Asianet Suvarna News Asianet Suvarna News

ಕಾಂಗ್ರೆಸ್‌ ನಾಯಕ ಇಲ್ಲದ ಪಕ್ಷ: ಸಚಿವ ಈಶ್ವರಪ್ಪ

ದೇಶದಲ್ಲಿ ನಾಯಕರಿಲ್ಲದ ಪಕ್ಷ ಒಂದೆಡೆಯಾದರೆ, ರಾಜ್ಯದಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿಕೆಶಿ ನಡುವೆ ನಡೆಯುತ್ತಿರುವ ತಿಕ್ಕಾಟದಿಂದಾಗಿ ಕಾಂಗ್ರೆಸ್‌ ಪಕ್ಷ ನೆಲಕಚ್ಚಿದೆ| ಗುಂಪುಗಾರಿಕೆಯಿಂದಾಗಿ ಕಾಂಗ್ರೆಸ್‌ ಪಕ್ಷ ಛಿದ್ರವಾಗಿದೆ: ಈಶ್ವರಪ್ಪ| 

Minister K S Eshwarappa Talks Over Congressgrg
Author
Bengaluru, First Published Oct 8, 2020, 3:21 PM IST
  • Facebook
  • Twitter
  • Whatsapp

ಕಲಬುರಗಿ(ಅ.08): ದೇಶದಲ್ಲಿ ಕಾಂಗ್ರೆಸ್‌ ಛಿದ್ರಛಿದ್ರವಾಗಿದೆ. ರಾಷ್ಟ್ರೀಯ ಅಧ್ಯಕ್ಷರೇ ಇಲ್ಲದ ಪಕ್ಷಕ್ಕೆ ಹಂಗಾಮಿ ನಾಯಕರಿದ್ದಾರೆ. ಅದೇ ಪಕ್ಷದ ವಿರುದ್ಧ ರಾಷ್ಟ್ರೀಯ ಕಾಂಗ್ರೆಸ್‌ನ 23 ಪ್ರಮುಖ ನಾಯಕರು ಸೋನಿಯಾ ಗಾಂಧಿ ಅವರ ನಾಯಕತ್ವವನ್ನು ಪ್ರಶ್ನಿಸಿ ಪತ್ರ ಬರೆದಿದ್ದಾರೆ. ದೇಶದಲ್ಲಿ ಕಾಂಗ್ರೆಸ್‌ ನಾಯಕ ಇಲ್ಲದ ಪಕ್ಷವಾಗಿದೆ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್‌. ಈಶ್ವರಪ್ಪ ಲೇವಡಿ ಮಾಡಿದ್ದಾರೆ.

ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದೇಶದಲ್ಲಿ ನಾಯಕರಿಲ್ಲದ ಪಕ್ಷ ಒಂದೆಡೆಯಾದರೆ, ರಾಜ್ಯದಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿಕೆಶಿ ನಡುವೆ ನಡೆಯುತ್ತಿರುವ ತಿಕ್ಕಾಟದಿಂದಾಗಿ ಕಾಂಗ್ರೆಸ್‌ ಪಕ್ಷ ನೆಲಕಚ್ಚಿದೆ ಎಂದು ಹೇಳಿದ್ದಾರೆ. 

ಕಲಬುರಗಿ: ದಿನಸಿ ತಾಂಡಾ ದಂಪತಿ ಕಗ್ಗೊಲೆ, 5 ಆರೋಪಿಗಳ ಹೆಡೆಮುರಿ ಕಟ್ಟಿದ ಪೊಲೀಸರು

ಗುಂಪುಗಾರಿಕೆಯಿಂದಾಗಿ ಕಾಂಗ್ರೆಸ್‌ ಪಕ್ಷ ಛಿದ್ರವಾಗಿದೆ ಎದು ಕಾಂಗ್ರೆಸ್‌ ಪಕ್ಷವನ್ನೇ ಗುರಿಯಾಗಿಸಿಕೊಂಡು ಸಚಿವ ಕೆ.ಎಸ್‌. ಈಶ್ವರಪ್ಪ ಮಾತಿನಲ್ಲಿ ಕುಟುಕಿದ್ದಾರೆ. 
 

Follow Us:
Download App:
  • android
  • ios