ಹೆಣ್ಣನ್ನ ಕಾಮದ ವಸ್ತುವಾಗಿ ನೋಡೋದು ಸರಿಯಲ್ಲ : ಸಿದ್ದರಾಮಯ್ಯ ವಿರುದ್ಧ ಫುಲ್ ಗರಂ
ಸಿದ್ದರಾಮಯ್ಯನವರೇ ಹೆಣ್ಣನ್ನು ಕಾಮದ ವಸ್ತುವನ್ನಾಗಿ ನೋಡುವುದು ಸರಿಯಲ್ಲ. ಇಂತಹ ಹೇಳಿಕೆಗಳನ್ನು ನೀಡುವುದು ಸರಿಯಲ್ಲ ಎಂದು ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಲಾಗಿದೆ.
ಶಿವಮೊಗ್ಗ (ಡಿ.02): ಮಾಜಿ ಸಿಎಂ ಸಿದ್ದರಾಮಯ್ಯ ಲವ್ ಜಿಹಾದ್ ನ್ನು ಕ್ರಾಸ್ ಬೀಡ್ ಎಂದಿದ್ದಾರೆ ಹಾಗಂತ ಕರೆಯಲು ನಾಚಿಕೆ ಆಗುತ್ತದೆ ಶಿವಮೊಗ್ಗದಲ್ಲಿ ಸಂಸ್ಕೃತ ಮಹಿಳೆ ಕೂಡ ಮುಸ್ಲಿಂ ಯುವಕನಿಂದ ಮೋಸ ಹೋಗಿದ್ದಾರೆ. ದೇಗುಲದ ಆರ್ಚಕ ನ ಮಗಳಿಗೂ ಮೋಸವಾಗಿದೆ ಎಂದು ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದರು.
ಶಿವಮೊಗ್ಗದಲ್ಲಿ ಮಾತನಾಡಿದ ಸಚಿವ ಈಶ್ವರಪ್ಪ ಮುಸ್ಲಿಂ ಯುವಕರಿಂದ ಮೋಸ ಹೋದ ಯುವತಿಯರ ಕಷ್ಟ ಸಿದ್ದರಾಮಯ್ಯಗೆ ಗೊತ್ತಿಲ್ಲ.
ಕ್ರಾಸ್ ಬೀಡ್ ಎಂದು ಕರೆಯಲ್ಪಡುವುದು ನಾಯಿಗಳಿಗೆ ಮಾತ್ರ. ಇಂದಿರಾಗಾಂಧಿ ಯವರು ಪಿರೋಜ್ ಖಾನ್ ಮದುವೆಯಾದರು. ಇದನ್ನು ಕ್ರಾಸ್ ಬೀಡ್ ಅಂತ ಕರೆಯುತ್ತಿರಾ? ಎಂದು ಪ್ರಶ್ನೆ ಮಾಡಿದ್ದಾರೆ.
ರಾಜೀವ್ ಗಾಂಧಿಯವರು ಸೋನಿಯಾ ಗಾಂಧಿ ಮದುವೆಯಾದರು ಇದನ್ನು ಕ್ರಾಸ್ ಬೀಡ್ ಅಂತ ಕರೆಯುತ್ತಿರಾ? ಪ್ರಿಯಾಂಕಾ ಗಾಂಧಿಯವರು ರಾಬರ್ಟ್ ವಾದ್ರಾರನ್ನು ಮದುವೆಯಾದರು ಇದನ್ನು ಕ್ರಾಸ್ ಬೀಡ್ ಅಂತ ಕರೆಯುತ್ತಿರಾ? ಸಿದ್ದರಾಮಯ್ಯ ನವರೇ ಇದನ್ನೆಲ್ಲ ಕ್ರಾಸ್ ಬೀಡ್ ಅಂತ ಕರೆಯುತ್ತಿರಾ? ತಕ್ಷಣವೇ ಈ ಪದವನ್ನು ವಾಪಸು ಪಡೆಯಿರಿ ಎಂದರು.
ಸಿದ್ದರಾಮಯ್ಯ ಹೆಣ್ಣು ಎನ್ನುವುದು ಕಾಮದ ವಸ್ತುವನ್ನಾಗಿ ನೋಡುತ್ತಿರುವುದು ಸರಿಯಲ್ಲ. ಇದೊಂದು ಫೂಲಿಶ್ ಹೇಳಿಕೆ. ಶಿವಮೊಗ್ಗದಂತಹ ಪಟ್ಟಣದಲ್ಲಿ ಹಿಂದೂ ಸಮಾಜ ಗಟ್ಟಿಯಾಗಿದ್ದು ಯಾರು ಕೈ ಹಾಕಲ್ಲ. ಸಿದ್ದರಾಮಯ್ಯ ಕಾಂಗ್ರೆಸ್ ಪಕ್ಷದಲ್ಲಿ ಇರೋದಕ್ಕೆ ನಾಲಾಯಕ್. ಸಿದ್ದರಾಮಯ್ಯ ಈ ಹೇಳಿಕೆಗೆ ರಾಜ್ಯದ ಜನರ ಕ್ಷಮೆ ಕೇಳಬೇಕು ಎಂದು ವಾಗ್ದಾಳಿ ನಡೆಸಿದರು.
ಹಿಂದೂ-ಮುಸ್ಲಿಂ ‘ಕ್ರಾಸ್ ಬ್ರೀಡ್': ಲವ್‌ಜಿಹಾದ್ ತಡೆ ಕಾಯ್ದೆ ಜಾರಿಗೆ ಸಿದ್ದು ವಿರೋಧ!
ವಯಸ್ಸಾದ ಗೋವುಗಳನ್ನು ಬಿಜೆಪಿಯವರ ಮನೆ ಮನೆಗೆ ಬಿಡಬೇಕಾ ಎಂದಿರುವ ಸಿದ್ದರಾಮಯ್ಯ ನವರೇ ನಿಮ್ಮ ತಾಯಿಗೆ ವಯಸ್ಸಾಗಿದೆ ಅವರನ್ನು ಎನು ಮಾಡ್ತೀರಾ? ಸಿದ್ದರಾಮಯ್ಯ ಅವಧಿಯಲ್ಲಿ ಗೋ ಹತ್ಯೆ ತಡೆಯಲು ಹೋದ 22 ಯುವಕರ ಹತ್ಯೆ ಮಾಡಲಾಯಿತು. ರಾಜ್ಯದ ಬಿಜೆಪಿ ಸರ್ಕಾರ ಗೋಹತ್ಯೆ ನಿಷೇಧ ಕಾನೂನು ಜಾರಿಗೆ ತಂದೆ ತರುತ್ತದೆ ಎಂದು ಸಿದ್ದರಾಮಯ್ಯ ವಿರುದ್ಧ ಕೆಎಸ್ ಈಶ್ವರಪ್ಪ ವಾಗ್ದಾಳಿ ನಡೆಸಿದರು.
ಸಿದ್ದರಾಮಯ್ಯ ಹೇಳಿದಂತೆ ನಾನು ನನ್ನನ್ನು ಕುರುಬ ನಾಯಕ ಎಂದು ಘೋಷಣೆ ಮಾಡಲ್ಲ. ನಾನು ಕುರುಬ ನಾಯಕ ಅಲ್ಲ. ನಾನು ಹಿಂದುತ್ವದ ನಾಯಕ ಎಂದು ಈಶ್ವರಪ್ಪ ಹೇಳಿದರು.
ಬಿಜೆಪಿ ನಾಯಕರು ಬಹಿರಂಗ ಹೇಳಿಕೆ ನೀಡುವುದು ಸರಿಯಲ್ಲ : ಮಂತ್ರಿ ಆಗಲಿಲ್ಲ ಎಂದು ಹೇಳಿಕೆ ನೀಡಬೇಡಿ ಸಾಮಾನ್ಯ ಕಾರ್ಯಕರ್ತರಿಗೆ ನೋವಾಗುತ್ತದೆ. ಕೇಂದ್ರದ ನಾಯಕರು ನಿಮ್ಮ ಬಗ್ಗೆ ಗಮನಿಸುತ್ತಾರೆ, ಮಂತ್ರಿ ಮನನ ಮಾಡೋರು ಅವರು. ಈ ರೀತಿಯ ಬಹಿರಂಗ ಹೇಳಿಕೆ ನೀಡುವ ಎಂಎಲ್ಸಿ, ಎಂಎಲ್ಎ ಗಳನ್ನು ಬಹಿರಂಗ ಹೇಳಿಕೆ ನೀಡದಂತೆ ಪ್ರಾರ್ಥನೆ ಮಾಡುತ್ತೇನೆ ಎಂದು ಈಶ್ವರಪ್ಪ ಹೇಳಿದರು.
ನಾನು ಅವರಿಗೆಲ್ಲ ಎಚ್ಚರಿಕೆ ನೀಡುವಷ್ಟು ದೊಡ್ಡವನಲ್ಲ. ಇದನ್ನು ಅರ್ಥ ಮಾಡಿಕೊಳ್ಳಬೇಕು ಎಂದು ಹೆಚ್ ವಿಶ್ವನಾಥ ಬಹಿರಂಗ ಹೇಳಿಕೆಗೆ ಅಸಮಾಧಾನ ವ್ಯಕ್ತಪಡಿಸಿದರು.