ರಾಜ್ಯ ರಾಜಕೀಯದಲ್ಲಿ ದಿನದಿನಕ್ಕೂ ಹೊಸ ಹೊಸ ಬದಲಾವಣೆಗಳಾಗುತ್ತಲೇ ಇದೆ. ಇದೀಗ ಸಿಪಿ ಯೋಗೇಶ್ವರ್ ಚಾಮುಂಡಿ ಬೆಟ್ಟಕ್ಕೆ ಭೇಟಿ ನೀಡಿ ಪುತ್ರನ ಜೊತೆ  ಬಿಜೆಪಿ ಸಂಸದರನ್ನು ಭೇಟಿ ಮಾಡಿದ್ದಾರೆ. 

 ಮೈಸೂರು (ಮಾ.03): ನನ್ನ ಕುಟುಂಬದಿಂದ ಯಾರೂ ರಾಜಕೀಯಕ್ಕೆ ಬರಲ್ಲ. ನಾನು ಕುಟುಂಬ ರಾಜಕಾರಣ ಮಾಡಲ್ಲ ಎಂದು ಪ್ರವಾಸೋದ್ಯಮ ಸಚಿವ ಸಿ.ಪಿ. ಯೋಗೇಶ್ವರ್‌ ಸ್ಪಷ್ಟಪಡಿಸಿದರು. 

ಮೈಸೂರಿನ ಚಾಮುಂಡಿಬೆಟ್ಟಕ್ಕೆ ಮಂಗಳವಾರ ಪುತ್ರ ಶ್ರವಣ್‌ ಜೊತೆಗೆ ಭೇಟಿ ನೀಡಿ ಚಾಮುಂಡೇಶ್ವರಿ ದರ್ಶನ ಪಡೆದ ಬಳಿಕ ಮಾತನಾಡಿದ ಅವರು, ತಾಯಿ ಚಾಮುಂಡೇಶ್ವರಿ ದರ್ಶನ ಪಡೆಯಲು ಪುತ್ರನನ್ನು ಕರೆದುಕೊಂಡು ಬಂದಿದ್ದೇನೆ ಎಂದರು. 

ಹಾಗೆಯೆ, ವಿ. ಶ್ರೀನಿವಾಸಪ್ರಸಾದ್‌ ಅವರನ್ನು ಭೇಟಿ ಮಾಡಿಸಲು ಬಂದಿದ್ದೇನೆ. ನನ್ನ ಮಗ ರಾಜಕೀಯಕ್ಕೆ ಬರಲ್ಲ ಎಂದು ತಿಳಿಸಿದರು.

ಜಾರಕಿಹೊಳಿ ರಾಸಲೀಲೆ ಬೆನ್ನಲ್ಲೇ ಎಚ್‌ಡಿಕೆಯಿಂದಲೂ ಸಿಡಿ ಮ್ಯಾಟರ್ ಸವಾಲು

ಇನ್ನು ಮೈಸೂರಿನಲ್ಲಿ ಬಿಜೆಪಿ ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡಿದ ಸಿಪಿ ಯೋಗೇಶ್ವರ್ ಮತ್ತೆ ಬಿಜೆಪಿ ಸರ್ಕಾರ ಶ್ರಮಿಸಬೇಕು ಎಂದು ಕರೆ ನೀಡಿದರು.