ಬೆಳ್ಳಂಬೆಳಗ್ಗೆ ಕುಡಿದು ಕಚೇರಿಗೆ ಬಂದಿದ್ದ ಹಾಗೂ ಗೈರಾಗಿದ್ದ ಇಬ್ಬರು ನೌಕರರನ್ನು ಸಸ್ಪೆಂಡ್ ಮಾಡಿ ಸಚಿವ ಪ್ರಭು ಚೌಹಾಣ್ ಆದೇಶ ನೀಡಿದ್ದಾರೆ. 

 ಬೀದರ್ (ಸೆ.09) :ಪಶು ಸಂಗೋಪನಾ ಸಚಿವ ಪ್ರಭು ಚೌಹಾಣ್ ಬೀದರ್ ಪ್ರವಾಸದಲ್ಲಿದ್ದು ಈ ವೇಳೆ ಇಬ್ಬರು ನೌಕರರನ್ನು ಸ್ಥಳದಲ್ಲಿಯೇ ಸಸ್ಪೆಂಡ್ ಮಾಡಿ ಆದೇಶ ನೀಡಿದ್ದಾರೆ. 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಇಲ್ಲಿನ ಪಶು ಸಂಗೋಪನಾ ಇಲಾಖೆಗೆ ತೆರಳಿದ್ದ ವೇಳೆ ಬೆಳ್ಳಂಬೆಳಗ್ಗೆಯೇ ಸರಾಯಿ ಕುಡಿದು ಕಚೇರಿಗೆ ಬಂದಿದ್ದ ಓರ್ವ ನೌಕರ ಹಾಗೂ ಕಚೇರಿಗೆ ಗೈರಾಗಿದ್ದ ಇನ್ನೋರ್ವನನ್ನು ಸಸ್ಪೆಂಡ್ ಮಾಡಲು ಸೂಚನೆ ನೀಡಿದರು. 

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಸಚಿವರು ಪಶು ಸಂಗೋಪನಾ ಇಲಾಖೆಗೆ ಸಚಿವ ಪ್ರಭು ಚೌಹಾಣ್ ಭೇಟಿ ನಿಡಿದ್ದ ವೇಳೆ ಓರ್ವ ಡಿ ದರ್ಜೆ ನೌಕರ ಸರಾಯಿ ಕುಡಿದು ಬಂದಿದ್ದರೆ, ಇನ್ನೋರ್ವ ಗೈರಾಗಿದ್ದು, ಇಬ್ಬರನ್ನು ತಕ್ಷಣವೇ ಅಮಾನತು ಮಾಡುವಂತೆ ಸೂಚಿಸಿದರು. 

ಕುಡಿದು ಬಂದು ಸಚಿವರೊಂದಿಗೆ ಚರ್ಚೆಗೆ ಇಳಿದಿದ್ದ ನೌಕರನ್ನು ಅಮಾನತು ಮಾಡಲು ಸೂಚಿಸಿದರು. 

"