ಖಾತೆ ಬಗ್ಗೆ ಅಪಸ್ವರವೆತ್ತಿದ ಮುಖಂಡರಿಗೆ ಟಾಂಗ್ ನೀಡಿದ ಸಚಿವ
- ಖಾತೆ ವಿಚಾರವಾಗಿ ಕ್ಯಾತೆ ತೆಗೆದಿರುವ ಬೊಮ್ಮಾಯಿ ಸಚಿವ ಸಂಪುಟದ ಸದಸ್ಯರಿಗೆ ಬುದ್ಧಿಮಾತು
- ಪ್ರಾಥಮಿಕ ಶಿಕ್ಷಣ ಹಾಗೂ ಪ್ರೌಢ ಶಿಕ್ಷಣ ಸಚಿವ ಬಿ. ಸಿ. ನಾಗೇಶ್ ಬುದ್ಧಿಮಾತು
- ಸಂವಿಧಾನದ ಆಶಯಕ್ಕೆ ಬದ್ಧರಾಗಿ ಎಲ್ಲರೂ ಒಂದಾಗಿ ಕೆಲಸ ಮಾಡಿದರೆ ಮಾತ್ರ ದೇಶದ ಪ್ರಗತಿ
ಯಾದಗಿರಿ (ಆ.09): ಖಾತೆ ವಿಚಾರವಾಗಿ ಕ್ಯಾತೆ ತೆಗೆದಿರುವ ಬೊಮ್ಮಾಯಿ ಸಚಿವ ಸಂಪುಟದ ಸದಸ್ಯರಿಗೆ ಬುದ್ಧಿಮಾತು ಹೇಳಿರುವ ಪ್ರಾಥಮಿಕ ಶಿಕ್ಷಣ ಹಾಗೂ ಪ್ರೌಢ ಶಿಕ್ಷಣ ಸಚಿವ ಬಿ. ಸಿ. ನಾಗೇಶ್, ಸಣ್ಣದು-ದೊಡ್ಡದು ಅಂತ ಖಾತೆಗಳು ಇರುವುದಿಲ್ಲ. ಸಂವಿಧಾನದ ಆಶಯಕ್ಕೆ ಬದ್ಧರಾಗಿ ಎಲ್ಲರೂ ಒಂದಾಗಿ ಕೆಲಸ ಮಾಡಿದರೆ ಮಾತ್ರ ದೇಶದ ಪ್ರಗತಿ ಸಾಧ್ಯ ಎಂದರು.
ಭಾನುವಾರ ಇಲ್ಲಿನ ಪ್ರವಾಸಿ ಮಂದಿರದಲ್ಲಿ ಮಾತನಾಡಿ, ಖಾತೆಗಾಗಿ ಅಪಸ್ವರವೆತ್ತಿದ ಸಚಿವ ಆನಂದ್‌ಸಿಂಗ್ ಬಗ್ಗೆ ಪ್ರತಿಕ್ರಿಯಿಸಿದರು.
ಖಾತೆ ಕ್ಯಾತೆ ತೆಗೆದವರನ್ನ ಸಮಾಧಾನ ಮಾಡುವಲ್ಲಿ ಸಿಎಂ ಸಕ್ಸಸ್
ಒಂದು ಖಾತೆ ತೆಗೆದುಕೊಂಡು ದೇಶ ಉದ್ಧಾರ ಮಾಡಲಿಕ್ಕಾಗಲ್ಲ. ಎಲ್ಲ ಖಾತೆಗಳಿಗೂ ಅಷ್ಟೇ ಮಹತ್ವವಿರುತ್ತದೆ. ಖಾತೆಯಲ್ಲಿ ಸಣ್ಣದು, ದೊಡ್ಡದು ಅಂತೇನಿಲ್ಲ. ಆನಂದ್ ಸಿಂಗ್ ಅತ್ಯಂತ ಒಳ್ಳೆಯ ಮನುಷ್ಯ. ಕೆಲಸ ಮಾಡೋಕೆ ಇದೇ ಖಾತೆ ಬೇಕಂತೇನಿಲ್ಲ, ಸಿಕ್ಕ ಖಾತೆಗಳಲ್ಲಿ ಸಮಾಜದಲ್ಲಿನ ವ್ಯವಸ್ಥೆ ಸರಿಪಡಿಸಲು ಮುಂದಾಗಬೇಕು ಅಷ್ಟೇ ಎಂದರು.
ಒಂದು ಕಾಲದಲ್ಲಿ ಖಾತೆಗಳ ವಿಚಾರದಲ್ಲಿ ಮಾನಸಿಕತೆಯೇ ಬೇರೆಯಿತ್ತು. ಗೃಹ, ಕಂದಾಯ ಇಲಾಖೆ ದೊಡ್ಡದು ಅಂತಿದ್ರು. ಈಗ ಗೃಹ ಬೇಡ, ಕಂದಾಯ ಬೇಡ, ಪಿಡಬ್ಲ್ಯುಡಿ ಬೇಕು, ನೀರಾವರಿ ಬೇಕು, ಸಮಾಜ ಕಲ್ಯಾಣ ದೊಡ್ಡದು ಅಂತಿದ್ದಾರೆ. ಈ ಮಾನಸಿಕತೆ ಇರಬಾರದು ಎಂದರು.