ಇದೆ ವ್ಯಕ್ತಿ 2018ರ ಕರ್ನಾಟಕ ರಾಜಕಾರಣದ ಅಸಲಿ ಚಾಂಪಿಯನ್

ಹಳೆಯ ವರ್ಷಕ್ಕೆ ಗುಡ್ ಬೈ ಹೇಳಿ ಹೊಸ ವರ್ಷದ ಕಡೆಗೆ ರಾಜಕಾರಣವೂ ಮುಖ ಮಾಡಿದೆ.  ಹಾಗಾದರೆ ರಾಜ್ಯ ರಾಜಕಾರಣದ ಮಟ್ಟಿಗೆ 2018ರ ಚಾಂಪಿಯನ್ ಪಟ್ಟ ಯಾರಿಗೆ ಹೋಗುತ್ತದೆ?

Goodbye 2018 The Real champion of Karnataka politics Minister DK Shivakumar

ಬೆಂಗಳೂರು[ಡಿ.30]  ಕರ್ನಾಟಕ ರಾಜಕಾರಣದ ಮಟ್ಟಿಗೆ 2018 ಸರಣಿ ಘಟನೆಗಳ ವರ್ಷ. ವಿಧಾನಸಭೆ ಚುನಾವಣೆ, ಒಂದೆ ತಿಂಗಳಲ್ಲಿ ಮೂವರು ಸಿಎಂ, ದೋಸ್ತಿ ಸರ್ಕಾರ ರಚನೆ ಒಟ್ಟಿನಲ್ಲಿ ರಾಜಕಾರಣಿಗಳು ಸಿಕ್ಕಾಪಟ್ಟೆ ಬ್ಯುಸಿಯಾಗಿದ್ದ ವರ್ಷ. ಹಾಗಾದರೆ ಕರ್ನಾಟಕ ರಾಜಕಾರಣದ ಚಾಂಪಿಯನ್ ಅಥವಾ ಪುರುಷೋತ್ತಮ ಪಟ್ಟ ಯಾರಿಗೆ ಸಲ್ಲುತ್ತದೆ?

ಹೌದು ಚಾಂಪಿಯನ್ ಪಾರಿತೋಷಕವನ್ನು ಸಚಿವ ಡಿಕೆ ಶಿವಕುಮಾರ್ ಅವರಿಗೆ ಕೊಡಲೇಬೇಕು. ಅದಕ್ಕೆ ಹಲವಾರು ಕಾರಣಗಳು, ನಿದರ್ಶನಗಳು ನಮ್ಮ ಮುಂದೆ ಇದೆ.

ಗುಡ್‌ ಬೈ 2018: ಕರ್ನಾಟಕ ಕಂಡ ರಾಜಕಾರಣದ 5 ಪಲ್ಲಟಗಳು

ಗುಜರಾತ್ ಶಾಸಕರ ಪ್ರಕರಣ: ಗುಜರಾತ್‌ನಲ್ಲಿ ಕಾಂಗ್ರೆಸ್ ಶಾಸಕರನ್ನು ಕುದುರೆ ವ್ಯಾಪರಕ್ಕೆ ಬಳಸಿಕೊಳ್ಳಲಾಗುತ್ತಿದೆ ಎಂದು ಗೊತ್ತಾಗಿದ್ದ ಕಾಂಗ್ರೆಸ್ ಹೈಕಮಾಂಡ್ ಅವರನ್ನು ಕರ್ನಾಟಕಕ್ಕೆ ಕಳುಹಿಸಿಕೊಟ್ಟಿತ್ತು. ಇದೇ ಸಂದರ್ಭದಲ್ಲಿ ಸಚಿವ ಡಿಕೆ ಶಿವಕುಮಾರ್ ಮನೆ ಮೇಲೆ ಐಟಿ ದಾಳಿಯೂ ನಡೆದಿತ್ತು. ಆದರೆ ಐಟಿ ದಾಳಿಯನ್ನು ಸಮಗ್ರವಾಗಿ ಎದುರಿಸಿ ಗುಜರಾತ್ ಶಾಸಕರನ್ನು ಸೇವ್ ಮಾಡಿ ಕಾಂಗ್ರೆಸ್‌ಗೆ ಮೇಲಗೈ ಮಾಡಿಕೊಟ್ಟಿದ್ದು ಇದೆ ಡಿಕೆ ಶಿವಕುಮಾರ್. ಇದು 2017ರ ಪ್ರಕರಣವಾದರೂ ಹೈ ಕಮಾಂಡ್‌ಗೆ ಡಿಕೆಶಿ ಸಾಕಷ್ಟು ಹತ್ತಿರವಾಗಿದ್ದು ಇಲ್ಲಿಯೆ.

Goodbye 2018 The Real champion of Karnataka politics Minister DK Shivakumar

ದೋಸ್ತಿ ಸರ್ಕಾರ ರಚನೆ:  ಅತಂತ್ರ ವಿಧಾನಸಭೆ ನಿರ್ಮಾಣವಾದ ವೇಳೆ ಡಿಕೆ ಶಿವಕುಮಾರ್ ಅವರೇಮುಂದಾಗಿ ಕಾಂಗ್ರೆಸ್ ಜೆಡಿಎಸ್ ದೋಸ್ತಿ ಮಾಡಿಸಿದ್ದರು. ಇದು ಅಲ್ಲದೇ ಆಪರೇಶನ್ ಕಮಲ ಭೀತಿಯಲ್ಲಿದ್ದ ಶಾಸಕರನ್ನು ಹಿಡಿದಿಟ್ಟಿದ್ದು, ರೆಸಾರ್ಟ್ ನಲ್ಲಿ ರಕ್ಷಣೆ ಮಾಡಿದ್ದು.. ಪಕ್ಷೇತರರನ್ನು ಕರೆತಂದಿದ್ದು ಎಲ್ಲವೂ ಡಿಕೆಶಿ ಮಹಿಮೆಯೇ

ಉಪಚುನಾವಣೆ: ಬಳ್ಳಾರಿ ಉಪಚುನಾವಣೆಯಲ್ಲಿ ಉಗ್ರಪ್ಪ ಗೆಲುವಿನ ಹಿಂದೆ ಇದ್ದಿದ್ದು ಡಿಕೆಶಿ ಅವರ ರಣತಂತ್ರ. ಇನ್ನು ರಾಮನಗರದಲ್ಲಿ ಬಿಜೆಪಿ ಗೆಲ್ಲುವುದು ಅತಿ ಕಷ್ಟ ಎಂದು ಗೊತ್ತೊಇದ್ದರೂ ಬಿಜೆಪಿ ಅಭ್ಯರ್ಥಿಯನ್ನೇ ಆಪರೇಶನ್ ಮಾಡಿಸಿದ್ದು ಡಿಕೆ ಬ್ರದರ್ಸ್. 

Goodbye 2018 The Real champion of Karnataka politics Minister DK Shivakumar

ಸುರಕ್ಷಾ ಕವಚ: ಡಿಕೆ ಶಿವಕುಮಾರ್ ದೋಸ್ತಿ ಸರ್ಕಾರದ ಸುರಕ್ಷಾ ಕವಚದಂತೆ ಕಾರ್ಯ ನಿರ್ವಹಿಸಕೊಂಡು ಬಂದಿದ್ದಾರೆ. ಯಾವುದೆ ಕ್ಷಣದಲ್ಲಿ ಆತಂಕ ಎದುರಾಗುತ್ತದೆ ಎಂದಾಗ ಸ್ವತಃ ಕಾಂಗ್ರೆಸ್ ಹೈ ಕಮಾಂಡ್ ಡಿಕೆಶೀಗೆ ಜವಾಬ್ದಾರಿ ನೀಡುತ್ತದೆ.

 

Latest Videos
Follow Us:
Download App:
  • android
  • ios