Asianet Suvarna News Asianet Suvarna News

ಕನ್ನಡಪ್ರಭದ ‘ಸುಳ್‌ ಸುದ್ದಿ’ ಮಜವಾಗಿರುತ್ತೆ ಎಂದ ಸಚಿವ ಸುರೇಶ್‌ ಕುಮಾರ್‌

ಕೊರೋನಾ ಹಿನ್ನೆಲೆಯಲ್ಲಿ ಮಕ್ಕಳ ಶೈಕ್ಷಣಿಕ ಪ್ರಗತಿ ಹಾಗೂ ಮಕ್ಕಳ ಆಟ ಪಾಠಗಳ ಕುರಿತು ಕನ್ನಡಪ್ರಭ ಪತ್ರಿಕೆಯ ‘ಸುಳ್‌ ಸುದ್ದಿ’ ಕಾಲಂ ನೆನಪಿಸಿಕೊಂಡ ಸಚಿವ ಸುರೇಶ್‌ ಕುಮಾರ್‌| ಸಾಮಾಜಿಕ ಅಂತರದೊಂದಿಗೆ ಶಾಲಾ ತರಗತಿ ನಡೆಸುವುದು ಹೇಗೆ? ಈ ವಿಚಾರ ಬಂದಾಗ ನನಗೆ ನೆನಪಾಗುವುದು ಸುಳ್‌ ಸುದ್ದಿ ಕಾಲಂ ಎಂದ ಸಚಿವರು|

Minister of Education Suresh Kumar Talks Over KannadaPrabha News Paper
Author
Bengaluru, First Published Jun 4, 2020, 11:44 AM IST

ಬಾಗಲಕೋಟೆ(ಜೂ.04): ಕನ್ನಡಪ್ರಭದಲ್ಲಿ ಬರುವ ‘ಸುಳ್‌ ಸುದ್ದಿ’ ಕಾಲಂ ಬಗ್ಗೆ ಶಿಕ್ಷಣ ಸಚಿವ ಸುರೇಶ್‌ ಕುಮಾರ್‌ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. 

ನಗರದಲ್ಲಿ ಬುಧವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೊರೋನಾ ಹಿನ್ನೆಲೆಯಲ್ಲಿ ಮಕ್ಕಳ ಶೈಕ್ಷಣಿಕ ಪ್ರಗತಿ ಹಾಗೂ ಮಕ್ಕಳ ಆಟ ಪಾಠಗಳ ಕುರಿತು ಕನ್ನಡಪ್ರಭ ಪತ್ರಿಕೆಯ ‘ಸುಳ್‌ ಸುದ್ದಿ’ ಕಾಲಂ ನೆನಪಿಸಿಕೊಂಡರು. ಸಾಮಾಜಿಕ ಅಂತರದೊಂದಿಗೆ ಶಾಲಾ ತರಗತಿ ನಡೆಸುವುದು ಹೇಗೆ? ಈ ವಿಚಾರ ಬಂದಾಗ ನನಗೆ ನೆನಪಾಗುವುದು ಸುಳ್‌ ಸುದ್ದಿ ಕಾಲಂ ಎಂದರು.

ಬಿಜೆಪಿಯಲ್ಲಿ ಭಿನ್ನಮತ: 'ಸಚಿವ ಸ್ಥಾನ ಸಿಗದೆ ಹೋದ್ರೆ ಕಾರ್ಯಕರ್ತನಾಗಿರುವೆ' 

ಇತ್ತೀಚಿಗೆ ಸುಳ್‌ ಸುದ್ದಿ ಕಾಲಂನಲ್ಲಿ ‘ಕಬಡ್ಡಿ, ಕುಸ್ತಿಗೆ 6 ಅಡಿ ಸಾಮಾಜಿಕ ಅಂತರದೊಂದಿಗೆ ಅನುಮತಿ’ ಎಂಬ ವಾಕ್ಯದೊಂದಿಗೆ ಸುಳ್‌ ಸುದ್ದಿ ಬಂದಿತ್ತು ಎಂದ ಸಚಿವರು, ಈ ಸುಳ್‌ ಸುದ್ದಿ ಕಾಲಂ ನಿಜಕ್ಕೂ ಮಜವಾಗಿರುತ್ತೆ. ನೀವು ನೋಡಿರಬಹುದು ಎಂದು ಹೇಳಿದರು. 
 

Follow Us:
Download App:
  • android
  • ios