ಹುಬ್ಬಳ್ಳಿ (ಮಾ.21):  ಅಂಬೇಡ್ಕರ್‌ ಕಾಲೋನಿಯ ಕಲ್ಲಪ್ಪ ಯಲ್ಲಪ್ಪ ದೊಡ್ಡಮನಿ ಅವರ ನಿವಾಸದಲ್ಲಿ ಸಚಿವ ಅಶೋಕ್‌ ಅವರೇ ಹೇಳಿ, ಚಹಾ ಮಾಡಿಸಿಕೊಂಡು ಕುಡಿದರು. 

ಕಟ್ಟೆಮೇಲೆ ಕುಳಿತು ಗ್ರಾಮಸ್ಥರ ಸಮಸ್ಯೆ ಆಲಿಸುತ್ತಿದ್ದ ಅಶೋಕ್‌, ಈ ವೇಳೆ ಆ ಮನೆಯ ಯಜಮಾನರನ್ನು ಕರೆದು ಚಹಾ ಮಾಡಿಸುವಂತೆ ಸೂಚಿಸಿದರು. 

ಅಕ್ರಮ ಸಾಗುವಳಿ ಸಕ್ರಮಕ್ಕೆ ಮತ್ತೆ ಅರ್ಜಿ ಆಹ್ವಾನ ...

ಅದರಂತೆ ಅಲ್ಲಿದ್ದವರಿಗೆಲ್ಲ ಮನೆಯವರು ಚಹಾ ಮಾಡಿದರು. ಬಾಗಿಲು ಪಕ್ಕದಲ್ಲೇ ಕುಳಿತಿದ್ದ ಸಚಿವ ಆರ್‌.ಅಶೋಕ್‌ ಮುಂದೆ ಆ ಮನೆಯ ಬಾಲಕಿ ಚಹಾ ತಟ್ಟೆತಂದಿಟ್ಟಳು.

 ಆಗ ಸಚಿವರೇ ಚಹಾದ ತಟ್ಟೆಎತ್ತಿ ಎಲ್ಲರಿಗೂ ಚಹಾ ನೀಡಿದರು. ತಾವೂ ಚಹಾ ಸೇವಿಸಿದರು. ಬಳಿಕ ಆ ಮನೆಯ ಬಾಲಕಿಯನ್ನು ಮುದ್ದು ಮಾಡಿ ಖುಷಿಪಟ್ಟರು. ಇದೇ ವೇಳೆ ಕಾಲೋನಿಯ ವತಿಯಿಂದ ಅಂಬೇಡ್ಕರ್‌ ಭಾವಚಿತ್ರ ಕೊಟ್ಟು ಸಚಿವರನ್ನು ಸನ್ಮಾನಿಸಲಾಯಿತು.