Asianet Suvarna News

ಸದ್ದಿಲ್ಲದೆ ಎದುರಾಳಿಗೆ ಶಾಕ್ ಕೊಟ್ಟ ಡಿಕೆ ಶಿವಕುಮಾರ್

ಒಂದೆಡೆ ಆಪರೇಶನ್ ಕಮಲ ವಿಚಾರ  ತಣ್ಣಗಾಗುತ್ತಿರುವ ಸಂದರ್ಭದಲ್ಲಿಯೇ ಡಿಕೆಶಿ ತಮ್ಮ ಕೋಟೆಯನ್ನು ಮತ್ತಷ್ಟು ಭದ್ರ ಮಾಡಿಕೊಳ್ಳಲು ಮುಂದಾಗಿದ್ದು ಎದುರಾಳಿ ಯೋಗೇಶ್ವರ್‌ಗೆ ಸರಿಯಾದ ಟಾಂಗ್ ಕೊಟ್ಟಿದ್ದಾರೆ.

Minister DK Shivakumar Attacks BJP Leader CP Yogeshwar Channapatna
Author
Bengaluru, First Published Jan 2, 2019, 4:19 PM IST
  • Facebook
  • Twitter
  • Whatsapp

ರಾಮನಗರ(ಜ.02)  ಹೊಸ ವರ್ಷ ಆರಂಭದಲ್ಲೇ ಮಾಜಿ ಸಚಿವ ಸಿ.ಪಿ.ಯೋಗೇಶ್ವರ್‌ಗೆ ಸಚಿವ ಡಿ.ಕೆ.ಶಿವಕುಮಾರ್  ಶಾಕ್ ಕೊಟ್ಟಿದ್ದಾರೆ.

ಸಿ.ಪಿ ಯೋಗೇಶ್ವರ್ ಗೆ ಮುಖಭಂಗ ಮಾಡಲು ಚನ್ನಪಟ್ಟಣದ ಬಿಜೆಪಿ ಕಾರ್ಯಕರ್ತರು, ಮುಖಂಡರು ಕಾಂಗ್ರೆಸ್ ಸೇರಬಹುದು ಎಂದು ಆಹ್ವಾನ ನೀಡಿದ್ದಾರೆ.

ಇದೆ ವ್ಯಕ್ತಿ 2018ರ ಕರ್ನಾಟಕ ರಾಜಕಾರಣದ ಅಸಲಿ ಚಾಂಪಿಯನ್

ಚನ್ನಪಟ್ಟಣ ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ಕೈ ಮುಖಂಡರು ಯಾರಾದರು ಸರಿ ಪಕ್ಷಕ್ಕೆ ಸೇರಲು ನಮ್ಮ ಪಕ್ಷದ ಬಾಗಿಲು ಸದಾ ತೆರೆದಿರುತ್ತದೆ ಎಂದು ಡಿಕೆಶಿ ರವಾನಿಸಿರುವ ಪತ್ರವನ್ನು ಬಿಡುಗಡೆ ಮಾಡಿದ್ದಾರೆ.

ಈಗಾಗಲೇ ಚನ್ನಪಟ್ಟಣದ ಕೆಲ ಬಿಜೆಪಿ ಮುಖಂಡರು ಡಿಕೆ ಶಿವಕುಮಾರ್ ಅವರನ್ನು ಭೇಟಿಯಾಗಿದ್ದಾರೆ. ಮುಂದಿನ ದಿನಗಳಲ್ಲಿ ಈ ಬಗ್ಗೆ ಸಂಪೂರ್ಣ ಮಾಹಿತಿ ಕೊಡುತ್ತೇವೆ ಎಂದು ಹೇಳಿದ್ದಾರೆ.

ಸಿ.ಪಿ.ಯೋಗೇಶ್ವರ್ ಕಾಂಗ್ರೆಸ್ ಗೆ ಸೇರಿಸಿಕೊಳ್ಳುವುದು ಹೈಕಮಾಂಡ್ ಗೆ ಬಿಟ್ಟ ವಿಚಾರ. ಹೈಕಮಾಂಡ್ ಒಪ್ಪಿದ್ರೆ ನಾವು ಯೋಗೇಶ್ವರ್ ಗೆ ಸ್ವಾಗತ ಕೋರುತ್ತೇವೆ ಎಂದು ಚನ್ನಪಟ್ಟಣ ಗ್ರಾಮಾಂತರ ಕಾಂಗ್ರೆಸ್ ಅಧ್ಯಕ್ಷ ಎ.ಸಿ.ವೀರೇಗೌಡ ಹೇಳಿಕೆ ನೀಡಿರುವುದು ಇನ್ನಷ್ಟು ಕುತೂಹಲಕ್ಕೆ ಕಾರಣವಾಗಿದೆ.

 

 

 

 

 

 

Follow Us:
Download App:
  • android
  • ios