'ಸಿದ್ದರಾಮಯ್ಯ ಹೇಳಿದಂತೆ ಯತ್ನಾಳ್‌ ಕೇಳುತ್ತಿದ್ದಾರೆ'

ಯಾರದೋ ಹೇಳಿಕೆ ಗಂಭೀರ ಪರಿಗಣಿಸಬೇಕಾಗಿಲ್ಲ| ಯತ್ನಾಳ್‌ ಹೇಳಿದಂತಾದರೆ ಪ್ರತಿ ಹಬ್ಬಕ್ಕೊಬ್ಬ ಸಿಎಂ ಬದಲಾಗ್ತಾರೆ| ಪಕ್ಷದ ಶಿಸ್ತು ಮೀರಿ ಹೇಳಿಕೆ ಕೊಡುವುದು ಸರಿಯಲ್ಲ| ಈ ಬಗ್ಗೆ ಕೇಂದ್ರದ ಶಿಸ್ತು ಸಮಿತಿಗೆ ದೂರು ನೀಡಲಾಗಿದೆ. ಅವರೇ ಕ್ರಮ ಕೈಗೊಳ್ಳುತ್ತಾರೆ:ಈಶ್ವರಪ್ಪ| 

Minister K S Eshwarappa Talks Over Basanagouda Patil Yatnal grg

ಕಾರವಾರ(ಜ.31): 10 ಕೋಟಿಗೂ ಹೆಚ್ಚು ಸದಸ್ಯರಿರುವ ಬಿಜೆಪಿಯಲ್ಲಿ ಯಾರೋ ಒಬ್ಬರು ಹೇಳಿಕೆ ಕೊಟ್ಟರೆ ಅದಕ್ಕೆ ಬಹಳ ಮಹತ್ವ ಕೊಡಬೇಕಾಗಿಲ್ಲ ಎಂದು ಮುಖ್ಯಮಂತ್ರಿ ಬದಲಾವಣೆ ಕುರಿತ ಶಾಶಕ ಬಸನಗೌಡ ಪಾಟೀಲ್‌ ಯತ್ನಾಳ್‌ ಹೇಳಿಕೆ ಹಿನ್ನೆಲೆಯಲ್ಲಿ ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್‌. ಈಶ್ವರಪ್ಪ ಪ್ರತಿಕ್ರಿಯಿಸಿದ್ದಾರೆ.

ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಗ್ರಾಪಂ ಚುನಾವಣೆ ಮುಗಿಯುತ್ತಿದ್ದಂತೆ ಮುಖ್ಯಮಂತ್ರಿ ಬದಲಾವಣೆ ಆಗುತ್ತಾರೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳುತ್ತಿದ್ದರು. ಈಗ ಇನ್ಯಾವುದೋ ಸಮಯ ಹೇಳುತ್ತಾರೆ. ಒಂದೊಂದು ಹಬ್ಬಕ್ಕೆ ಒಂದೊಂದು ಮುಖ್ಯಮಂತ್ರಿ ಬದಲಾಯಿಸುತ್ತ ಹೋಗುತ್ತಾರೆ. ಅವರು ಹೇಳಿಕೆ ನೀಡಿದಂತೆ ಆದರೆ ಈ ತನಕ ಕನಿಷ್ಠ 25 ಮುಖ್ಯಮಂತ್ರಿಗಳಾದರೂ ಬದಲಾಗಬೇಕಿತ್ತು. ಸಿದ್ದರಾಮಯ್ಯ ಹೇಳಿದಂತೆ ಈಗ ಯತ್ನಾಳ್‌ ಹೇಳುತ್ತಿದ್ದಾರೆ. ಅವುಗಳನ್ನು ನಾವು ಗಂಭೀರವಾಗಿ ತೆಗೆದುಕೊಂಡಿಲ್ಲ. ಯತ್ನಾಳ್‌ ತಮಗೆ ಆತ್ಮೀಯ ಸ್ನೇಹಿತರು. ಪ್ರಖರ ಹಿಂದುತ್ವವಾದಿ. ಆದರೆ ಪಕ್ಷದ ಶಿಸ್ತು ಮೀರಿ ಹೇಳಿಕೆ ಕೊಡುವುದು ಸರಿಯಲ್ಲ. ಈ ಬಗ್ಗೆ ಕೇಂದ್ರದ ಶಿಸ್ತು ಸಮಿತಿಗೆ ದೂರು ನೀಡಲಾಗಿದೆ. ಅವರೇ ಕ್ರಮ ಕೈಗೊಳ್ಳುತ್ತಾರೆ ಎಂದರು.

ಗೋವಾ ಸಿಎಂ ಹೇಳಿಕೆಗೆ ತಲೆಕೆಡಿಸಿಕೊಳ್ಳಲ್ಲ: ಸಚಿವ ಈಶ್ವ​ರ​ಪ್ಪ

ಅವರ ಹೇಳಿಕೆಗಳಿಗೆ ಪ್ರತಿ ಹೇಳಿಕೆ ನೀಡುವುದಕ್ಕಿಂತ ಅಭಿವೃದ್ಧಿಗೆ ಹೆಚ್ಚು ಆದ್ಯತೆ ನೀಡುತ್ತೇವೆ ಎಂದು ಸಚಿವ ಈಶ್ವರಪ್ಪ ತಿಳಿಸಿದರು.
 

Latest Videos
Follow Us:
Download App:
  • android
  • ios