ಆ್ಯಸಿಡ್ ದಾಳಿಗೆ ಒಳಗಾದ ಯುವತಿಯ ನೆರವಿಗೆ ಧಾವಿಸಿದ ಸಚಿವ ಹಾಲಪ್ಪ ಆಚಾರ್
* ತೀವ್ರ ಆರ್ಥಿಕ ಸಂಕಷ್ಟದಲ್ಲಿ ಆ್ಯಸಿಡ್ ಸಂತ್ರಸ್ತೆ ಕುಟುಂಬ
* ಆ್ಯಸಿಡ್ ದಾಳಿಗೆ ಒಳಗಾದ ಯುವತಿಯ ನೆರವಿಗೆ ಧಾವಿಸಿದ ಸಚಿವ ಹಾಲಪ್ಪ ಆಚಾರ್
* ಏಷ್ಯಾನೆಟ್ ಸುವರ್ಣ ನ್ಯೂಸ್ ನ ನಿರಂತರ ವರದಿಗೆ ಸ್ಪಂದನೆ
ವರದಿ: ದೊಡ್ಡೇಶ್ ಯಲಿಗಾರ್ ಏಷ್ಯಾನೆಟ್ ಸುವರ್ಣ ನ್ಯೂಸ್
ಕೊಪ್ಪಳ, (ಏ.30): ಬೆಂಗಳೂರಿನಲ್ಲಿ ಸೈಕೋ ಪ್ರೇಮಿಯಿಂದ ಆ್ಯಸಿಡ್ ದಾಳಿಗೆ ಒಳಗಾದ ಯುವತಿ ಸಾವು ಬದುಕಿನ ಈ ಹೋರಾಟ ನಡೆಸುತ್ತಿದ್ದಾಳೆ. ಆಕೆಯ ಚಿಕಿತ್ಸೆಗೆ ಆರ್ಥಿಕ ನೆರವಿನ ಅವಶ್ಯಕತೆ ಇದೆ. ಈ ಹಿನ್ನಲೆಯಲ್ಲಿ ಏಷ್ಯಾನೆಟ್ ಸುವರ್ಣ ನ್ಯೂಸ್ ನ ನಿರಂತರ ವರದಿಗೆ ಸ್ಪಂದಿಸಿರುವ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವ ಹಾಲಪ್ಪ ಆಚಾರ್ ಯುವತಿಯ ಕುಟುಂಬದ ನೆರವಿಗೆ ಧಾವಿಸಿದ್ದಾರೆ.
ಹೌದು.... ಸುವರ್ಣ ನ್ಯೂಸ್ ವರದಿಗೆ ಸ್ಪಂದಿಸಿದ ಸಚಿವ ಹಾಲಪ್ಪ ಆಚಾರ್ ವಯಕ್ತಿಕವಾಗಿ ಯುವತಿಗೆ 1 ಲಕ್ಷ ಪರಿಹಾರ ನೀಡುವುದಾಗಿ ಘೋಷಿಸಿದರು. ಜೊತೆಗೆ ಯುವತಿಯ ಚಿಕಿತ್ಸೆಗೆ ಸಂಬಂಧಿಸಿದಂತೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಿಂದ ಸಂಪೂರ್ಣವಾಗಿ ಸಹಾಯ ಮಾಡಲಾಗುವುದಾಗಿ ತಿಳಿಸಿದರು. ಜೊತೆಗೆ ಕಾನೂನಿನಲ್ಲಿ ಪರಿಹಾರ ನೀಡಲು ಅವಕಾಶ ಇದ್ದರೆ ಪರಿಹಾರವನ್ನು ಸಹ ನೀಡಲಾಗುವುದಾಗಿ ಭರವಸೆ ನೀಡಿದರು.
ಇನ್ನು ಈ ಕೂಡಲೇ ಯುವತಿಗೆ 1 ಲಕ್ಷ ಪರಿಹಾರವನ್ನು ಕಳುಹಿಸಿಕೊಡುವುದಾಗಿ ತಿಳಿಸಿದ ಸಚಿವ ಆಚಾರ್, ಅಧಿಕಾರಿಗಳನ್ನು ಯುವತಿ ಇದ್ದ ಕಡೆ ಕಳುಹಿಸಿಲಾಗುವುದು ಎಂದು ಎಂದರು.
Acid Attack: ತೀವ್ರ ಆರ್ಥಿಕ ಸಂಕಷ್ಟದಲ್ಲಿ ಆ್ಯಸಿಡ್ ಸಂತ್ರಸ್ತೆ ಕುಟುಂಬ
ಆ್ಯಸಿಡ್ ದಾಳಿ ಮಾಡಿದವನಿಗೆ ಶಿಕ್ಷೆಯಾಗಲಿ
ಬೆಂಗಳೂರಿನಲ್ಲಿ ಯುವತಿಯ ಮೇಲೆ ನಡೆದ ಆ್ಯಸಿಡ್ ದಾಳಿ ಪ್ರಕರಣ ನಡೆದಿರುವುದು ನಿಜಕ್ಕೂ ನಾವೆಲ್ಲ ತಲೆತಗ್ಗಿಸುವ ಘಟನೆಯಾಗಿದ್ದು,
ಇನ್ನೂ ಇಂತಹ ಕ್ರಿಮಿಗಳು ಇವೆಯಲ್ಲ ಎಂದು ತಲೆತಗ್ಗಿಸಬೇಕಿದೆ ಎಂದ ಸಚಿವ ಆಚಾರ್, ಇಂತಹ ಘಟನೆ ನಡೆಯಬಾರದಿತ್ತು, ಎಲ್ಲರೂ ಕನಿಕರ ಪಡಬೇಕಿದೆ. ಮನುಷ್ಯತ್ವವನ್ನು ಬಿಟ್ಟು ಆರೋಪಿ ಈ ಕೃತ್ಯ ಮಾಡಿದ್ದಯ, ಇನ್ನೊಮ್ಮೆ ಇಂತಹ ಕೃತ್ಯಕ್ಕೆ ಕೈಹಾಕಬಾರದು ಎಂಬಂತ ಶಿಕ್ಷೆ ಆಗಬೇಕೆಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವ ಹಾಲಪ್ಪ ಆಚಾರ್ ಹೇಳಿದರು.
ಆ್ಯಸಿಡ್ ದಾಳಿಯ ಪ್ರಕರಣ
ಕಳೆದ ಕೆಲ ಸಮಯಗಳಿಂದ ಯುವತಿಯ ಬೆನ್ನುಬಿದ್ದಿದ್ದ ವಿಕೃತ ಪ್ರೇಮಿ ನಾಗೇಶ್, ತನ್ನನ್ನು ಪ್ರೀತಿಸುವಂತೆ ಪೀಡಿಸುತ್ತಿದ್ದ. ಆದರೆ ಆಕೆ ತಿರಸ್ಕರಿಸಿದ್ದಳು. ನೀನು ನನ್ನ ಅಣ್ಣನಂತೆ, ನಿನ್ನನ್ನು ಪ್ರೀತಿ ಮಾಡಲು ಸಾಧ್ಯವಿಲ್ಲ ಎಂದು ಅನೇಕ ಸಲ ಹೇಳಿದ್ದಳು. ಅದಾಗ್ಯೂ ಆತ ಈಕೆಯ ಬೆನ್ನು ಬಿದ್ದಿದ್ದು, ಪ್ರೀತಿಸಲೇಬೇಕೆಂದು ಬೆದರಿಕೆ ಹಾಕಿದ್ದ. ಆದರೆ ಆಕೆ ಸಾಧ್ಯವೇ ಇಲ್ಲ ಎಂದು ಖಡಾಖಂಡಿತವಾಗಿ ಹೇಳಿದ್ದಕ್ಕೆ ಆಕೆಯ ಕಚೇರಿ ಬಳಿ ತೆರಳಿ ಆಸಿಡ್ ದಾಳಿ ಮಾಡಿದ್ದಾನೆ.
ಯುವತಿಯ ಕುಟುಂಬ ಸಂಕಷ್ಟದಲ್ಲಿ
ಇನ್ನು ಆ್ಯಸಿಡ್ ದಾಳಿಗೆ ಒಳಗಾಗಿರುವ ಯುವತಿಯ ಕುಟುಂಬ ತೀರಾ ಕಷ್ಟದಲ್ಲಿದೆ. ಆಕೆಯ ಹೆಚ್ಚಿನ ಚಿಕಿತ್ಸೆಗೆ ಅರ್ಥಿಕ ನೆರವಿನ ಅವಶ್ಯಕತೆ ಇದೆ.ಆದರೆ ಯುವತಿಯ ಕುಟುಂಬ ಚಿಕಿತ್ಸೆ ಕೊಡಿಸುವ ಸ್ಥಿತಿಯಲ್ಲಿ ಇಲ್ಲ. ಹೀಗಾಗಿ ನಮ್ಮ ಮಗಳಿಗೆ ಚಿಕಿತ್ಸೆ ಕೊಡಿಸಲು ಹಣ ನೀಡುವ ಮೂಲಕ ನಮಗೆ ನೆರವಾಗಿ ಎಂದು ಆಕೆಯ ಪಾಲಕರು ಬೇಡಿಕೊಳ್ಳುತ್ತಿದ್ದಾರೆ.
ಒಟ್ಟಿನಲ್ಲಿ ಆ್ಯಸಿಡ್ ದಾಳಿಗೆ ಒಳಗಾಗಿ ಸಂತ್ರಸ್ಥ ಯುವತಿ ಆಸ್ಪತ್ರೆಯ ಸಾವು ಬದುಕಿನ ಮದ್ಯೆ ಹೋರಾಟ ನಡೆಸುತ್ತಿದ್ದಾಳೆ. ಈ ಮದ್ಯೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವ ಸಚಿವ ಹಾಲಪ್ಪ ಆಚಾರ್ ಯುವತಿಗೆ ವಯ್ಯಕ್ತಿಕವಾಗಿ 1 ಲಕ್ಷ ನೆರವು ನೀಡಿದ್ದಾರೆ. ಜೊತೆಗೆ ಸರಕಾರದಿಂದಲೂ ಸಹ ನೆರವಿನ ಭರವಸೆ ನೀಡಿದ್ದಾರೆ. ಆದಷ್ಟು ಬೇಗೆ ಸಂತ್ರಸ್ಥೆ ಯುವತಿಗೆ ಪರಿಹಾರ ದೊರಕಿಸಿಕೊಟ್ಟಾಗ ಮಾತ್ರ ಸಚಿವ ಆಚಾರ್ ಮಾತು ಕೊಟ್ಟಂತೆ ನಡೆದುಕೊಂಡಂತೆ ಆಗುತ್ತದೆ.