ಚಾಮರಾಜನಗರ: ಸುವರ್ಣ ನ್ಯೂಸ್ ಇಂಪ್ಯಾಕ್ಟ್, ರೋಗಕ್ಕೆ ತುತ್ತಾದ ಮಕ್ಕಳ ಭೇಟಿಯಾದ ಸಚಿವ ಗುಂಡೂರಾವ್

ಚಿಕಿತ್ಸೆಗೆ ಅಗತ್ಯವಿರುವ ವೈದ್ಯಕೀಯ ನೆರವು, ಚಿಕಿತ್ಸೆ ವೆಚ್ಚ ಒದಗಿಸುವ ಭರವಸೆ ಕೊಟ್ಟಿದ್ದಾರೆ. ಹಾಗೂ ಸರ್ಕಾರದ ಮಟ್ಟದಲ್ಲಿ ಚರ್ಚಿಸಿ ಪರಿಹಾರ ಕೊಡಿಸುವುದಾಗಿ ಭರವಸೆ ನೀಡಿದ ಸಚಿವ ದಿನೇಶ್ ಗುಂಡೂರಾವ್ 

Minister Dinesh Gundu Rao Met the Children Affected by the Skin Disease in Chamarajanagara grg

ವರದಿ - ಪುಟ್ಟರಾಜು. ಆರ್.ಸಿ. ಏಷಿಯಾನೆಟ್ ಸುವರ್ಣ ನ್ಯೂಸ್, ಚಾಮರಾಜನಗರ

ಚಾಮರಾಜನಗರ(ಸೆ.23):  ಜಿಲ್ಲೆಯ ಹನೂರು ಭಾಗದಲ್ಲಿ  ವಿಚಿತ್ರ ಚರ್ಮ ರೋಗ ಕಾಣಿಸಿಕೊಂಡಿತ್ತು. ಸುದ್ದಿ ತಿಳಿದ ಕೊಡಲೆ ಏಷಿಯಾನೆಟ್ ಸುವರ್ಣ ನ್ಯೂಸ್‌ನ ಕವರ್ ಸ್ಟೋರಿ ತಂಡ ಕರಟ್ಟಿ ಹೊಸೂರು ಗ್ರಾಮಕ್ಕೆ ತೆರಳಿ ನಾಲ್ವರು ಮಕ್ಕಳಲ್ಲಿ ಮೈ ಚರ್ಮವೆಲ್ಲ ಚುಕ್ಕೆಗಳಾಗಿ ಪರಿವರ್ತನೆಯಾಗಿದ್ದ ರೋಗ ಲಕ್ಷಣದ ಬಗ್ಗೆ ಸಮಗ್ರ ವರದಿ ಬಿತ್ತರಿಸಿತ್ತು ಇದರಿಂದ ಎಚ್ಚೆತ್ತ ಆರೋಗ್ಯ ಇಲಾಖೆ ಮಕ್ಕಳಿಗೆ ಚಿಕಿತ್ಸೆ ಕೊಡಿಸುವ ಕೆಲಸಕ್ಕೆ ಮುಂದಾಗಿತ್ತು. ಈಗ ಈ ವಿಚಿತ್ರ ಚರ್ಮ ರೋಗ ಕಾಣಿಸಿಕೊಂಡಿರುವ ಮಕ್ಕಳ ಆರೋಗ್ಯ ವಿಚಾರಿಸಲು, ಕುಟುಂಬಸ್ಥರಿಗೆ ಧೈರ್ಯ ತುಂಬಲು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಭೇಟಿ ಕೊಟ್ಟಿದ್ರು. ಕವರ್ ಸ್ಟೋರಿಯ ಇಪ್ಯಾಕ್ಟ್  ಕುರಿತ ಒಂದು ಕಂಪ್ಲೀಟ್ ರಿಪೋರ್ಟ್ ಇಲ್ಲಿದೆ ನೋಡಿ..

ಹೌದು, ಗಡಿಜಿಲ್ಲೆ ಚಾಮರಾಜನಗರದಲ್ಲಿ ವಿಚಿತ್ರ ಚರ್ಮ ರೋಗ ಕಾಣಿಸಿಕೊಂಡಿತ್ತು.ವಿಚಿತ್ರ ಚರ್ಮರೋಗದಿಂಂದ  ನಾಲ್ವರು ಮಕ್ಕಳು ಬಳಲುತ್ತಿದ್ದರು.ಚಾಮರಾಜನಗರ ಜಿಲ್ಲೆ ಹನೂರು ತಾಲೋಕಿನ ಕುರಟ್ಟಿ ಹೊಸೂರು ಹಾಗೂ ಭದ್ರಯ್ಯನಹಳ್ಳಿಯಲ್ಲಿ ಕಾಣಿಸಿಕೊಂಡಿದ್ದ ವಿಚಿತ್ರ ಚರ್ಮ ರೋಗದ ಬಗ್ಗೆ ಏಷಿಯಾನೆಟ್ ಸುವರ್ಣ ನ್ಯೂಸ್ ನ  ಕವರ್ ಸ್ಟೋರಿ ತಂಡ ಸಮಗ್ರ ವರದಿ ಬಿತ್ತರಿಸಿ ಆರೋಗ್ಯ ಸಚಿವರ ಗಮನ ಸೆಳೆದಿತ್ತು. ಕಳೆದ 20-25 ವರ್ಷಗಳ ಹಿಂದೆಯು ಕೆಲವು ಮಕ್ಕಳಿಗೆ ಕಾಣಿಸಿಕೊಂಡಿದ್ದ ಚರ್ಮವ್ಯಾಧಿ.ಆರು ತಿಂಗಳ ಮಗುವಾಗಿದ್ದಾಗಲೇ ಕಾಣಿಸಿಕೊಳ್ಳುತ್ತಿರುವ ಚರ್ಮರೋಗ.ಬಳಿಕ ಮೈ ಚರ್ಮವೆಲ್ಲಾ ಚುಕ್ಕಿಗಳಾಗಿ ಪರಿವರ್ತನೆಯಾಗ್ತಿದೆ.ಕಾಲಕ್ರಮೇಣ ದೃಷ್ಟಿ ದೋಷ, ಶ್ರವಣದೋಷ ಉಂಟಾಗಿ ಮಾರಣಾಂತಿಕವಾಗಿದ್ದ ಕಾಯಿಲೆ.ವೈದ್ಯ ಲೋಕಕ್ಕೂ ಕೂಡ ಸವಾಲ್ ಆಗಿದೆ.ಈ ಕಪ್ಪು ಚುಕ್ಕೆ ರೋಗಕ್ಕೆ ಯಾವುದೇ ಚಿಕಿತ್ಸೆ ಕೂಡ ಇಲ್ಲ. ಈ ಹಿನ್ನಲೆ ಮಕ್ಕಳ ಆರೋಗ್ಯ ವಿಚಾರಣೆಗೆ ಜಿಲ್ಲಾಡಳಿತ, ಆರೋಗ್ಯ ಇಲಾಖೆ ಸೇರಿದಂತೆ ತಜ್ಞರ ತಂಡ ಕೂಡ ಭೇಟಿ ಕೊಟ್ಟಿತ್ತು. ಈ ರೋಗವನ್ನು ವಿಶೇಷ ಪ್ರಕರಣವೆಂದು ಪರಿಗಣಿಸಿರುವ ಆರೋಗ್ಯ ಇಲಾಖೆ ಚಿಕಿತ್ಸೆ, ಬಟ್ಟೆ ಹಾಗೂ ಕ್ರೀಮ್ ಕೊಡುವ ಕೆಲಸಕ್ಕೆ ಮುಂದಾಗಿತ್ತು. ಇದೀಗ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಖುದ್ದು ಭೇಟಿ ನೀಡಿ ಮಕ್ಕಳ ಆರೋಗ್ಯವನ್ನ ವಿಚಾರಿಸಿದ್ದಾರೆ. 

ಕಾಂಗ್ರೆಸ್‌ ಶಕ್ತಿ ಯೋಜನೆ ದುರುಪಯೋಗ ಮಾಡಿಕೊಂಡ ತಮಿಳುನಾಡು ಮಹಿಳೆ: ಕೊಳ್ಳೇಗಾಲದಲ್ಲಿ ಅಂದರ್

ಇನ್ನೂ ಈ ವಿಚಿತ್ರ ಚರ್ಮ ರೋಗಕ್ಕೆ ಯಾವುದೇ ನಿಖರ ಕಾರಣಗಳು ಪತ್ತೆಯಾಗಿಲ್ಲ. ಏಷಿಯಾನೆಟ್ ಸುವರ್ಣ ನ್ಯೂಸ್ ನ ಕವರ್ ಸ್ಟೋರಿಯಲ್ಲಿ  ಸುದ್ದಿಯಾದ ಬಳಿಕ ಆರೋಗ್ಯ ಸಚಿವರು ಕೂಡ ಆಗಮಿಸಿ ರೋಗಿಗಳ ಸ್ಥಿತಿಗತಿ ಅವಲೋಕಿಸಿದ್ದಾರೆ. ಈ ಖಾಯಿಲೆ ಮುಂದೆ ಬರದಂತೆ ತಡೆಯುವಲ್ಲಿ ಮುನ್ನೆಚ್ಚರಿಕೆ ಕ್ರಮ ವಹಿಸಿವಂತೆ ಇಲಾಖಾ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ರೋಗದಿಂದ ಬಳಲುತ್ತಿದ್ದವರಿಗೆ  ಪಿಂಚಣಿ ಸೌಲಭ್ಯ ಕೊಟ್ಟಿದ್ದಾರೆ. ಆದ್ರೆ ಚಿಕಿತ್ಸೆಗೆ ಅಗತ್ಯವಿರುವ ವೈದ್ಯಕೀಯ ನೆರವು, ಚಿಕಿತ್ಸೆ ವೆಚ್ಚ ಒದಗಿಸುವ ಭರವಸೆ ಕೊಟ್ಟಿದ್ದಾರೆ. ಹಾಗೂ ಸರ್ಕಾರದ ಮಟ್ಟದಲ್ಲಿ ಚರ್ಚಿಸಿ ಪರಿಹಾರ ಕೊಡಿಸುವುದಾಗಿ ಭರವಸೆ ನೀಡಿದ್ದಾರೆ ಹಾಗಾಗಿ ಸುವರ್ಣ ನ್ಯೂಸ್ ನ ಕವರ್ ಸ್ಟೋರಿಗೆ ಧನ್ಯವಾದ ಹೇಳುತ್ತಿದ್ದಾರೆ ಪೋಷಕರು. 

ಒಟ್ನಲ್ಲಿ ಈ ವಿಚಿತ್ರ ಚರ್ಮರೋಗ ಇದೀಗ ವೈದ್ಯಲೋಕಕ್ಕೆ ದೊಡ್ಡ ಸವಾಲ್ ಆಗಿದ್ದು,ಮಕ್ಕಳು ಬೆಳಕಿಗೆ ಬರಲೂ ಸಾಧ್ಯವಿಲ್ಲ. ಒಂದು ವೇಳೆ ಮನೆಯಿಂದ ಹೊರಬಂದ್ರೆ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತೆ.ದೇಶ,ವಿದೇಶದಲ್ಲೂ ಕೂಡ ಈ ಚರ್ಮರೋಗಕ್ಕೆ ಪರಿಹಾರ ಹುಡುಕುವ ಕೆಲಸ ನಡೀತಿದೆ, ಆದಷ್ಟು ಬೇಗ ಈ ಚರ್ಮ ರೋಗಕ್ಕೆ ಔಷದಿ ಕಂಡು ಹಿಡಿದು ಮಕ್ಕಳು ಗುಣಮುಖರಾಗಲಿ ಎನ್ನುವುದೇ ಏಷಿಯಾನೆಟ್ ಸುವರ್ಣ ನ್ಯೂಸ್ ನ ಕವರ್ ಸ್ಟೋರಿಯ ಆಶಯ. ಇದು ಕವರ್ ಸ್ಟೋರಿಯ ಬಿಗ್ ಇಪ್ಯಾಕ್ಟ್...

Latest Videos
Follow Us:
Download App:
  • android
  • ios