Asianet Suvarna News Asianet Suvarna News

ಧಾರವಾಡ ಕೆಡಿಪಿ ಸಭೆಯಲ್ಲಿ ಎಣ್ಣೆ ಕಿಕ್, ಅಬಕಾರಿ, ಪೊಲೀಸ್‌ ಇಲಾಖೆಗೆ ಕ್ಲಾಸ್

ಗ್ರಾಮೀಣ ಭಾಗದಲ್ಲಿ ಮದ್ಯ ಕುಡಿದು ಬಡವರು ಸಾಯ್ತಾ ಇದಾರೆ ..!
 ಒಂದೆ ಊರಲ್ಲಿ 19 ಕಡೆ ಅಕ್ರಮ ಮದ್ಯ ಮಾರಾಟ ನಡೀತಿದ್ರು ಕಣ್ಣು ಮುಚ್ಚಿ ಕುಳಿತ ಅಬಕಾರಿ ಇಲಾಖೆ 
ಅಬಕಾರಿ ಇಲಾಖೆ,ಪೋಲಿಸ್ ಇಲಾಖೆ ಮೆಲೆ ಸಚಿವರು ಗರಂ ..

Minister halappa achar pulls-up  Police And Excise And Police Dept In Dharwad KDP Meeting rbj
Author
Bengaluru, First Published Apr 9, 2022, 5:01 PM IST | Last Updated Apr 9, 2022, 5:01 PM IST

 ಧಾರವಾಡ, (ಏ.09) : ಧಾರವಾಡ ಜಿಲ್ಲಾ ಪಂಚಾಯತ ಸಭಾಂಗಣದಲ್ಲಿ ನಾಲ್ಕನೇಯ ತ್ರೈಮಾಸಿಕ ಸಭೆ ಜಿಲ್ಲಾ ಉಸ್ತುವಾರಿ ಸಚಿವ ಹಾಲಪ್ಪ ಆಚಾರ ಅವರ ನೃತೃತ್ವದಲ್ಲಿ ನಡೆಯಿತು. ಸಭೆಯಲ್ಲಿ  ಕಲಘಟಗಿ ವಿಧಾನಸಭಾ ಕ್ಷೆತ್ರ ಬಿಜೆಪಿ ಶಾಸಕ ಸಿಎಂ ನಿಂಬಣ್ಣವರು ಪೋಲಿಸ್ ಇಲಾಖೆ ಮತ್ತು ಅಬಕಾರಿ ಇಲಾಖೆಯ ಅಧಿಕಾರಿಗಳ ವಿರುದ್ದ ಕಿಡಿಕಾರಿದರು...

ಪಟ್ಟಣಗಳಿಂದ ಮದ್ಯವನ್ನ‌ ಕಡಿಮೆ‌ ದರದಲ್ಲಿ ಖರಿದಿ ಮಾಡಿಕ್ಕೊಂಡು ಗ್ರಾಮೀಣ ಭಾಗದಲ್ಲಿ ಡಬಲ್ ತ್ರಿಬಲ್ ದರಕ್ಕೆ ಮಾರಾಟವನ್ನ ಮಾಡ್ತಾ ಇದಾರೆ ಮಧ್ಯವರ್ತಿಗಳು ಇದರ ಪೋಲಿಸ್ ಇಲಾಖೆ ಯಾಕೆ ಕ್ರಮ ಕೈಗೊಳ್ಖುತ್ತಿಲ್ಲ, ಇನ್ನು ಕಳಘಟಗಿ ತಾಲೂಕಿನ ಗ್ರಾಮ ವೊಂದರಲ್ಲಿ 19 ಕಡೆ ಮದ್ಯ ಮಾರಾಟವನ್ನ ಮಾಡ್ತಾ ಇದಾರೆ. ಅವರ ಬಗ್ಗೆ ಪೋಲಿಸ್ ಇಲಾಖೆಗೆ ಗೊತ್ತಿಲ್ವಾ ಮದ್ಯವರ್ತಿಗಳು ಮಾರಾಟ ಮಾಡಿ ಶ್ರಿಮಂತ ವಾಗುತ್ತಿದ್ದಾರೆ..ಬಡ ಜನರ ಜೀವನ ಹಾಳು ಮಾಡುತ್ತಿದ್ದಾರೆ 

Dharwad: ತಳಪಾಯ ಹಂತದಲ್ಲೇ ಉಳಿದ ಮನೆಗಳು: ಅತಂತ್ರರಾದ ಫಲಾನುಭವಿಗಳು

ಪೋಲಿಸ್ ಇಲಾಖೆ ಮೆಲೆ  ಸಚಿವ ಹಾಲಪ್ಪ ಗರಂ
 ನಿಮ್ಮ ಜವಾಬ್ದಾರಿ ನೂ ಕೂಡಾ ಇದೆ, ನೀವು ಸರಿಯಸ್ ಆಗಿ ಕ್ರಮ ಕೈಗೊಳ್ಳಬೇಕು, ನೀವು ತಪ್ಪು ಮಾಡಲಿಕ್ಕೆ ಅವಕಾಶ ಕೊಡ್ತಿರಿ ಅದಕ್ಕೆ ಅವರು ಮತ್ತೆ ಮತ್ತೆ ಅದೆ ತಪ್ಪನ್ನ ಮಾಡ್ತಾ ಹೋಗ್ತಾರೆ ಬರವರು ಸಾಯುತ್ತಾರೆ, ಧಾರವಾಡ ಜಿಲ್ಲೆ ಒಳ್ಳೆಯ ಹೆಸರು ಇದೆ..ಇಂತಹ ಸಭೆಗಳಲ್ಲಿ ಚರ್ಚೆಗೆ ಬರಬಾರದು ಹಾಗೆ ಕ್ರಮ ಕೈಗೊಳ್ಳಿ, ಪೋಲಿಸ್ ಇಲಾಖೆಗೆ ಜವಾಬ್ದಾರಿ ಇಲ್ವಾ..ಮದ್ಯ ಮಾರಾಟ ಮಾಡೋರ ಬಗ್ಗೆ‌ ನಿಮಗೆ ಮಾಹಿತಿ ಸಿಗಲ್ವಾ ಎಂದು ಅಬಕಾರಿ ಅಧಿಕಾರಿಗಳಿಗೆ ಜಿಲ್ಲಾ ಉಸ್ತುವಾರಿ ಹಾಲಪ್ಪ ಆಚಾರ ತರಾಟಗೆ ತೆಗೆದುಕೊಂಡರು..

ಬಳಿಕ ಮದ್ಯ ಪ್ರವೇಶ ಮಾಡಿ ಎಸ್ಪಿ ಪಿ ಕೃಷ್ಣಕಾಂತ ಅವರು ನಾನು ಆದಷ್ಡು ಬೇಗ ಮಾಹಿತಿಯನ್ನ‌ ಗ್ರಾಮಿಣ ಬಾಗದಲ್ಲಿ ಎಲ್ಲೆಲ್ಲಿ ಅಕ್ರಮ ಸರಾಯಿ ಮಾರಾಟ ಮಾಡ್ತಾ ಇದಾರೆ ಅವರನ್ನ ಪತ್ತೆ ಹಚ್ಚಿ ಅವರ ಮೆಲೆ‌ ಕ್ರಮವನ್ನ ಜರುಗಿಸಲಾಗುವುದು ಎಂದು ಸಭೆಯಲ್ಲಿ ಹೇಳಿದರು..

Latest Videos
Follow Us:
Download App:
  • android
  • ios