ಲಾಕ್‌ಡೌನ್‌: ಉಳುಮೆ ಮಾಡಿದ ಸಚಿವ ಸಿ.ಟಿ. ರವಿ

ಕೊರೋನಾ ವೈರಸ್‌ ನಿಯಂತ್ರಣ ಹಿನ್ನಲೆ ಜಿಲ್ಲೆಯಲ್ಲಿ ನಿರಂತರವಾಗಿ ಪ್ರವಾಸ ಮಾಡುತ್ತಿದ್ದ ಜಿಲ್ಲಾ ಉಸ್ತುವಾರಿ ಸಚಿವ ಸಿ.ಟಿ. ರವಿ ಅವರು ಮಂಗಳವಾರ ಕೊಂಚ ರಿಲ್ಯಾಕ್ಸ್‌ ಮೂಡ್‌ನಲ್ಲಿದ್ದರು.

 

minister ct ravi plowing during lockdown

ಚಿಕ್ಕಮಗಳೂರು(ಏ.08): ಕೊರೋನಾ ವೈರಸ್‌ ನಿಯಂತ್ರಣ ಹಿನ್ನಲೆ ಜಿಲ್ಲೆಯಲ್ಲಿ ನಿರಂತರವಾಗಿ ಪ್ರವಾಸ ಮಾಡುತ್ತಿದ್ದ ಜಿಲ್ಲಾ ಉಸ್ತುವಾರಿ ಸಚಿವ ಸಿ.ಟಿ. ರವಿ ಅವರು ಮಂಗಳವಾರ ಕೊಂಚ ರಿಲ್ಯಾಕ್ಸ್‌ ಮೂಡ್‌ನಲ್ಲಿದ್ದರು.

ನಗರದ ರಾಮನಹಳ್ಳಿ ಬಡಾವಣೆಯಲ್ಲಿ ಫಾರಂ ಹೌಸ್‌ ಇದ್ದು, ಇಲ್ಲಿ ಎರಡು ಎಕರೆ ತೆಂಗಿನ ತೋಟ ಇದೆ. ಸೋಮವಾರ ಈ ಭಾಗದಲ್ಲಿ ಸುಮಾರು ಅರ್ಧ ಗಂಟೆಗೂ ಹೆಚ್ಚು ಕಾಲ ಮಳೆ ಬಂದಿದ್ದು, ಭೂಮಿ ಹದವಾಗಿದೆ.

ಮೂರು ಚಿರತೆಗಳು ಪ್ರತ್ಯಕ್ಷ: ಸ್ಥಳೀಯರಲ್ಲಿ ಆತಂಕ

ಮಂಗಳವಾರ ಬೆಳಗ್ಗೆ ಸಿ.ಟಿ. ರವಿ ಅವರು ಟ್ರ್ಯಾಕ್ಟರ್‌ ಮೂಲಕ ಭೂಮಿಯನ್ನು ಉಳುಮೆ ಮಾಡುತ್ತ ಕೃಷಿ ಚಟುವಟಿಕೆಯಲ್ಲಿ ಪಾಲ್ಗೊಂಡಿದ್ದರು. ಚಿಕ್ಕಮಗಳೂರಿನಲ್ಲಿರುವ ತಮ್ಮ ಫಾರಂ ಹೌಸ್‌ನಲ್ಲಿರುವ ತೆಂಗಿನ ತೋಟದಲ್ಲಿ ಸಚಿವ ಸಿ.ಟಿ. ರವಿ ಅವರು ಟ್ರ್ಯಾಕ್ಟರ್‌ ಮೂಲಕ ಉಳುಮೆ ಮಾಡುತ್ತಿರುವುದು.

Latest Videos
Follow Us:
Download App:
  • android
  • ios