅವರಿಗೂ ಒಳ್ಳೆಯದು, ರಾಜ್ಯದ ಜನರಿಗೂ ಒಳ್ಳೆಯದಾಗುತ್ತದೆ. ಡಿ.ಕೆ. ಶಿವಕುಮಾರ್ ಅವರೇ ದಯವಿಟ್ಟು ನೀವು ದಾಖಲೆ ಕೊಡಬೇಡಿ, ಚುನಾವಣೆಗೂ ನಿಲ್ಲಬೇಡಿ ಎಂದು ಪುನರುಚ್ಚರಿಸಿದರು.

ಅಬ್ಬರಿಸಿ ಬೊಬ್ಬಿರಿದ ಟಗರು ಸಿದ್ದು ಕಾಂಗ್ರೆಸ್‌ನಲ್ಲೀಗ ಒಂಟಿ ಒಂಟಿ..!..

ಕುಮಾರಸ್ವಾಮಿ ಕ್ಷಮೆ ಕೇಳಬೇಕು: ಮಂಗಳೂರು ಏರ್‌ಪೋರ್ಟ್‌ನಲ್ಲಿ ಬಾಂಬ್ ಇಟ್ಟ ಪ್ರಕರಣದಲ್ಲಿ ಬೇಜವಾಬ್ದಾರಿಯಿಂದ ಮಾತನಾಡಿದ ಎಚ್.ಡಿ. ಕುಮಾರಸ್ವಾಮಿ ರಾಜ್ಯದ ಜನರಲ್ಲಿ ಕ್ಷಮೆ ಯಾಚಿಸಬೇಕು ಎಂದು ಕಂದಾಯ ಸಚಿವ ಆರ್. ಅಶೋಕ್ ಹೇಳಿದ್ದಾರೆ. ಬಾಂಬ್ ಇಟ್ಟಿದ್ದು ಪೊಲೀಸರ ಅಣಕು ಪ್ರದರ್ಶನ ಎಂಬ ಹೇಳಿಕೆಗೆ ಆಕ್ರೋಶ ವ್ಯಕ್ತಪಡಿಸಿದ ಆರ್. ಅಶೋಕ್, ಕುಮಾರಸ್ವಾಮಿ ಬೇಜವಾಬ್ದಾರಿಯಿಂದ ಮಾತನಾಡಿದ್ದಾರೆ. ರಾಜ್ಯದಲ್ಲಿ ಬಿಜೆಪಿ, ಜೆಡಿಎಸ್ ಯಾವುದೆ ಸರ್ಕಾರ ಇದ್ದರೂ ಪೊಲೀಸರು ಬೇರೆ ಬೇರೆಯಾಗಿರುವುದಿಲ್ಲ. ಎಲ್ಲ ಪೊಲೀಸರು ಎಲ್ಲ ಸರ್ಕಾರದ ಅವಧಿಯಲ್ಲೂ ಇರುತ್ತಾರೆ. ಅವರ ಕರ್ತವ್ಯ ಅವರು ಮಾಡುತ್ತಾರೆ. ಅವರ ಧೈರ್ಯ ಕುಂದಿಸುವುದು ಸರಿಯಲ್ಲ. ಪೊಲೀಸ್ ಇಲಾಖೆಯನ್ನು ಕಳಪೆ, ಕೆಲಸಕ್ಕೆ ಬಾರದವರು ಎಂದು ಬಿಂಬಿಸುವುದು ಸರಿಯಲ್ಲ ಎಂದರು.

ಸಿದ್ದರಾಮಯ್ಯ ಬಗ್ಗೆ ಪರಂ, ಡಿಕೆಶಿ ಬಹಿರಂಗ ಆಕ್ಷೇಪ...

ಸಿಎಎ ಜಾರಿಗೊಳಿಸುತ್ತೇವೆ: ಬಾಂಗ್ಲಾ ವಲಸಿಗರ ಕುರಿತು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಹೇಳಿಕೆ ಕುರಿತು ಪ್ರತಿಕ್ರಿಯಿಸಿದ ಆರ್. ಅಶೋಕ್, ದೇಶಕ್ಕೆ ಸ್ವಾತಂತ್ರ್ಯ ದೊರಕಿ 70 ವರ್ಷಗಳಾಗಿವೆ. ಆಗಿನಿಂದಲೂ ಬಿಜೆಪಿ ಸರ್ಕಾರವಿತ್ತಾ? ಬಿಜೆಪಿಯ ಆಡಳಿತ 12 ವರ್ಷ ಬಿಟ್ಟರೆ ಉಳಿದ 60 ವರ್ಷಗಳ ಕಾಲ ಕಾಂಗ್ರೆಸ್ ರಾಜ್ಯಭಾರ ಮಾಡಿದೆ. ಬಿಜೆಪಿ ಬಂದ ಮೇಲೆ ಬಾಂಗ್ಲಾ ವಲಸಿಗರನ್ನು ತಡೆದಿದ್ದೇವೆ. ಯಾವುದೇ ಕಾರಣಕ್ಕೂ ಕರ್ನಾಟಕದಲ್ಲಿ ಸಿಎಎ ಜಾರಿಗೊಳಿಸದೆ ಬಿಡುವುದಿಲ್ಲ. ಆ ಕೆಲಸ ನಾವು ಮಾಡುತ್ತೇವೆ ಎಂದರು.