Asianet Suvarna News Asianet Suvarna News

ಪಿ.ಆರ್.ಸ್ವಾಮಿ ಮನೆ ಮೇಲೆ ಎಸಿಬಿ ದಾಳಿ-ಮೌನ ಮುರಿದ ಕೆ.ಜೆ.ಜಾರ್ಜ್!

ಬಿಡಿಎ ಅಧಿಕಾರಿ ಪಿ.ಆರ್ ಸ್ವಾಮಿ ಮನೆ ಮೇಲೆ ಎಸಿಬಿ ಅಧಿಕಾರಿಗಳ ದಾಳಿ ರಾಜ್ಯದ ಜನತೆಯನ್ನೇ ಬೆಚ್ಚಿ ಬೀಳಿಸಿದೆ. ಇದೀಗ ಪಿ.ಆರ್.ಸ್ವಾಮಿ ಮನೆ ಮೇಲಿನ ದಾಳಿ ಕುರಿತು ಕೈಗಾರಿಕ ಸಚಿವಾ ಕೆ.ಜೆ.ಜಾರ್ಜ್ ಪ್ರತಿಕ್ರಿಯೆ ನೀಡಿದ್ದಾರೆ.

Minister KG George reaction about PR Swamy house raid
Author
Bengaluru, First Published Oct 5, 2018, 3:25 PM IST

ಕೋಲಾರ(ಅ.05):  ಬಿಡಿಎ ಅಧಿಕಾರಿ ಪಿ.ಆರ್.ಸ್ವಾಮಿ ಮನೇ ಮೇಲೆ ಎಸಿಬಿ ದಾಳಿ ಕುರಿತು ಕೈಗಾರಿ ಸಚಿವ ಕೆ.ಜೆ ಜಾರ್ಜ್ ಕೋಲಾರದಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ.  ಎಸಿಬಿ ಕೆಲಸ ಮಾಡುತ್ತಿದೆ. ಯಾರು ತಪ್ಪು ಮಾಡಿದ್ದಾರೆ ಅವರು ಶಿಕ್ಷೆ ಅನುಭವಿಸಲಿದ್ದಾರೆ. ಇಷ್ಟೇ ಅಲ್ಲ ಎಸಿಬಿ ಕ್ರಮ ಕೈಗೊಳ್ಳಲು ಸ್ವತಂತ್ರವಾಗಿದೆ. ಯಾವುದೇ ಅಡೆ ತಡೆ ಇಲ್ಲ ಎಂದು ಜಾರ್ಜ್ ಹೇಳಿದ್ದಾರೆ.

ಇದೇ ವೇಳೆ ಸಚಿವ ಸಂಪುಟ ವಿಸ್ತರಣೆ ಕುರಿತು ಮಾತನಾಡಲು ಜಾರ್ಜ್ ನಿರಾಕರಿಸಿದರು. ಸಿಎಂ ದೆಹೆಲಿ ಬೇಟಿಗೂ  ಸುಂಪುಟ ವಿಸ್ತರಣೆಗೆ ಯಾವುದೇ ಸಂಬಂಧವಿಲ್ಲ.  ಸಿಎಂ ಕಾಂಗ್ರೆಸ್ ನಾಯಕರನ್ನ ಬೇಟಿಯಾಗಿದ್ದಾರೆ. ಇಷ್ಟೇ ಅಲ್ಲ ಜೆಡಿಎಸ್ ನಾಯಕರ ಜೊತೆ ಸಂಬಂಧ ಉತ್ತಮವಾಗಿದೆ ಎಂದಿದ್ದಾರೆ.

ಕಾಂಗ್ರೆಸ್ ಹಾಗೂ ಜೆಡಿಎಸ್ ಮೈತ್ರಿ ಸರ್ಕಾರ ವಿರುದ್ದ ಅಪಸ್ವರ ಎತ್ತುತ್ತಿದ್ದವರು ಸುಮ್ಮನಾಗಿದ್ದಾರೆ. ಸರ್ಕಾರ ಬಿದ್ದು ಹೋಗುತ್ತೆ ಎಂದಿದ್ದರು. ಆದರೆ ಸರ್ಕಾರ ಸುಬಧ್ರವಾಗಿದೆ. 5 ವರ್ಷಗಳ ಕಾಲ ಆಳ್ವಿಕೆ ನಡೆಸಲಿದೆ. ಹೆಚ್.ಡಿ.ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿರಲಿದ್ದಾರೆ ಎಂದರು.

ಇದೇ ವೇಳೆ ಬಿಬಿಎಂಪಿ ಉಪಮೇಯರ್ ರಮೀಳಾ ನಿಧನಕ್ಕೆ ಸಂತಾಪ ಸೂಚಿಸಿದರು. ಅತ್ಯುತ್ತಮ ನಾಯಕಿಯನ್ನ ಕಳೆದುಕೊಂಡಿದ್ದೇವೆ. ಅವರ ಕುಟುಂಬಕ್ಕೆ ನೋವನ್ನ ತಡೆಕೊಳ್ಳುವ ಶಕ್ತಿ ಭಗವಂತ ನೀಡಲಿ ಎಂದು ಜಾರ್ಜ್ ಹೇಳಿದರು. 

Follow Us:
Download App:
  • android
  • ios