'ಅದು ಅನೈತಿಕ ಸಂಬಂಧ : ಎಷ್ಟ್ ಸಾರಿ ಮದುವೆ, ಡಿವೋರ್ಸ್ ಆಗೋದು' : ಸುಧಾಕರ್ ಟಾಂಗ್

ಅವರದ್ದು ಅನೈತಿಕ ಸಂಬಂಧ ಈ ಬಗ್ಗೆ ಮೊದಲೇ ಹೇಳಿದ್ದೆ. ಎಷ್ಟ್ ಸಾರಿ ಮದುವೆ ಡಿವೋರ್ಸ್ ಆಗೋದು ಹೀಗೆಂದು ಸಚಿವ ಸುಧಾಕರ್ ಹೇಳಿದ್ದಾರೆ. 

Minister K Sudhakar Slams  JDS Leader HD Kumaraswamy snr

ಚಿಕ್ಕಬಳ್ಳಾಪುರ (ಡಿ.06): ಕಾಂಗ್ರೆಸ್, ಜೆಡಿಎಸ್ ಅನೈತಿಕ ಸಂಬಂಧ ಅಂತಾ ಮೊದಲೇ ಹೇಳಿದ್ದೆ.‌ ಈಗ ಇಬ್ಬರು ಕೂಡ ಒಪ್ಪಿಕೊಂಡಿದ್ದಾರೆ ಎಂದು ಸಚಿವ ಸುಧಾಕರ್ ಹೇಳಿದ್ದಾರೆ.

ಚಿಕ್ಕಬಳ್ಳಾಪುರದಲ್ಲಿಂದು  ಅಂಬೇಡ್ಕರ್ ಪರಿನಿರ್ವಾಣ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಸಚಿವ ಸುಧಾಕರ್ ಮುಂದಿನ ‌ದಿನಗಳಲ್ಲಿ‌ ನೀವು ಬೇರೆ ಬೇರೆಯಾಗಿಯೇ ಚುನಾವಣೆ ಎದುರಿಸಿ. ಜನರ ಬಳಿ ಹೋಗಿ.  ಕುಮಾರಸ್ವಾಮಿ ಯಾರ ಜೊತೆಯಾದರು ಹೋಗಲಿ ಕಾಂಗ್ರೆಸ್ ನಿಂದ ದೂರನಾದ್ರೂ ಉಳಿದುಕೊಳ್ಳಲಿ.   ಅವರಿಗೂ ಗೌರವ, ಕಾಂಗ್ರೆಸ್ ಗೂ ಗೌರವ ಉಳಿಯಲಿದೆ. ಎಷ್ಟು ಸಾರಿ ಮದುವೆ, ಡೈವರ್ಸ್ ಆಗೋದು ಎಂದು ಹೇಳಿದರು.

'HDK ಸ್ಟಾರ್ ಹೋಟೆಲ್‌ನಲ್ಲಿ ಇರ್ತಿದ್ರು, ಅಲ್ಲಿಗೆ ಯಾರನ್ನು ಬಿಡ್ತಿರಲಿಲ್ಲ' .

ಬಿಜೆಪಿ ಜೊತೆ ಕೈ ಜೋಡಿಸಿದ್ರೆ  ನಾನೇ ಸಿಎಂ ಎಂಬ ಹೇಳಿಕೆ ವಿಚಾರದ ಬಗ್ಗೆಯೂ ಮಾತನಾಡಿದ ಸುಧಾಕರ್ ಈಗ ಮದುವೆ ಆಗೋಗಿದೆ. ನಮ್ಮ ನಾಯಕ ಬಿಎಸ್ ವೈ ಅವರಿಗೆ ಬರೆದಿತ್ತು ಅವರಿಗೆ ಸಿಕ್ಕಿದೆ. ಹೆಚ್ ಡಿಕೆಗೆ ಒಂದೇ ವರ್ಷ ಅಂತಾ ಬರೆದಿತ್ತು, ವಿಧಿಯಾಟ ಏನು ಮಾಡಲಿಕ್ಕೆ ಆಗಲ್ಲ ಎಂದರು.

ಸಚಿವ ಸಂಪುಟ ವಿಸ್ತರಣೆ ಬಗ್ಗೆಯೂ ಈ ವೇಳೆ ಮಾತನಾಡಿದ ಸಚಿವರು ಸಿಎಂ ನಿರ್ಧಾರ ತೆಗೆದುಕೊಳ್ಳಲಿದ್ದಾರೆ.  ಹೈದರಾಬಾದ್ ಚುನಾವಣೆ ‌ಫಲಿತಾಂಶ ಸಂತಸ ತಂದಿದೆ. ನಮ್ಮ ನಿರೀಕ್ಷೆ ಗೆ ತಕ್ಕಂತೆ ಫಲಿತಾಂಶ ಬಂದಿದೆ ಎಂದರು.

Latest Videos
Follow Us:
Download App:
  • android
  • ios