Asianet Suvarna News Asianet Suvarna News

Chikkaballapur Utsav: ಸುಧಾಕರ್‌ ದೇಶದ ಆಸ್ತಿ ಆಗಬೇಕು: ಸಚಿವ ಶಿವರಾಮ್‌ ಹೆಬ್ಬಾರ್‌

ಆರೋಗ್ಯ ಸಚಿವ ಡಾ.ಕೆ.ಸುಧಾಕರ್‌ ಚಿಕ್ಕಬಳ್ಳಾಪುರ ಶಾಸಕರಾಗಿ, ರಾಜ್ಯದ ಮಂತ್ರಿಯಾಗಿ ಕೆಲಸ ಮಾಡಿದ್ದು ಅವರು ಮುಂದಿನ ದಿನಗಳಲ್ಲಿ ರಾಜ್ಯದ, ದೇಶದ ಆಸ್ತಿ ಆಗಬೇಕೆಂದು ಕಾರ್ಮಿಕ ಸಚಿವ ಅರೆಬೈಲ್‌ ಶಿವರಾಮ್‌ ಹೆಬ್ಬಾರ್‌ ಹೇಳಿದರು. 

Minister Shivaram Hebbar Talks About Dr K Sudhakar At Chikkaballapur Utsav gvd
Author
First Published Jan 12, 2023, 8:41 PM IST

ಚಿಕ್ಕಬಳ್ಳಾಪುರ (ಜ.12): ಆರೋಗ್ಯ ಸಚಿವ ಡಾ.ಕೆ.ಸುಧಾಕರ್‌ ಚಿಕ್ಕಬಳ್ಳಾಪುರ ಶಾಸಕರಾಗಿ, ರಾಜ್ಯದ ಮಂತ್ರಿಯಾಗಿ ಕೆಲಸ ಮಾಡಿದ್ದು ಅವರು ಮುಂದಿನ ದಿನಗಳಲ್ಲಿ ರಾಜ್ಯದ, ದೇಶದ ಆಸ್ತಿ ಆಗಬೇಕೆಂದು ಕಾರ್ಮಿಕ ಸಚಿವ ಅರೆಬೈಲ್‌ ಶಿವರಾಮ್‌ ಹೆಬ್ಬಾರ್‌ ಹೇಳಿದರು. ಚಿಕ್ಕಬಳ್ಳಾಪುರ ಉತ್ಸವದಲ್ಲಿ ಬುಧವಾರ ಸಂಜೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಚಿಕ್ಕಬಳ್ಳಾಪುರ ಉತ್ಸವವನ್ನು 8 ದಿನಗಳ ಅಭೂತಪೂರ್ವವಾಗಿ ಆಯೋಜಿಸುವ ಮೂಲಕ ಸುಧಾಕರ್‌, ತಮ್ಮ ಬುದ್ಧಿವಂತಿಕೆ ಹಗೂ ಜಾಣ್ಮೆಯನ್ನು ತೋರಿಸಿದ್ದಾರೆಂದರು. ಚಿಕ್ಕಬಳ್ಳಾಪುರ ಉತ್ಸವದ ಭಾಗವಾಗಿ ರಾಜ್ಯ, ರಾಷ್ಟ್ರೀಯ ಮಟ್ಟದ ಖ್ಯಾತ ಹಗೂ ಶ್ರೇಷ್ಠ ಕಲಾವಿದರನ್ನು ಚಿಕ್ಕಬಳ್ಳಾಪುರಕ್ಕೆ ನೆಲ ತಂದು ಈ ಭಾಗದ ಜನತೆಗೆ ಮನರಂಜೆ ನೀಡಿದ್ದಾರೆ. 

ಈ ಕಾರ್ಯಕ್ರಮವನ್ನು ಸಚಿವ ಎಚ್ಚರಿಕೆಯ ಜೊತೆಗೆ ಜಾಣ್ಮೆಯಿಂದ ಮಾಡಿದ್ದಾರೆ. ಕಾರ್ಯಕ್ರಮದ ಸಂಘಟನೆ ಸುಲಭದ ಕೆಲಸವಲ್ಲ. ಸಂಘಟನೆ ಹಿಂದೆ ಅನೇಕ ಕಠಿಣ ಶ್ರಮ ಇರುತ್ತದೆ ಎಂದರು. ಸುಧಾಕರ್‌ ರಾಜ್ಯದ ಆಸ್ತಿ, ದೇಶದ ಆಸ್ತಿಯಾಗಬೇಕು, ಇನ್ನೂ ಕ್ಷೇತ್ರದ ಯುವಕರು ಸುಧಾಕರ್‌ಗೆ ಉತ್ತಮ ಭವಿಷ್ಯ ರೂಪಿಸುವ ಕಲಾವಿರಾದರಾಗಬೇಕೆಂದರು. ಚಿಕ್ಕಬಳ್ಳಾಪುರ ಉತ್ಸವ ಒಂದು ವಿನೂತನ ಕಾರ್ಯಕ್ರಮ, ಅನೇಕ ನಟ, ಕಲಾವಿದರನ್ನು ಇಲ್ಲಿಗೆ ಕರೆಸಿ ಎಲ್ಲಾ ಭಾಷೆಗಳಲ್ಲಿ ಜನರಿಗೆ ರಸಮಂಜರಿ ನೀಡುತ್ತಿದ್ದು ಅವರಿಗೆ ನಿಮ್ಮೆಲ್ಲರ ಅರ್ಶೀವಾದ ಇರಬೇಕೆಂದರು.

Chikkaballapur Utsav: ಬರದ ನಾಡನ್ನು ಮಲೆನಾಡು ಮಾಡಿದ ಸುಧಾಕರ್‌: ಸಚಿವ ಸೋಮಣ್ಣ

ಉತ್ಸವದಲ್ಲಿ ಮಿಂಚಿದ ಅಲಿ, ಡಾಲಿ: ಜಿಲ್ಲಾ ಕೇಂದ್ರದಲ್ಲಿ ನಡೆಯುತ್ತಿರುವ ಅದ್ದೂರಿ ಚಿಕ್ಕಬಳ್ಳಾಪುರ ಉತ್ಸವ ದಿನದಿಂದ ದಿನಕ್ಕೆ ರಂಗೇರುತ್ತಿದೆ. ಪ್ರತಿ ದಿನ ಟಾಲಿವುಡ್‌, ಸ್ಯಾಂಡಲ್‌ವುಡ್‌ನ ಪ್ರಖ್ಯಾತ ನಟ, ನಟಿಯರು ಪಾಲ್ಗೊಳ್ಳುವ ಮೂಲಕ ಉತ್ಸವಕ್ಕೆ ತಾರಾ ಮೆರಗು ಅಂಟಿಕೊಂಡಿದೆ. 5ನೇ ದಿನವಾದ ಬುಧವಾರ ಸಂಜೆ ಅದ್ದೂರಿಯಾಗಿ ನಡೆದ ಕಾರ್ಯಕ್ರಮದಲ್ಲಿ ಕನ್ನಡದ ಖ್ಯಾತ ನಟ ಡಾಲಿ ಧನಂಜಯ್‌ ಪಾಲ್ಗೊಂಡು ಗಮನ ಸೆಳೆದರೆ ತೆಲುಗಿನ ಖ್ಯಾತ ಹಾಸ್ಯ ನಟ ಅಲಿ ಡೈಲಾಗ್‌ಗೆ ಅಭಿಮಾನಿಗಳು ಫಿದಾ ಆದರು. ತೆಲುಗಿನ ನಟಿ ಅನುಸೂಯ ಸಹ ಉತ್ಸವದಲ್ಲಿ ಪಾಲ್ಗೊಂಡು ಗಮನ ಸೆಳೆದರು. ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಡಿ ಖ್ಯಾತಿಯ ಕಲಾವಿದರು ನಡೆಸಿಕೊಟ್ಟಆಕರ್ಷಕ ನೃತ್ಯ ಹಾಗೂ ಜಬರ್ದಸ್‌್ತ ತಂಡದಿಂದ ನಡೆದ ಹಾಸ್ಯ ನಾಟಕ ಎಲ್ಲರನ್ನು ನಗೆಗಡಲಲ್ಲಿ ತೇಲುವಂತೆ ಮಾಡಿತು

ನಟಿ ಅನುಸೂಯ ಕನ್ನಡ ಪ್ರೇಮ: ಇನ್ನೂ ತೆಲುಗು ನಟಿ ಅನುಸೂಯ ವೇದಿಕೆ ಮೇಲೆ ಕನ್ನಡಪ್ರೇಮ ಮರೆದರು. ನಮ್ಮ ತಾಯಿ ಅವರದು ಬಸವ ಕಲ್ಯಾಣ, ಬೀದರ್‌, ಗುಲ್ಬರ್ಗಾ ಸೇರಿದಂತೆ ಬಹಳಷ್ಟುಕಡೆ ನಮ್ಮ ನೆಂಟರು ಇದ್ದಾರೆ. ಆಗಾಗಿ ನಾನು ಕರ್ನಾಟಕದವಳೆ ಎಂದು ಅಚ್ಚ ಕನ್ನಡದಲ್ಲಿ ಮಾತನಾಡಿ ಗಮನ ಸೆಳೆದರು. ತೆಲುಗು, ಕನ್ನಡದಲ್ಲಿ ಮಾತನಾಡಿ ಪ್ರೇಕ್ಷಕರ ಗಮನ ಸೆಳೆದರು.

ಸಿದ್ದರಾಮಯ್ಯ ಸೋಲಿಗೆ ವ್ಯೂಹ ರಚಿಸುತ್ತೇವೆ: ಸಚಿವ ಸುಧಾಕರ್‌

ಕೃಷಿ ವಸ್ತು ಪ್ರದರ್ಶನ ವೀಕ್ಷಿಸಿದ ಪಾಟೀಲ್‌, ಹೆಬ್ಬಾರ್‌: ಚಿಕ್ಕಬಳ್ಳಾಪುರ ಉತ್ಸವದ 5ನೇ ದಿನವಾದ ಬುಧವಾರ ನಗರದ ಹೊರ ವಲಯದ ಸಿವಿವಿ ಕ್ಯಾಂಪಸ್‌ ಬಳಿ ಕೃಷಿ ಇಲಾಖೆಯಿಂದ ಏರ್ಪಡಿಸಿರುವ ಅದ್ದೂರಿ ಕೃಷಿ ವಸ್ತು ಪ್ರದರ್ಶನಕ್ಕೆ ಕೃಷಿ ಸಚಿವ ಬಿ.ಸಿ ಪಾಟೀಲ್‌ ಹಾಗೂ ಕಾರ್ಮಿಕ ಸಚಿವ ಅರಬೈಲ್‌ ಶಿವರಾಮ್‌ ಹೆಬ್ಬಾರ್‌ ಸಂಜೆ ಭೇಟಿ ನೀಡಿ ವೀಕ್ಷಿಸಿದರು. ಸೋಲಾಲಪ್ಪ ದಿನ್ನೆಯಲ್ಲಿ ಏರ್ಪಡಿಸಲಾಗಿರುವ ಕೃಷಿ ವಸ್ತು ಪ್ರದರ್ಶನ ಹಾಗೂ ಮಾಹಿತಿ ಕೇಂದ್ರಕ್ಕೆ ಭೇಟಿ ನೀಡಿ ಸಿರಿ ಧಾನ್ಯ ರಾಶಿಗೆ ಪೂಜೆ ಸಲ್ಲಿಸಿದರು ನಂತರ ಶ್ರಮಿಕ ಸಂಜೀವಿನಿ ಸಂಚಾರಿ ಚಿಕಿತ್ಸಾ ವಾಹನಕ್ಕೆ ಕಾರ್ಮಿಕ ಸಚಿವ ಶಿವರಾಮ್‌ ಹೆಬ್ಬಾರ್‌ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ನಾಗರಾಜ, ನಗರಸಭೆ ಅಧ್ಯಕ್ಷ ಆನಂದ್‌ ರೆಡ್ಡಿ ಬಾಬು ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿ ಹಾಗೂ ಸಾರ್ವಜನಿಕರು ಹಾಜರಿದ್ದರು.

Follow Us:
Download App:
  • android
  • ios