Asianet Suvarna News Asianet Suvarna News

ಆಲಿಬಾಬ ಕಥೆಗೆ ಹೋಲಿಸಿದ ಜೆಡಿಎಸ್‌ ಮುಖಂಡನಿಗೆ ಸಚಿವ ನಾರಾಯಣಗೌಡರ ತರಾಟೆ

ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಮಾತನಾಡುತ್ತ ಸಚಿವ ನಾರಾಯಣಗೌಡರನ್ನು ಆಲಿಬಾಬ ಕಥೆಗೆ ಹೋಲಿಸಿದ ಜೆಡಿಎಸ್‌ ಮುಖಂಡನಿಗೆ ಸಚಿವ ನಾರಾಯಣಗೌಡ ವೇದಿಕೆ ಮೇಲೆಯೇ ತರಾಟೆ ತೆಗೆದುಕೊಂಡಿದ್ದಾರೆ.

Minister Narayan Gowda got angry after hearing the Alibaba story told by the JDS leader gow
Author
First Published Dec 17, 2022, 9:05 PM IST

ವರದಿ : ನಂದನ್ ರಾಮಕೃಷ್ಣ, ಏಷ್ಯಾನೆಟ್ ಸುವರ್ಣ ನ್ಯೂಸ್

ಮಂಡ್ಯ(ಡಿ.17): ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಮಾತನಾಡುತ್ತ ಸಚಿವ ನಾರಾಯಣಗೌಡರನ್ನು ಆಲಿಬಾಬ ಕಥೆಗೆ ಹೋಲಿಸಿದ ಜೆಡಿಎಸ್‌ ಮುಖಂಡನಿಗೆ ಸಚಿವ ನಾರಾಯಣಗೌಡ ವೇದಿಕೆ ಮೇಲೆಯೇ ತರಾಟೆ ತೆಗೆದುಕೊಂಡಿದ್ದಾರೆ. ಮಂಡ್ಯದ ಕೆಆರ್ ಪೇಟೆ ಪಟ್ಟಣದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ವತಿಯಿಂದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮದಲ್ಲಿ ಸಚಿವ ನಾರಾಯಣಗೌಡ, ಕರವೇ ಅಧ್ಯಕ್ಷ ಟಿಎ ನಾರಾಯಣಗೌಡ ಸೇರಿದಂತೆ ಕಾಂಗ್ರೆಸ್, ಜೆಡಿಎಸ್‌ ಪಕ್ಷಗಳ ಮುಖಂಡರು ಭಾಗವಹಿಸಿದ್ದರು. ಕಾರ್ಯಕ್ರಮ ಕೂಡ ಸುಸೂತ್ರವಾಗಿ ನಡೆಯುತ್ತಿತ್ತು. ಆದರೆ ಕನ್ನಡ ನಾಡು, ನುಡಿ ಆಚರಣೆ ಆಗಬೇಕಿದ್ದ ವೇದಿಕೆಗೆ ದಿಢೀರ್ ಹೈಡ್ರಾಮಕ್ಕೆ ಸಾಕ್ಷಿಯಾಗಿಬಿಡ್ತು. ಕಾರ್ಯಕ್ರಮದಲ್ಲಿ ಮಾತು ಆರಂಭಿಸಿದ್ದ ಜೆಡಿಎಸ್‌ ಪುರಸಭಾ ಸದಸ್ಯ ಬಸ್ ಸಂತೋಷ್ ಮಾತಿನುದ್ದಕ್ಕೂ ಸಚಿವ ನಾರಾಯಣಗೌಡ ಅವರನ್ನು ಕುಟುಕಿ ಮಾತನಾಡಲು ಆರಂಭಿಸಿದರು.

ಆಲಿಬಾಬನ ಕಥೆ ಮೂಲಕ ಭ್ರಷ್ಟಾಚಾರದ ಬಗ್ಗೆ ಮಾತನಾಡಲು ಹೋದ ಬಸ್ ಸಂತೋಷ್ ಆಲಿಬಾಬ ಮತ್ತು ಅವನ ಜೊತೆ 40 ಜನ ಕಳ್ಳರು ಎಂಬ ಕಥೆ ಕೇಳಿದ್ದೇವೆ. ಆದ್ರೆ ಕೆ.ಆರ್.ಪೇಟೆಯ ಆಲಿಬಾಬನ ಜೊತೆ 4 ಮಂದಿ ಕಳ್ಳರಷ್ಟೆ ಇದ್ದಾರೆ. ರಾಜ್ಯ ಉದ್ದಾರ ಆಗಬೇಕು ಅಂದ್ರೆ ಭ್ರಷ್ಟಚಾರ ತೊಲಗಬೇಕು ಎಂದು ಪರೋಕ್ಷವಾಗಿ ಸಚಿವ ನಾರಾಯಣಗೌಡರನ್ನ ಆಲಿಬಾಬನಿಗೆ ಹೋಲಿಸಿದ್ರು. ಈ ವೇಳೆ ವೇದಿಕೆಯಲ್ಲಿ ಕುಳಿತಿದ್ದ ಸಚಿವ ನಾರಾಯಣಗೌಡ ಕೆಂಡಾಮಂಡಲರಾಗಿ ನಿರೂಪಕಿಯ ಕೈಯಲ್ಲಿದ್ದ ಮೈಕ್ ಕಿತ್ತುಕೊಂಡು ಜೆಡಿಎಸ್‌ ಮುಖಂಡನಿಗೆ ಏಕವಚನದಲ್ಲೇ ವಾಗ್ದಾಳಿ ನಡೆಸಿದರು. 

ಯಾರು ಭ್ರಷ್ಟಚಾರ ಮಾಡಿದ್ದಾರೆ, ಇವನಿಗೆ ಮಾತನಾಡಲು ಅವಕಾಶ ಕೊಟ್ಟವರು ಯಾರು ಎಂದು ಏಕವಚನದಲ್ಲೇ ಪುರಸಭಾ ಸಂತೋಷ್ ಗೆ ಕ್ಲಾಸ್ ತೆಗೆದುಕೊಂಡರು. ಇಬ್ಬರು ನಾಯಕರ  ಹೈಡ್ರಾಮಾ ಕಂಡ ಕರವೇ ರಾಜ್ಯಾಧ್ಯಕ್ಷ ಟಿಎ ನಾರಾಯಣಗೌಡ ಮಧ್ಯ ಪ್ರವೇಶಿಸಿ ಇಬ್ಬರನ್ನು ಸಮಾಧಾನಪಡಿಸಿದರು. ಬಳಿಕ ಮಾತನಾಡಿದ ಟಿಎ ನಾರಾಯಣಗೌಡ ಈ ಕಾರ್ಯಕ್ರಮದ ವೇದಿಕೆ ರಾಜಕೀಯ ಪಕ್ಷದಲ್ಲ ಎಂಬುದು ಅರಿವಿರಲಿ, ನಾಡು ನುಡಿ ಉಳಿವಿಗೆ ರಾಜಕಾರಣಗಳು ಏನು ದಬಾಕಿಲ್ಲ. ನಾಡಿಗಾಗಿ ಯಾವ ಪಕ್ಷದ ನಾಯಕರು ಜೈಲಿಗೆ ಹೋಗಿಲ್ಲ. ಕೇವಲ ಓಲೈಕೆ ರಾಜಕಾರಣ ಮಾಡಿಕೊಂಡು ಕನ್ನಡಿಗರನ್ನ ಮರೆಯುತ್ತಿದ್ದಾರೆ ಎಂದು ರಾಜಕೀಯ ಪಕ್ಷಗಳು, ಪಕ್ಷಗಳ ನಾಯಕರನ್ನ ಟೀಕಿಸಿದ್ರು.

ಸಚಿವ ನಾರಾಯಣಗೌಡ, ಬಸ್‌ ಸಂತೋಷ್‌ ನಡುವೆ ಮಾತಿನ ಚಕಮಕಿ
ಕೆ.ಆರ್‌.ಪೇಟೆ: ಪಟ್ಟಣದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಆಯೋಜಿಸಿದ್ದ ಕನ್ನಡ ರಾಜ್ಯೋತ್ಸವ ಹಾಗೂ ಕನ್ನಡದ ಹಬ್ಬದಲ್ಲಿ ಸಚಿವ ನಾರಾಯಣಗೌಡ- ಜೆಡಿಎಸ್‌ ಮುಖಂಡ ಸಂತೋಷ್‌ ನಡುವೆ ಮಾತಿನ ಚಕಮಕಿ ನಡೆಯಿತು.

ವೇದಿಕೆ ಕಾರ್ಯಕ್ರಮದಲ್ಲಿ ಮಾತನಾಡಿದ ಜೆಡಿಎಸ್‌ ಯುವ ಮುಖಂಡ ಬಸ್‌ ಸಂತೋಷ್‌ಕುಮಾರ್‌, ತಾಲೂಕಿನಲ್ಲಿ ಭ್ರಷ್ಟಾಚಾರ ಹೆಚ್ಚಳವಾಗಿದೆ. ಕಳಪೆ ಕಾಮಗಾರಿಗಳ ಬಗ್ಗೆ ಪ್ರಸ್ತಾಪಿಸಿ ಆಲಿಬಾಬ ಮತ್ತು ನಲವತ್ತು ಕಳ್ಳರ ಕಥೆಯ ಬಗ್ಗೆ ನಾವು ಕೇಳಿದ್ದು. ಅದು ಈಗ ಕ್ಷೇತ್ರದಲ್ಲಿ ಆಲಿಬಾಬ ಮತ್ತು ನಾಲ್ವರು ಕಳ್ಳರು ಲೂಟಿ ಹೊಡೆಯುತ್ತಿದ್ದಾರೆ ಎಂದು ದೂರಿದರು.

ಬಸ್‌ ಸಂತೋಷ್‌ ಆಡಿದ ಆಲಿಬಾಬ ಮತ್ತು ಕಳ್ಳರ ಹೇಳಿಕೆಯಿಂದ ಕೋಪಗೊಂಡ ವೇದಿಕೆಯಲ್ಲಿದ್ದ ಸಚಿವ ಕೆ.ಸಿ.ನಾರಾಯಣಗೌಡ ಮತ್ತು ಅವರ ಬೆಂಬಲಿಗರನ್ನು ಕೆರಳಿಸಿತು. ಕುಳಿತ ಜಾಗದಿಂದ ಎದ್ದ ಸಚಿವ ನಾರಾಯಣಗೌಡ ಸಂತೋಷ್‌ ಭಾಷಣ ಮಾಡುತ್ತಿದ್ದ ಕಡೆಗೆ ನುಗ್ಗಿ ಸರಿಯಾಗಿ ಮಾತನಾಡು ಎಂದು ಆಕ್ರೋಶ ವ್ಯಕ್ತಪಡಿಸಿದರು.

Mandya News: ರೈತರ ಧರಣಿ ವಾಪಸ್‌ಗೆ ಕೈಮುಗಿದ ಶಾಸಕ ಕೆಸಿಎನ್

ಇಲ್ಲಿ ಯಾರೂ ಭ್ರಷ್ಟಾಚಾರ ಮಾಡುತ್ತಿಲ್ಲ. ಯಾರು, ಯಾಕೆ ಮೈಕ್‌ ಕೊಟ್ಟರಿ ಎಂದು ಕೂಗಾಡಿದರು. ಸಚಿವರೊಂದಿಗೆ ಕೆಲವು ಬಿಜೆಪಿಗರೂ ಎದ್ದು ನಿಂತರು. ಸಂತೋಷ್‌ ವಿರುದ್ಧ ಕಿಡಿಕಾರಿದರು. ಇದರಿಂದ ವೇದಿಕೆಯ ಮೇಲೆ ಗದ್ದಲ ಆರಂಭವಾಯಿತು.

ಮಾಧ್ಯಮ, ಪೊಲೀಸ್ ಕಬ್ಬಡಿ ಟೂರ್ನಿಮೆಂಟ್ ವಿಜೇತರಿಗೆ ಪ್ರಶಸ್ತಿ ಪ್ರದಾನ ಮಾಡಿದ ಕ್ರೀಡಾ ಸಚಿವ: ನಾರಾಯಣಗೌಡ

ಇದು ರಾಜಕೀಯ ವೇದಿಕೆಯಲ್ಲ ಕಿಡಿ: ಕಾರ್ಯಕ್ರಮ ರಾಜಕೀಯ ಜಟಾಪಟಿಗೆ ತಿರುಗಿದ್ದನ್ನು ಕಂಡು ಸಿಡಿಮಿಡಿಗೊಂಡ ಕರವೇ ರಾಜ್ಯ ಅಧ್ಯಕ್ಷ ಟಿ.ಎನ್‌.ನಾರಾಯಣಗೌಡ ಕೂಡಲೇ ಮಧ್ಯ ಪ್ರವೇಶಿಸಿ ಇದು ರಾಜಕೀಯ ವೇದಿಕೆಯಲ್ಲ. ಇದು ಕರ್ನಾಟಕ ರಕ್ಷಣಾವೇದಿಕೆಯ ಕಾರ್ಯಕ್ರಮ ಎಂದು ಕಟು ಮಾತುಗಳಿಂದ ಸಚಿವ ಕೆ.ಸಿ.ನಾರಾಯಣಗೌಡ ಸೇರಿದಂತೆ ಜೆಡಿಎಸ್‌ ಮತ್ತು ಬಿಜೆಪಿಗರನ್ನು ಗದರಿಸಿ ಪರಿಸ್ಥಿತಿ ನಿಯಂತ್ರಿಸದರಲ್ಲದೆ ಇನ್ನು ಮುಂದೆ ಕನ್ನಡದ ವೇದಿಕೆಗೆ ರಾಜಕಾರಣಿಗಳನ್ನು ಕರೆಯಬಾರದು ಎಂದು ಕರವೇ ಕಾರ್ಯಕರ್ತರಿಗೂ ಸಲಹೆ ಮಾಡಿದರು.

Follow Us:
Download App:
  • android
  • ios