‘ಸಿದ್ದರಾಮಯ್ಯ, ದೇವೇಗೌಡ, ಕುಮಾರಸ್ವಾಮಿ ಎಂದೂ ಒಂದಾಗಿಲ್ಲ’
ಸಿದ್ದರಾಮಯ್ಯ, ಕುಮಾರಸ್ವಾಮಿ, ದೇವೇಗೌಡ ಎಂದಿಗೂ ಒಂದಾಗಿ ಕೆಲಸ ಮಾಡಿಲ್ಲ. ಒಂದೇ ಪಕ್ಷದಲ್ಲಿದ್ದಗಲೂ ಒಟ್ಟಾಗಿ ಕೆಲಸ ನಿರ್ವಹಿಸಿಲ್ಲ ಎಂದು ಸಚಿವ ಶೆಟ್ಟರ್ ಹೇಳಿದ್ದಾರೆ.
ಚಿಕ್ಕಮಗಳೂರು [ಫೆ.07] : ಸಿದ್ದರಾಮಯ್ಯ, ದೇವೇಗೌಡ, ಕುಮಾರಸ್ವಾಮಿ ಎಂದೂ ಒಂದಾಗಿ ಕೆಲಸ ಮಾಡಿಲ್ಲ ಎಂದು ಸಚಿವ ಜಗದೀಶ್ ಶೆಟ್ಟರ್ ವ್ಯಂಗ್ಯವಾಡಿದ್ದಾರೆ.
ಚಿಕ್ಕಮಗಳೂರು ಜಿಲ್ಲೆಯ ಅಜ್ಜಂಪುರಕ್ಕೆ ಭೇಟಿ ನೀಡಿದ್ದ ಮಧ್ಯಮ ಮತ್ತು ಬೃಹತ್ ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್, ಸಿದ್ದರಾಮಯ್ಯ, ದೇವೇಗೌಡ, ಕುಮಾರಸ್ವಾಮಿ ಒಂದೇ ಪಕ್ಷದಲ್ಲಿದ್ದಾಗಲೂ ಒಟ್ಟಾಗಿ ಕೆಲಸ ಮಾಡಿಲ್ಲ ಎಂದು ಶೆಟ್ಟರ್ ಹೇಳಿದರು.
ಸಿದ್ದರಾಮಯ್ಯ ಅಧಿಕಾರ ಎಲ್ಲಿರುತ್ತದೆಯೋ ಅಲ್ಲಿಗೆ ಹೋಗುತ್ತಾರೆ. ಟೀಕೆ, ಬಂಡಾಯ ಮಾಡಿಕೊಂಡು ಹೊರ ಬಂದ ವ್ಯಕ್ತಿ ಎಂದು ಟಾಂಗ್ ನೀಡಿದ್ದಾರೆ.
ಸಾಹುಕಾರ್ ಆಟಕ್ಕೆ ಮಣಿಯುತ್ತಾ 'ಹೈ' ಕಮಾಂಡ್?...
ಮೂಲಕ ಕಾಂಗ್ರೆಸಿಗರ ಅವಕಾಶ ಕಿತ್ತುಕೊಂಡು ಅಲ್ಲಿ ಡಾಮಿನೇಟ್ ಆಗಲು ಹೊರಟಿದ್ದಾರೆ. ಆದರೆ ಈಗ ಅಲ್ಲಿಂದಲೂ ಸಿದ್ದರಾಮಯ್ಯಗೆ ವಿರೋಧ ವ್ಯಕ್ತವಾಗುತ್ತಿದೆ ಎಂದರು.
ಯಾವಾಗಲೂ 'ಅವರನ್ನು' ತಬ್ಬಿಕೊಂಡೇ ಇರಲು ಆಗುತ್ತಾ?..
ಪ್ರತಿಪಕ್ಷ ನಾಯಕನಾಗಿ ಕೆಪಿಸಿಸಿ ಅಧ್ಯಕ್ಷ ಯಾರು ಎಂದು ನಿರ್ಧಾರ ಮಾಡಲು ಆಗಿಲ್ಲ. ಅದಕ್ಕೆ ಸಿದ್ದರಾಮಯ್ಯ ದುರಾಸೆಯೇ ಕಾರಣ ಎಂದು ಜಗದೀಶ್ ಶೆಟ್ಟರ್ ಚಿಕ್ಕಮಗಳೂರು ಜಿಲ್ಲೆ ಅಜ್ಜಂಪುರ ತಾಲೂಕಿನ ಕಲ್ಕೆರೆಯಲ್ಲಿ ಹೇಳಿದರು.