Asianet Suvarna News Asianet Suvarna News

ವಿಜಯಪುರ: ಮ್ಯಾರಾಥಾನ್‌ನಲ್ಲಿ‌ ಓಡಿದ ಸಚಿವ ಎಂ.ಬಿ. ಪಾಟೀಲ್, ಯತ್ನಾಳ್..!

ಪರಿಸರ ಹಸಿರುಮಯವಾಗಬೇಕು ಎನ್ನುವ ಕಲ್ಪನೆಯೊಂದಿಗೆ ವಿಜಯಪುರ ಜಿಲ್ಲೆಯಲ್ಲಿ ಶುರುವಾಗಿದ್ದು ವೃಕ್ಷೋಥಾನ್ ಮ್ಯಾರಾಥಾನ್. ಪರಿಸರ ರಕ್ಷಣೆ, ಹಸಿರು ಉಳಿಸಿ ಘೋಷಣೆಗಳ ಜೊತೆಗೆ ಇಂದು ವಿಜಯಪುರದಲ್ಲಿ ಮ್ಯಾರಾಥಾನ್ - 2023 ನಡೆಯಿತು. 

Minister MB Patil and Basanagouda Patil Yatnal Ran in the Marathon in Vijayapura grg
Author
First Published Dec 25, 2023, 1:00 AM IST

- ಷಡಕ್ಷರಿ‌ ಕಂಪೂನವರ್ ಏಷ್ಯಾನೆಟ್ ಸುವರ್ಣ ನ್ಯೂಸ್

ವಿಜಯಪುರ(ಡಿ.25):  ರಾಜ್ಯದಲ್ಲೆ ವಿಜಯಪುರ ಜಿಲ್ಲೆಯಲ್ಲಿ ಅತಿ ಕಡಿಮೆ ಅರಣ್ಯ ಪ್ರದೇಶವಿದೆ. ಜಿಲ್ಲೆಯಲ್ಲಿ ಗಿಡ-ಮರಗಳ ಸಂಖ್ಯೆ ಹೆಚ್ಚಾಗಬೇಕು. ಬರದ ನಾಡು ಎನ್ನುವ ಹಣೆಪಟ್ಟಿ ಅಳಿಯಬೇಕು, ಪರಿಸರ ಹಸಿರುಮಯವಾಗಬೇಕು ಎನ್ನುವ ಕಲ್ಪನೆಯೊಂದಿಗೆ ವಿಜಯಪುರ ಜಿಲ್ಲೆಯಲ್ಲಿ ಶುರುವಾಗಿದ್ದು ವೃಕ್ಷೋಥಾನ್ ಮ್ಯಾರಾಥಾನ್. ಪರಿಸರ ರಕ್ಷಣೆ, ಹಸಿರು ಉಳಿಸಿ ಘೋಷಣೆಗಳ ಜೊತೆಗೆ ಇಂದು ವಿಜಯಪುರದಲ್ಲಿ ಮ್ಯಾರಾಥಾನ್ - 2023 ನಡೆಯಿತು. ಈ ಬಾರಿ ಪರಿಸರ ರಕ್ಷಣೆಯ ಜೊತೆಗೆ ಸ್ಮಾರಕಗಳ ಉಳುವಿಗಾಗಿ ಹೆರಿಟೇಜ್ ರನ್ ಸಹ ನಡೆಯಿತು. ಹಲವು ವಿಭಾಗಗಳಲ್ಲಿ ನಡೆದ ಮ್ಯಾರಾಥಾನ್ ನಲ್ಲಿ ದೇಶದ ಪ್ರತಿಷ್ಟಿತ ಅಥ್ಲೆಟಿಕ್ ಪಾಲ್ಗೊಂಡಿದ್ದು ವಿಶೇಷವಾಗಿತ್ತು. 

ನಸುಕಿನ‌ ಜಾವವೇ ಶುರುವಾಗ ಮ್ಯಾರಾಥಾನ್..!

ವಿಜಯಪುರದಲ್ಲಿ ಹೆಚ್ಚಿನ ಚಳಿ‌ ಇದೆ. ಚುಮುಚುಮು ಚಳಿ ಆವರಿಸಿದ್ದ ನಸುಕಿನ ಜಾವದಲ್ಲಿಯೂ ಸಾವಿರಾರು ಜನ ಕಿಲೋಮೀಟರ್ ಗಟ್ಟಲೇ ಓಡಿದರು. ಓಡಲು ಆಗದೆ ಇದ್ದ ಜನರು ರಸ್ತೆ ಅಕ್ಕಪಕ್ಕದಲ್ಲಿ ನಿಂತು ಚಪ್ಪಾಳೆ ತಟ್ಟಿ ಪ್ರೋತ್ಸಾಹಿಸಿದರು. ವಿಜಯಪುರ ನಗರದಲ್ಲಿ ನಡೆದ ಮ್ಯಾರಾಥಾನ್‌ನ ವಿಶೇಷ ಇದು.

ಹವಾಮಾನ ಮುನ್ಸೂಚನೆ: ವಿಜಯಪುರದಲ್ಲಿ 10 ಡಿಗ್ರಿ ಸೆಲ್ಸಿಯಸ್‌ಗಿಳಿದ ತಾಪಮಾನ, ಬೆಂಗಳೂರು ಎಷ್ಟಿದೆ ಗೊತ್ತಾ?

ನಗರದಲ್ಲಿ ಜೀರೋ ಟ್ರಾಫಿಕ್..!

ವೃಕ್ಷೋಥಾನ್ ಮ್ಯಾರಾಥಾನ್ ಹಿನ್ನೆಲೆ ಇಡೀ ನಗರದ ರಸ್ತೆಗಳಲ್ಲಿ ಝೀರೋ ಟ್ರಾಫಿಕ್ ಮಾಡೋ ಮೂಲಕ ಓಡುವವರಿಗೆ ಅನುಕೂಲ ಮಾಡಿಕೊಡಲಾಗಿತ್ತು. ಸಾವಿರಾರು ಜನ ಓಡಾಡಿ ಪರಿಸರ, ಐತಿಹಾಸಿಕ ಸ್ಮಾರಕಗಳ ಸಂರಕ್ಷಣೆ ಕುರಿತು ಜಾಗೃತಿ ಮೂಡಿಸಿದ್ರು..

ಮ್ಯಾರಾಥಾನ್ ಗೆ ಚಾಲನೆ ನೀಡಿದ ವಾಟರ್ ಮನ್ ಆಫ್ ಇಂಡಿಯಾ.!

ಸಚಿವ ಎಂ‌.ಬಿ.ಪಾಟೀಲ, ನಗರ ಶಾಸಕ ಬಸನಗೌಡ ಪಾಟೀಲ ಹಾಗೂ ವಾಟರ್ ಮೆನ್ ಆಫ್ ಇಂಡಿಯಾ ಡಾ.ರಾಜೇಂದ್ರಸಿಂಗ್ ಚಾಲನೆ ನೀಡಿದರು.  ವಿಜಯಪುರ ನಗರದ ಡಾ. ಬಿ ಆರ್ ಅಂಬೇಡ್ಕರ್ ಕ್ರೀಡಾಂಗಣದಿಂದ ಗೋಳಗುಮ್ಮಟ ಮಾರ್ಗವಾಗಿ  21ಕಿಲೊಮೀಟರ್, 10ಕಿಲೊಮೀಟರ್, 5 ಕಿಲೊಮೀಟರ್,  3 ಕಿಲೊಮೀಟರ್ ಸೇರಿದಂತೆ ವಿವಿಧ ಮ್ಯಾರಥಾನ್ ಗಳಲ್ಲಿ ಓಟಗಾರರು ಭಾಗವಹಿಸಿ ಪರಿಸರ ಜಾಗೃತಿ ಮೂಡಿಸಿದರು.

ಚಪ್ಪಾಳೆ ತಟ್ಟಿ ಪ್ರೋತ್ಸಾಹಿಸಿದ ವಿಜಯಪುರ ಜನತೆ..!

ಮ್ಯಾರಾಥಾನ್ ನಲ್ಲಿ ಪಾಲ್ಗೊಳ್ಳಲು ದೇಶದ ನಾನಾ ಮೂಲೆಗಳಿಂದ ಸ್ಪರ್ಧಾಳುಗಳು ಬಂದಿದ್ದರು. ದೆಹಲಿ, ಮುಂಬೈ, ಚನ್ನೈ, ಸೇರಿದಂತೆ ಉತ್ತರ-ದಕ್ಷಿಣ ಭಾರತದಿಂದ ನಾನಾ ಕಡೆಗಳಿಂದ ಆಗಮಿಸಿದ್ದ ಸ್ಪರ್ಧಾಳುಗಳು ಒಂದೆಡೆ ಸೇರಿದ್ದರು. ಇನ್ನೂ ತಮ್ಮ ಊರಿಗೆ ಬಂದ ಮ್ಯಾರಥಾನ್ ಸ್ಪರ್ಧಿಗಳನ್ನು ನಗರದ ಜನತೆ ಚಪ್ಪಾಳೆ ತಟ್ಟಿ ರನ್ ರನ್ ರನ್ ಎಂದು ಪ್ರೋತ್ಸಾಹಿಸಿ ಪ್ರೀತಿ ತೋರಿದರು. 

ಓಟಗಾರರನ್ನ ಹುರಿದುಂಬಿಸಿದ ಜನಪದ ಮೇಳಗಳು..!

ಮ್ಯಾರಥಾನ್ ಸ್ಪರ್ಧೆಯಲ್ಲಿ ಭಾಗವಹಿಸಿದ ಸ್ಪರ್ಧಾಳುಗಳಿಗೆ ಮನರಂಜನೆ ಹಾಗೂ ಪ್ರೋತ್ಸಾಹಿಸುವ ಸಲಯವಾಗಿ ಜಿಲ್ಲೆಯ ಸಾಂಸ್ಕೃತಿಕ ತಂಡಗಳು ನೃತ್ಯದ ಮೂಲಕ ಹಲಗೆ, ಶಹನಾಯಿ ಹಾಗೂ ವಚನ ಸಾಹಿತ್ಯದ ಮೂಲಕ ಮನರಂಜಿಸಿದವು. ನಗರದಲ್ಲಿ ಎಲ್ಲೆಡೆ ಓಡಾಡಿ ಡಾ.ಬಿ.ಆರ್. ಅಂಬೇಡ್ಕರ್ ಕ್ರೀಡಾಂಗಣಕ್ಕೆ ಆಗಮಿಸಿದ ಬಳಿಕ ಮತ್ತಷ್ಟು ಮನರಂಜನೆ ಬಳಿಕ ವಿಜೇತರಿಗೆ ಪದಕ ಹಾಗೂ ಭಾಗವಹಿಸಿದವರಿಗೆ ಪ್ರಮಾಣ ಪತ್ರ ವಿತರಿಸಲಾಯಿತು.

ಮ್ಯಾರಾಥಾನ್‌ನಲ್ಲಿ ಓಡಿದ ಸಚಿವ, ಶಾಸಕರು, ಅಧಿಕಾರಿಗಳು..!

ಈ ಮ್ಯಾರಾಥಾನ್ ನಲ್ಲಿ ಉಸ್ತುವಾರಿ ಸಚಿವ ಎಂ ಬಿ ಪಾಟೀಲ್, ಶಾಸಕ ಬಸನಗೌಡ ಪಾಟೀಲ್ ಯತ್ನಾಳ, ವಿಧಾನಪರಿಷತ್ ಶಾಸಕ ಸುನೀಲ್‌ಗೌಡ ಪಾಟೀಲ್ ಸೇರಿದಂತೆ ಹಲವಾರು ಗಣ್ಯರು ಸಹ ಮ್ಯಾರಾಥಾನ್ ನಲ್ಲಿ ಓಡಿದ್ರು. ಇತ್ತ ಜಿಲ್ಲಾಧಿಕಾರಿ ಟಿ ಭೂಬಾಲನ್, ಎಸ್ಪಿ‌‌ ಹೃಷಿಕೇಶ್ ಸೋನಾವಣೆ‌ ಸೇರಿ‌ ಪೊಲೀಸ್ ಇಲಾಖೆಯ ಇನ್ಸ್ಪೆಕ್ಟರ್‌ಗಳು ಸಹ ಮ್ಯಾರಾಥಾನ್ ನಲ್ಲಿ ಪಾಲ್ಗೊಂಡರು. ಈ ಮೂಲಕ‌ ವಿಜಯಪುರ ಜಿಲ್ಲೆಯಲ್ಲಿ ಗಿಡಮರಗಳ ರಕ್ಷಣೆಗೆ, ಅರಣ್ಯ ಪ್ರದೇಶ ಹೆಚ್ಚಿಸಲು ಹಸಿರು ಬೆಳೆಸಲು ಕರೆ ನೀಡಿದರು. ಇನ್ನು ಪುಟಾಣಿ ಮಕ್ಕಳಿಂದ ಹಿಡಿದು ವೃದ್ಧರವರೆಗು ಮ್ಯಾರಾಥಾನ್ ನಲ್ಲಿ ಓಡಿದ್ದು ವಿಶೇಷವಾಗಿತ್ತು. ಕೂಲಿ ಕಾರ್ಮಿಕನೊಬ್ಬ ಪೊಲೀಸರ ಸಹಾಯದಿಂದ ರಿಜಿಸ್ಟರ್ ಮಾಡಿ ಮ್ಯಾರಾಥಾನ್ ನಲ್ಲಿ ಓಡಿದ್ದು ವಿಶೇಷವಾಗಿತ್ತು.‌ ತುಕಾರಾಮ್ ಎಂಬಾತನಿಗೆ ವಿಜಯಪುರ ನಗರ ಡಿವೈಎಸ್ಪಿ ಬಸವರಾಜ್ ಯಲಿಗಾರ್ ಸಹಕಾರ ನೀಡಿದ್ರು. ತುಕಾರಾಮ್ ಪ್ರೋಪೆಶನಲ್ ರನ್ನರ್‌ಗಳಿಗು ಒಳ್ಳೆಯ ಸ್ಪರ್ಧೆ ನೀಡಿದ್ದ ಅನ್ನೋದು ಇಲ್ಲಿ ವಿಶೇಷ... 

ಪದೇ ಪದೇ ಅಂದರ್ ಆಗ್ತಿದ್ದವ ಮರ್ಡರ್..! ಅವನ ಕೊಲೆಗೆ ಕಾರಣ ಆತ ಕದ್ದ ಮಾಲು..!

ಮ್ಯಾರಾಥಾನ್ - 2023 ಸಿದ್ದೇಶ್ವರ ಶ್ರೀಗಳಿಗೆ ಅರ್ಪಣೆ..!

ಈ ಬಾರಿ ನಡೆದ ವೃಕ್ಷೋಥಾನ್ 2023 ಮ್ಯಾರಾಥಾನ್‌ ನ್ನ ಕಳೆದ ವರ್ಷ ದೇಹತ್ಯಾಗ ಮಾಡಿದ ನಡೆದಾಡುವ ದೇವರು ಎಂದು ಕರೆಯಿಸಿಕೊಂಡ ಜ್ಞಾನಯೋಗಿ ಸಿದ್ದೇಶ್ವರ ಶ್ರೀಗಳಿಗೆ ಅರ್ಪಿಸಲಾಯಿತು.‌ ಸಧ್ಯ ಜ್ಞಾನಯೋಗಾಶ್ರಮದಲ್ಲಿ ಸಿದ್ದೇಶ್ವರ ಶ್ರೀಗಳ ಗುರುವಂದನೆ ಕಾರ್ಯಕ್ರಮವೂ ನಡೆಯುತ್ತಿರೋದು ಇಲ್ಲಿ ಪ್ರಸ್ತುತ..

ಮೆಡಲ್‌ ಮೇಲೆ ಸಿದ್ದೇಶ್ವರ ಶ್ರೀಗಳ ಭಾವಚಿತ್ರ..!

ಮ್ಯಾರಾಥಾನ್ ನಲ್ಲಿ ಓಡಿದ ಸ್ಪರ್ಧಾಳುಗಳಿಗೆ ನೀಡಲಾದ ಮೆಡಲ್‌ ಮೇಲೆ ಸಿದ್ದೇಶ್ವರ ಶ್ರೀಗಳ ಭಾವಚಿತ್ರ ಅಚ್ಚು ಹಾಕಿದ್ದು ವಿಶೇಷ.  ಈ ಬಾರಿಯ ಮ್ಯಾರಾಥಾನ್‌ವನ್ನ ಸಿದ್ದೇಶ್ವರ ಶ್ರೀಗಳಿಗೆ ಅರ್ಪಿಸಲಾಗ್ತಿರುವ ಕಾರಣ ಶ್ರೀಗಳ ಭಾವಚಿತ್ರವನ್ನ ಎಲ್ಲ ಮೆಡಲ್ ಗಳ ಮೇಲು ಬಳಕೆ ಮಾಡಲಾಗಿದೆ.

Follow Us:
Download App:
  • android
  • ios