ಕಾರವಾರ(ಜ.31): ಮಹದಾಯಿ ಬಗ್ಗೆ ಗೋವಾ ಮುಖ್ಯಮಂತ್ರಿ ಏನೇ ಹೇಳಲಿ, ನಾವು ತಲೆಕೆಡಿಸಿಕೊಳ್ಳುವುದಿಲ್ಲ. ಯಾರೋ ಏನೋ ಹೇಳುತ್ತಾರೆ ಎಂದರೆ ನಾವು ಯಾಕೆ ತಲೆ​ಕೆ​ಡಿ​ಸಿ​ಕೊ​ಳ್ಳ​ಬೇಕು ಎಂದು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್‌ರಾಜ್‌ಸಚಿವ ಕೆ.ಎಸ್‌. ಈಶ್ವರಪ್ಪ ತಿಳಿ​ಸಿ​ದ್ದಾ​ರೆ. 

ಮಹ​ದಾಯಿ ವಿಚಾ​ರ​ದಲ್ಲಿ ಗೋವಾ ಸಿಎಂ ನೀಡಿದ ಹೇಳಿ​ಕೆಗೆ ಸಂಬಂಧಿಸಿ ಶನಿ​ವಾರ ಮಾಧ್ಯ​ಮ​ಗಳಿಗೆ ಪ್ರತಿ​ಕ್ರಿ​ಯಿ​ಸಿದ ಅವ​ರು, ಪ್ರಮೋದ್‌ಸಾವಂತ್‌ಏನೇ ಹೇಳಲಿ, ಅದಕ್ಕೆ ನ್ಯಾಯ ಮಂಡಳಿ ಇದೆ. ಜನಪ್ರಿಯತೆಗಾಗಿ ಏನು ಬೇಕಾದರೂ ಹೇಳುತ್ತಾರೆ. ಅವರ ಯಾವ ಹೇಳಿಕೆಗೂ ನಾವು ತಲೆಕೆಡಿಸಿಕೊಳ್ಳುವುದಿಲ್ಲ. ಯಾರೋ ಒಬ್ಬ ವ್ಯಕ್ತಿ ಹೇಳಿದರೆ ಏನೂ ಆಗುವುದಿಲ್ಲ. ಇಂದು ಗೋವಾ ಮುಖ್ಯಮಂತ್ರಿ, ನಾಳೆ ಮಹಾರಾಷ್ಟ್ರ ಮುಖ್ಯಮಂತ್ರಿ ಹೇಳಿಕೆ ಕೊಡುತ್ತಾರೆ. ಅವರ ಹೇಳಿಕೆಗಳಿಗೆಲ್ಲ ನಾವು ಉತ್ತರಿಸುತ್ತ ಹೋದರೆ ಸುಮ್ಮನೆ ಕಾಲಹರಣವಷ್ಟೆ ಎಂದರು.

ಕರ್ನಾಟಕದ ವಿರುದ್ಧ ತಿರುಗಿ ಬಿದ್ದ ನೆರೆ ರಾಜ್ಯಗಳು: ಠಾಕ್ರೆ ಬಳಿಕ ಗೋವಾ ಸಿಎಂ ಉದ್ಧಟತನದ ಹೇಳಿಕೆ

ಮಹದಾಯಿ ವಿಚಾರದಲ್ಲಿ ಸಂವಿಧಾನಬದ್ಧವಾದ ತೀರ್ಮಾನಕ್ಕೆ ತಲೆಬಾಗುತ್ತೇವೆ. ಸುಪ್ರೀಂ ಕೋರ್ಟ್‌ಏನು ತೀರ್ಮಾನ ಕೊಡುತ್ತದೆಯೋ ಅದಕ್ಕೆ ತಲೆಬಾಗುತ್ತೇವೆ ಎಂದ​ರು.